ಬೆಳ್ಮಣ್: ಸುಮಾರು 2 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪುನರ್ ನವೀಕರಣಗೊಂಡ ಕಲ್ಯಾ ಕೈರಬೆಟ್ಟು ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಬ್ರಹ್ಮಕಲಶಾಭಿಶೇಕ, ದರ್ಶನ ಸೇವೆ ಹಾಗೂ ಮಹಾ ಅನ್ನ ಸಂತರ್ಪಣೆ ರವಿವಾರ ನಡೆಯಿತು. ಎಲ್ಲೂರು ಸೀಮೆಯ ತಂತ್ರಿವರೇಣ್ಯರಾದ ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ಮಾರ್ಗದರ್ಶನದಲ್ಲಿ ಕ್ಷೇತ್ರ ಪುರೋಹಿತ ಕಲ್ಯಾ ಮಠ ಶ್ರೀಧರ ಉಪಾಧ್ಯಾಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಹಮ್ಮಾಯಿಗೆ, ಶ್ರೀ ಬ್ರಹ್ಮಬೈದರ್ಕಳ ಸ್ವಾಮಿಗೆ, ಮಾಯಿಂದಾಳಗೆ ಬ್ರಹ್ಮ ಕಲಶಾಭಿಶೇಕ, ದರ್ಶನ ಸೇವೆ ಹಾಗೂ ಆನ್ನ ಸಂತರ್ಪಣೆ ನಡೆಯಿತು.ಮುಂಬೈ ಹಾಗೂ ಊರಿನ ಸಮಿತಿಯ ಪದಾಧಿಕಾರಿಗಳು, ಸದಸ್ಯರಿದ್ದರು.
ಧರ್ಮರಸು ನೇಮ, ಅಗೇಲು ತಂಬಿಲ, ಕೊಡಮಣಿತ್ತಾಯ ನೇಮೋತ್ಸವವೂ ನಡೆ ಯಿತು. ಜನವರಿ 21ರಂದು ಬೆಳಿಗ್ಗೆ 7ಕ್ಕೆ ಅಂಗಾರೆ ಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರೆ 7ರಿಂದ ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವ ನಡೆಯಲಿದೆ.
ಜನವರಿ 22ರಂದು ಬೆಳಿಗ್ಗೆ 6.30ಕ್ಕೆ ಪುರುಷ ಕೋಲ, 8.30ಕ್ಕೆ ಮಾಯಿಂದಾಳ ನೇಮ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಭಂಡಾರ ನಿರ್ಗಮನ ನಡೆಯಲಿದೆ.