Home ಧಾರ್ಮಿಕ ಸುದ್ದಿ ಕಲ್ಮಂಜೆ ಶ್ರೀ ಮಹಾಲಿಂಗೇಶ್ವರ ದೇಗುಲ: ರಂಗಪೂಜೆ ಸಂಪನ್ನ

ಕಲ್ಮಂಜೆ ಶ್ರೀ ಮಹಾಲಿಂಗೇಶ್ವರ ದೇಗುಲ: ರಂಗಪೂಜೆ ಸಂಪನ್ನ

293
0
SHARE

ಕಟಪಾಡಿ: ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಣಿಪುರ ಕಲ್ಮಂಜೆ ಶ್ರೀ ಮಹಾಲಿಂಗೇಶ್ವರ ಶ್ರೀ ಬಲಮುರಿ ಶ್ರೀ ಮಹಾಗಣಪತಿ ದೇವರ ಪುನಃ ಪ್ರತಿಷ್ಠಾ ರಜತ ಮಹೋತ್ಸವದ ಅಂಗವಾಗಿ ರಾಜ್ಯ ಧಾರ್ಮಿಕ ಪರಿಷತ್‌ ಇದರ ಆಗಮ ಪಂಡಿತ ಎಲ್ಲೂರು ಸೀಮೆಯ ಬ್ರಹ್ಮಶ್ರೀ ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ವೇ|ಮೂ| ಕುತ್ಯಾರು ಗೋಪಾಲಕೃಷ್ಣ ತಂತ್ರಿ ಹಾಗೂ ಪ್ರಧಾನ ಅರ್ಚಕ ವೇ|ಮೂ| ಕಲ್ಮಂಜೆ ವೇದವ್ಯಾಸ ಉಪಾಧ್ಯಾಯರ ಸಹಕಾರದೊಂದಿಗೆ ಆಗಮೋಕ್ತ ವಿಧಿವಿಧಾನದೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ- ಮಹಾಅನ್ನಸಂತರ್ಪಣೆ ಹಾಗೂ ಶ್ರೀ ರಂಗಪೂಜಾ ಮಹೋತ್ಸವ ಸಂಪನ್ನಗೊಂಡಿತು.

ಆ ಪ್ರಯುಕ್ತ ಉದಯಾತ್‌ ಪೂರ್ವದಲ್ಲಿ ದ್ವಾದಶ ನಾಳಿಕೇರ ಗಣಯಾಗ, ಬ್ರಹ್ಮಕಲಶ ಪ್ರತಿಷ್ಠೆ, ಅಧಿವಾಸ ಹೋಮಗಳು, ಕಲಶಪೂಜೆ, ಕಲಶ ಬಲಿ, ಅನಂತರ 501 ಕಲಶಾಭಿಷೇಕ
ಪ್ರಾರಂಭಗೊಂಡಿದ್ದು, 11-22ರ ವೃಷಭಲಗ್ನ ಸುಮುಹೂರ್ತದಲ್ಲಿ 9-00 ಗಂಟೆಯಿಂದ ಶ್ರೀ ಮಹಾಲಿಂಗೇಶ್ವರ ದೇವರ ವಿಶುದ್ಧ ಸಾನ್ನಿಧ್ಯ ಸಮೃದ್ಧಿಗೋಸ್ಕರ ಪಂವಿಶಂತಿ ದ್ರವ್ಯಪೂರಿತ ಬ್ರಹ್ಮಕಲಶಾಭಿಷೇಕ ನೆರವೇರಿತು. ಸುಮಾರು 3,500ಕ್ಕೂ ಅಧಿಕ ಭಕ್ತರು ಮಹಾ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದು ಅನ್ನಪ್ರಸಾದವನ್ನು ಸ್ವೀಕರಿಸಿದರು.

ರಾತ್ರಿ ಉತ್ಸವನೃತ್ಯಬಲಿ, ಚಂದ್ರಮಂಡಲ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವೈ. ಸಖಾರಾಮ ಶೆಟ್ಟಿ, ಆಡಳಿತ ಮೊಕ್ತೇಸರ ಎಂ. ಪ್ರಕಾಶ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ ಆಚಾರ್ಯ, ಉಪಾಧ್ಯಕ್ಷ ದಯಾನಂದ ಶೆಟ್ಟಿ, ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿ, ಸ್ಥಳವಂದಿಗರು, ಊರ ಪರವೂರ ಹತ್ತು ಸಮಸ್ತರು ಭಗವದ್ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here