Home ಧಾರ್ಮಿಕ ಸುದ್ದಿ ಕನಕೋಡ ಪಂಡರೀನಾಥ ಭಜನ ಮಂದಿರ ಪುನಃ ಪ್ರತಿಷ್ಠೆ-ಬ್ರಹ್ಮಕುಂಭಾಭಿಷೇಕ ಧಾರ್ಮಿಕ ಸಭೆ

ಕನಕೋಡ ಪಂಡರೀನಾಥ ಭಜನ ಮಂದಿರ ಪುನಃ ಪ್ರತಿಷ್ಠೆ-ಬ್ರಹ್ಮಕುಂಭಾಭಿಷೇಕ ಧಾರ್ಮಿಕ ಸಭೆ

ಹಿಂದೂ ಸಮಾಜದ ದೊಡ್ಡ ಸಂಪತ್ತು ಮೊಗವೀರರು : ರಾಜಶೇಖರಾನಂದ ಸ್ವಾಮೀಜಿ

649
0
SHARE

ಕಟಪಾಡಿ : ಭಜನೆಯಿಂದ ಭಗವಂತನನ್ನು ಒಲಿಸಿಕೊಳ್ಳುವ ಸತ್ಪಥದಲ್ಲಿ ಸಾಗುವ ಮೊಗವೀರರು ಹಿಂದೂ ಸಮಾಜದ ದೊಡ್ಡ ಸಂಪತ್ತು ಎಂದು ಶ್ರೀ ಕ್ಷೇತ್ರ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಮಂಗಳವಾರ ಉದ್ಯಾವರ ಪಡುಕರೆ ಕನಕೋಡ ಶ್ರೀ ಪಂಡರೀನಾಥ ಭಜನಾ ಮಂದಿರದ ಅಷ್ಟೋತ್ತರ ಕಲಶಾಭಿಷೇಕ ಪೂರ್ವಕ ಬ್ರಹ್ಮ ಕುಂಭಾಭಿಷೇಕದ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.

ಶರೀರ ಪ್ರಕೃತಿ ಜನ್ಯ. ಭಯ ಇಲ್ಲವಾದಲ್ಲಿ ಬದುಕು ಶೃಂಗಾರವಾಗದು. ಸಾವನ್ನು ಜಯಿಸಲು ಭಗವಂತನ ಸ್ಮರಣೆ ಮಾಡಬೇಕು. ಇಂದು ನೀವು ಆರಾಧಿಸುವ ಶ್ರೀ ಪಾಂಡುರಂಗ ಮಾತ್ರವೇ ಭಕ್ತಾಧೀನ. ಬದುಕಿನ ಹುಟ್ಟು, ನಡೆ, ಪಥವು ಸತ್ಯವೇ ಆಗಿದೆ. ಭಗವಂತನನ್ನು ಒಲಿಸುವ ಭಜನೆ ಸಂಕೀರ್ತನೆಯಿಂದ ಬದುಕು ಉದ್ಧಾರವಾಗಲಿದೆ. ಹಾಗಾಗಿ ಭಗವಂತನೊಂದಿಗೆ ಬದುಕು ಕಟ್ಟಿಕೊಳ್ಳುವಂತೆ ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಲಾಲಾಜಿ ಆರ್‌.ಮೆಂಡನ್‌ ಮಾತನಾಡಿ, ಸ್ವಾತಂತ್ರ್ಯ ಪೂರ್ವದ ಧಾರ್ಮಿಕ ಮಂದಿರವಾಗಿ ಶ್ರೀ ಪಂಡರೀನಾಥ ಭಜನ ಮಂದಿರ 80ರ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಶಾಸಕನಾಗಿದ್ದ ಸಂದರ್ಭ ಅನುದಾನವನ್ನು ಒದಗಿಸಿದ ತೃಪ್ತಿ ಇದೆ. ಶಿಕ್ಷಣದ ಜೊತೆಗೆ ಧಾರ್ಮಿಕ ಶ್ರದ್ಧಾ ಭಕ್ತಿ ಮೈಗೂಡಿಸಿಕೊಂಡು, ಸಂಸ್ಕೃತಿಯನ್ನು ಇನ್ನಷ್ಟು ಮೆರೆಸುವಂತೆ ವಿಜ್ಞಾಪಿಸಿದರು.

ಶ್ರೀ ಪಂಡರೀನಾಥನ ಪುನಃಪ್ರತಿಷ್ಟೆ, ಅಷ್ಟೋತ್ತರ ಕಲಶಾಭಿಷೇಕ ಪೂರ್ವಕ ಬ್ರಹ್ಮ ಕುಂಬಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದ ವಿದ್ವಾನ್‌ ಬಾಲಕೃಷ್ಣ ಭಟ್‌ ಕಾನಂಗಿ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ 80ರ ಸಂಭ್ರಮ -ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಆನಂದ ಪಿ.ಸುವರ್ಣ, ಅಧ್ಯಕ್ಷ ಜ್ಞಾನೇಶ್ವರ ಕೋಟ್ಯಾನ್‌, ಉಪಾಧ್ಯಕ್ಷ ಗೋವರ್ಧನ ಎ.ಸುವರ್ಣ ಮುಂಬಯಿ, ಯಶ್ಮೀ ಉಪಸ್ಥಿತರಿದ್ದರು. ಲಕ್ಷ್ಮಣ ಮೈಂದನ್‌ ಬೈಲಕೆರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here