Home ಧಾರ್ಮಿಕ ಸುದ್ದಿ ಕಲ್ಯಾಣಪುರ ದೇಗುಲ: ಬ್ರಹ್ಮಕುಂಭಾಭಿಷೇಕ

ಕಲ್ಯಾಣಪುರ ದೇಗುಲ: ಬ್ರಹ್ಮಕುಂಭಾಭಿಷೇಕ

992
0
SHARE

ಬ್ರಹ್ಮಾವರ : ಕಲ್ಯಾಣಪುರ ಸಂತೆಕಟ್ಟೆ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ನವೀಕೃತ ಶಿಲಾಮಯ ದೇಗುಲ ಸಮರ್ಪಣೆ, ಪುನಃಪ್ರತಿಷ್ಠೆ ಪ್ರಯುಕ್ತ ಗುರುವಾರ ಬ್ರಹ್ಮಕಲಶೋತ್ಸವ ಜರಗಿತು. ಬೆಳಗ್ಗೆ ಬ್ರಹ್ಮಕುಂಭಾಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಗಳು ಎ. 27ರಂದು ಪ್ರಾರಂಭಗೊಂಡಿದ್ದು, ಪ್ರತಿನಿತ್ಯ ಧಾರ್ಮಿಕ ವಿಧಿವಿಧಾನ, ಸಾಂಸ್ಕೃತಿಕ ವೈವಿಧ್ಯ ಜರಗಿತು. ಮೇ 4ರಿಂದ 6ರ ವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ತುಲಾಭಾರ ಸೇವೆ, ಪರಿವಾರ ದೈವಗಳ ಪೂಜೆ, ಢಕ್ಕೆ ಬಲಿ ಜರಗಲಿದೆ.

LEAVE A REPLY

Please enter your comment!
Please enter your name here