ಕಾಣಿಯೂರು : ದೇಗುಲದ ಅಭಿವೃದ್ಧಿ ಕಾರ್ಯದಲ್ಲಿ ಊರ ಜನತೆ ಶ್ರದ್ಧೆ ಯಿಂದ ತೊಡಗಿಸಿಕೊಂಡಾಗ ಸರಕಾರದ ಅಥವಾ ಸಂಘ ಸಂಸ್ಥೆಗಳ ಸಹಕಾರ ಸಹಜವಾಗಿಯೇ ಒದಗಿ ಬರುವುದು ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎನ್.ಕೆ. ಜಗನ್ನಿವಾಸ ರಾವ್ ಹೇಳಿದರು.
ಅವರು ರಾಜ್ಯ ಸರಕಾರದ ಧರ್ಮಾದಾಯ ದತ್ತಿ ಇಲಾಖೆಯ ಅನುದಾನದೊಂದಿಗೆ ನಿರ್ಮಾಣ ಗೊಂಡ ಕುಂಬ್ಲಾಡಿ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಶಾಶ್ವತ ಚಪ್ಪರದ ಉದ್ಘಾಟನೆ ಯನ್ನು ನೆರವೇರಿಸಿ ಮಾತನಾಡಿದರು. ರಾಜ್ಯ ಅರೆಭಾಷೆ ಅಕಾಡೆಮಿ ಸದಸ್ಯ ಮಾಧವ ಗೌಡ ಬೆಳ್ಳಾರೆ ಮಾತನಾಡಿ, ಗ್ರಾಮೀಣ ಪರಿಸರದ ಸುಂದರ ದೇಗುಲಕ್ಕೆ ಸುಂದರವಾದ ಶಾಶ್ವತ ಚಪ್ಪರ ನಿರ್ಮಿಸಿಕೊಂಡ ಊರ ಜನತೆ ಶ್ಲಾಘನೀಯರು ಎಂದರು.
ಕುಂಬ್ಲಾಡಿ ಕುಕ್ಕೇನಾಥ ಬಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋನಪ್ಪ ಗೌಡ ಉಳವ ಅಧ್ಯಕ್ಷತೆ ವಹಿಸಿದ್ದರು. ನಾಲ್ಕಂಬ ಉಳ್ಳಾಲ್ತಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ನ್ಯಾಯವಾದಿ, ವೆಂಕಪ್ಪ ಗೌಡ ಮಾಚಿಲ ಅವರು ದೇಗುಲದ ಅಭಿವೃದ್ಧಿ ಕಾರ್ಯಗಳ ವಿವರಣೆ ನೀಡಿದರು.
ಸಿ.ಜೆ. ಚಂದ್ರಕಲಾ ಅರುವಗುತ್ತು ಮತ್ತು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು. ಪ್ರವೀಣ್ ಕುಂಟ್ಯಾನ ಸ್ವಾಗತಿಸಿ, ವಿಶ್ವನಾಥ ಅಂಬುಲ ವಂದಿಸಿದರು. ಕೆ.ವಿ. ಮಾಧವ ಕಾರ್ಯಕ್ರಮ ನಿರೂಪಿಸಿದರು.