ಬ್ರಹ್ಮಾವರ: ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಕಲ್ಯಾಣಪುರ ಸಂತೆಕಟ್ಟೆಯ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೆವಸ್ಥಾನದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪುತ್ತೂರು ಹಯವದನ ತಂತ್ರಿಗಳ ನೇತೃತ್ವದಲ್ಲಿ ದೃಢ ಕಲಶಾಭಿಷೇಕ ನಡೆಯಿತು.
ವೇ| ಮೂ| ಪುತ್ತೂರು ಮಧೂಸೂಧನ ತಂತ್ರಿ, ದೇವಸ್ಥಾನದ ವಾಸ್ತು ಮಾರ್ಗದರ್ಶಕ ವಿದ್ವಾನ್ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್, ಅರ್ಚಕ ರಾಮಕೃಷ್ಣನ್ ಉಪಾಧ್ಯಾಯ ಸಹಕರಿಸಿದರು.
ಧಾರ್ಮಿಕ ಸಭೆ
ಶಾಸಕ ಕೆ. ರಘುಪತಿ ಭಟ್ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಹಯವದನ ತಂತ್ರಿ ಅವರು ಶುಭಹಾರೈಸಿದರು. ಉದ್ಯಮಿ ಕೆ. ರಂಜನ್ ಕಲ್ಕೂರ, ಕರ್ನಾಟಕ ಸರಕಾರ ಸೆಕ್ರೆಟರಿಯೇಟ್ನ ಹಿರಿಯ ಸಹಾಯಕಿ ಅರುಂಧತಿ ಲಕ್ಷಿ¾àನಾರಾಯಣ್, ಸೂರತ್ನ ಹೊಟೇೆಲ್ ಉದ್ಯಮಿ ಶೇಖರ್ ಜಿ. ಪದ್ಮಶಾಲಿ, ಮುಂಬಯಿ ಯಸ್ ಬ್ಯಾಂಕ್ನ ಸೀನಿಯರ್ ಪ್ರಸಿಡೆಂಟ್ ಮತ್ತು ಕಂಪೆನಿ ಸೆಕ್ರೆಟರಿ ಶಿವಾನಂದ ಆರ್. ಶೆಟ್ಟಿಗಾರ್ ಅತಿಥಿಗಳಾಗಿದ್ದರು. ದೇವಸ್ಥಾನದ ಪ್ರಧಾನ ಮೊಕ್ತೇಸರ ಕೆ. ಜ್ಯೋತಿಪ್ರಸಾದ್ ವಿ. ಶೆಟ್ಟಿಗಾರ್ ಕಿನ್ನಿಮೂಲ್ಕಿ, ಶ್ರೀ ಬ್ರಹ್ಮಲಿಂಗೇಶ್ವರ ವೀರಭದ್ರ ಭಜನಾ ಮಂಡಳಿಯ ಅಧ್ಯಕ್ಷ ಪಿ. ದಯಾನಂದ ಶೆಟ್ಟಿಗಾರ್ ಲಿಂಗೊಟ್ಟುಗುಡ್ಡೆ, ಪದ್ಮಶಾಲಿ ಯುವ ವೇದಿಕೆಯ ಅಧ್ಯಕ್ಷ ಅಜಿತ್ ಕೆ. ಅಂಬಲಪಾಡಿ, ಶ್ರೀ ಆದಿಶಕ್ತಿ ಪದ್ಮಶಾಲಿ ಮಹಿಳಾ ವೇದಿಕೆಯ ಅಧ್ಯಕ್ಷೆ ವೇದಾವತಿ ತುಳಸೀದಾಸ್ ಕುಕ್ಕಿಕಟ್ಟೆ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸಿ. ಪ್ರಭಾಕರ್ ಸ್ವಾಗತಿಸಿ, ಕಟ್ಟಡ ನಿರ್ಮಾಣ ಸಮಿತಿಯ ಪ್ರಧಾನ ಸಂಚಾಲಕ ಗಣೇಶ್ ಕೆ. ಶೆಟ್ಟಿಗಾರ್ ಪುತ್ತೂರು ಪ್ರಸ್ತಾವನೆಗೈದರು. ಸ್ವತ್ಛತೆ ಮತ್ತು ಪರಿಸರ ಸಂರಕ್ಷಣಾ ಸಮಿತಿಯ ಪ್ರಧಾನ ಸಂಚಾಲಕ ಬಾಲಾಜಿ ಜ್ಯೋತಿಪ್ರಸಾದ್ ಶೆಟ್ಟಿಗಾರ್ ಕಿನ್ನಿಮುಲ್ಕಿ ಸಂದೇಶ ವಾಚಿಸಿದರು. ಸಂಘಟನಾ ಕಾರ್ಯದರ್ಶಿ ಸರೋಜಿನಿ ವಿಟuಲ್ ಶೆಟ್ಟಿಗಾರ್ ವಂದಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಸಗ್ರಿ ಮತ್ತು ಹೊರೆಕಾಣಿಕೆ ಸಮಿತಿ ಸಹ ನಿರ್ವಾಹಕ ವೆಂಕಟ ಶೆಟ್ಟಿಗಾರ್ ಶಾಂತಿನಗರ ಕಾರ್ಯಕ್ರಮ ನಿರೂಪಿಸಿದರು.