Home ಧಾರ್ಮಿಕ ಸುದ್ದಿ ಕಂಬಳಿಮನೆ ಮೇರೊಂಜಿ ದೈವಸ್ಥಾನದ ಪ್ರತಿಷ್ಠಾ ಕಲಶ, ಧರ್ಮ ನಡಾವಳಿ

ಕಂಬಳಿಮನೆ ಮೇರೊಂಜಿ ದೈವಸ್ಥಾನದ ಪ್ರತಿಷ್ಠಾ ಕಲಶ, ಧರ್ಮ ನಡಾವಳಿ

521
0
SHARE

ಕಡಬ : ಬಿಳಿನೆಲೆ ಗ್ರಾಮದ ಕಂಬಳಿಮನೆ ಮೇರೊಂಜಿ ದೈವಗಳ ದೈವಸ್ಥಾನದಲ್ಲಿ ಕಂಬಳಿಮನೆ ಕುಟುಂಬದ ನಾಗ, ಧರ್ಮದೈವ ರುದ್ರಚಾಮುಂಡಿ ಮತ್ತು ಸಪರಿವಾರ ದೈವಗಳ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ಶ್ರೀ ದೈವಗಳ ಧರ್ಮ ನಡಾವಳಿ ಎ. 30ರಿಂದ ಮೇ 3ರ ತನಕ ಜರಗಿತು.

ದೈವಜ್ಞರಾದ ಶಶಿ ನಾಯರ್‌, ಅನಿಲ್‌ ತೋರತ್‌, ವಾಸ್ತುಶಿಲ್ಪಿ ಎಸ್‌.ಎಂ. ಪ್ರಸಾದ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ ಉಚ್ಚಿಲ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ದೈವಗಳ ಧರ್ಮನಡಾವಳಿ ಜರಗಿತು. ಎ. 30ರಂದು ಸಂಜೆ ತಂತ್ರಿಗಳನ್ನು ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಮೇ 1ರಂದು ಬೆಳಗ್ಗೆ ಗಣಪತಿ ಹೋಮ, ತಿಲಾ ಹೋಮ, ಸಾಯುಜ್ಯ ಹೋಮ ನೆರವೇರಿತು.

ರಾತ್ರಿ ಬಿಂಬ ಜಲಾಧಿವಾಸ, ವಾಸ್ತುಬಲಿ ಸಹಿತ ಹಲವು ವೈದಿಕ ಕ್ರಿಯೆಗಳನ್ನು ನಡೆಸಲಾಯಿತು. ಮೇ 2ರಂದು ಬೆಳಗ್ಗೆ ಬಿಂಬ ಶುದ್ಧಿ, ಖನನಾದಿ ಸಪ್ತ ಶುದ್ಧಿ, ಶಾಂತಿ ಹೋಮ, ಸಾನ್ನಿಧ್ಯ ಕಲಶಹೋಮ ನೆರವೇರಿತು. ಪೂರ್ವಾಹ್ನ ಮಿಥುನ ಲಗ್ನ ಶುಭ ಮುಹೂರ್ತದಲ್ಲಿ ದೈವಗಳ ಪ್ರತಿಷ್ಠೆ, ನಾಗಪ್ರತಿಷ್ಠೆ, ಆಶ್ಲೇಷಾ ಬಲಿ, ಸಾನ್ನಿಧ್ಯ ಕಲಶಾಭಿಷೇಕ, ಮಹಾಪೂಜೆ ನೆರವೇರಿತು. ಮಧ್ಯಾಹ್ನ ಅನ್ನಸಂತರ್ಪಣೆಯ ಬಳಿಕ ನೇಮ ಜರಗಿತು. ಸಂಜೆ ಭಂಡಾರ ತೆಗೆದು ದೈವ ನರ್ತಕರಾದ ಸುಬ್ಬ ಪರವ ವಾಲ್ತಾಜೆ ನೆಟ್ಟಣ ಹಾಗೂ ಮುತ್ತಪ್ಪ ಅಜಲ ನೇಲಡ್ಕ ಐತ್ತೂರು ಅವರ ನೇತೃತ್ವದಲ್ಲಿ ಜಾವತೆ, ಕುಟುಂಬ ಪಾಶಾಣ ಮೂರ್ತಿ, ಅಜ್ಜಿ ಪಾಶಾಣ ಮೂರ್ತಿ, ವರ್ಣಾಲ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಮನಿಪಾಂತ್ನ ಪಂಜುರ್ಲಿ, ಪುರುದೈವ, ಮೈಯೊಂತಿ ದೇವತೆಗಳ ನೇಮ ನಡೆಯಿತು. ಮೇ 3ರಂದು ಬೆಳಗ್ಗೆ ಧರ್ಮದೈವ ರುದ್ರ ಚಾಮುಂಡಿ ನೇಮ ಜರಗಿತು. ಬಳಿಕ ದೈವಗಳ ಪ್ರಸಾದ ವಿತರಣೆ ನಡೆದು ಗುಳಿಗ ದೈವ (ರುದ್ರ ಚಾಮುಂಡಿ ಗುಳಿಗ), ರಾಹು ಗುಳಿಗ, ಅಂಗಾರ ಬಾಕುಡ ನೇಮ ನೆರವೇರಿತು.

ನಾಗ ಸಾನ್ನಿಧ್ಯ ಹಾಗೂ ದೈವಸ್ಥಾನ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ನಾರಾಯಣ ಗೌಡ ತರವಾಡುಮನೆ, ಅಧ್ಯಕ್ಷ ಬಾಲಕೃಷ್ಣ ಗೌಡ ವಾಲ್ತಾಜೆ, ಕಾರ್ಯದರ್ಶಿ ಸುನಂದ ಬಿ. ಒಗ್ಗು ಸಹಿತ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here