ಉಡುಪಿ: ನಮ್ಮ ಗುರು ಸಕಲ ಜೀವ ರಾಶಿಗೆ ಜೀವಾತ್ಮ , ಮೋಕ್ಷದ ಕಡೆಗೆ ಕರೆದುಕೊಂಡು ಹೋಗುವ ಶಕ್ತಿ ಇದ್ದರೆ ಅದು ಅಂಜನೇಯನಿಂದ ಮಾತ್ರ. ನಿಮ್ಮ ಕಷ್ಟಗಳಿಗೆ ಅತೀ ಶೀಘ್ರದಲ್ಲಿ ಪರಿಹಾರ ನೀಡವಂತ ದೇವರು ಅಂಜನೇಯ ಅವನನ್ನು ಒಲಿಸಿಕೋಳ್ಳುವ ಶಕ್ತಿ ನಿಮ್ಮ ಭಕ್ತಿಗಿದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಅವರು ಜೂ.6ರಂದು ಕಲ್ಯಾಣಪುರ ಶ್ರೀ ಬಾಲ ಮಾರುತಿ ವ್ಯಾಯಾಮ ಶಾಲೆ ಇದರ ನೂತನ ಆಲಯವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಪ್ರದಾನ ಕಲಾ ಸಾನ್ನಿಧ್ಯ ಹೋಮ. ಶಿಖರ ಕಲಶ ಪ್ರತಿಷ್ಠಾ ಪೂರ್ವಕ ಅಷೋrತ್ತರ ಶತ ಬ್ರಹ್ಮ ಕುಂಬಾಭಿಷೇಕ, ಪ್ರಸನ್ನ ಪೂಜೆ ಮಹಾಪೂಜೆ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಮಹಾರಂಗ ಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಲಲಿತ್ ಕುಳಾಯಿ ಮತ್ತು ಬಳಗದವರಿಂದ ಭಕ್ತಿಭಾವ ಸಂಗೀತ ಮುಲ್ಕಿ ನವ ವೈಭವ ಕಲಾವಿದರಿಂದ ತುಳುನಾಡ ವೈಭವ ನಡೆಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯಶಪಾಲ ಸುವರ್ಣ ಅಧ್ಯಕ್ಷತೆ ವಹಿಸಿದರು.
ಶಾಸಕ ಕೆ. ರಘುಪತಿ ಭಟ್, ವೇ|ಮೂ ಪುತ್ತೂರು ಶ್ರೀನಿವಾಸ ತಂತ್ರಿ, ಸ್ಥಳ ದಾನಿ ತುಕರಾಮ ಹೆಗ್ಡೆ ಅವರ ಪುತ್ರಿ ಸೀಮಾ ಹೆಗ್ಡೆ , ಆಡಳಿತ ಸಮಿತಿ ಅಧ್ಯಕ್ಷ ಕೃಷ್ಣ ದೇವಾಡಿಗ ಉಪಸ್ಥಿತರಿದ್ದರು.ಸಚೀಂದ್ರ ಸ್ವಾಗತಿಸಿದರು. ಪ್ರ.ಕಾರ್ಯ ದರ್ಶಿ ಗಣೇಶ್ ಶೇರಿಗಾರ್ ವಂದಿಸಿದರು.