ಬೈಂದೂರು: ಶ್ರೀ ಗೋವಿಂದ ದೇವಸ್ಥಾನ ಕಂಬದಕೋಣೆ ಇದರ ವಿನೂತನ ಸುತ್ತುಪೌಳಿ,ತೀರ್ಥ ಮಂಟಪ, ರಾಜಗೋಪುರ ಲೋಕಾರ್ಪಣೆ ಗರುಡ ಪ್ರತಿಷ್ಠೆ, ಪುನರ್ ಪ್ರತಿಷ್ಟೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಕುಂಭಾಭಿಷೇಕ ಕಾರ್ಯಕ್ರಮ ಫೆ. 23ರಿಂದ ಫೆ. 25ರ ವರೆಗೆ ನಡೆಯಲಿದೆ.
ವೇ| ಮೂ| ಶ್ರೀಯಜ್ಞನಾರಾಯಣ ಸೋಮಯಾಜಿ ಅವರ ನೇತೃತ್ವದಲ್ಲಿ ಹಾಗೂ ತಿಮ್ಮಪ್ಪಯ್ಯ ಭಟ್ರ ಸಹಯೋಗದೊಂದಿಗೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಫೆ. 22ರಂದು ಹೊರೆಕಾಣಿಕೆ ಫೆ. 23, ಫೆ. 24ರಂದು ಧಾರ್ಮಿಕ ಕಾರ್ಯಕ್ರಮ ಅಷ್ಟಾವಧಿ ಸೇವೆ, ಬ್ರಹ್ಮಕಲಶ ಸ್ಥಾಪನೆ ಸಭಾ ಕಾರ್ಯಕ್ರಮ.
ಫೆ. 25ರಂದು ಬ್ರಹ್ಮಕಲಶಾಭಿಷೇಕ ಮಹಾಅನ್ನಸಂತರ್ಪಣೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.