ಕಲ್ಲೇಗ: ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮವು ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ ಕಾರ್ಜಾಲುಗುತ್ತಿನಲ್ಲಿ ಸ್ಥಳ ಶುದ್ಧಿ ಹೋಮ, ಕಲಶ ಪ್ರತಿಷ್ಠ, ದೈವಸ್ಥಾನದಲ್ಲಿ ಗಣಹೋಮ, ಶ್ರೀ ದೈವಗಳ ತಂಬಿಲ, ನಾಗ ತಂಬಿಲ, ಮಧ್ಯಾಹ್ನ ದೈವಸ್ಥಾನದ ಬಳಿ ಅನ್ನಸಂತರ್ಪಣೆ, ರಾತ್ರಿ ಶ್ರೀ ದೈವಗಳ ಮೂಲನೆಲೆ ಕಾರ್ಜಾಲು ಗುತ್ತಿನಿಂದ ಭಂಡಾರ ಹೊರಟು, ಗೋಂದಲು ಪೂಜೆ, ಅನಂತರ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮ ನಡೆಯಿತು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಕಲ್ಲೇಗ, ಸದಸ್ಯರಾದ ಜಿನ್ನಪ್ಪ ಗೌಡ ಕಲ್ಲೇಗ, ಸುಜಾತಾ ಕೃಷ್ಣಪ್ಪ ಪೂಜಾರಿ ಶೇವಿರೆ, ಜಾನಕಿ ಬಾಲಕೃಷ್ಣ ಮುರ, ಸಂತೋಷ್ ಕುಮಾರ್ ಶೆಟ್ಟಿ, ಬಿ. ಪ್ರಶಾಂತ ಮುರ, ಕೆ. ಸತೀಶ ಶೆಟ್ಟಿ ಕಲ್ಲೇಗ, ಬಿ. ನವೀನಚಂದ್ರ ನಾೖಕ್ ಕೆ., ನಾರಾಯಣ ಮುಗೇರ ಪೆರಿಯತ್ತೋಡಿ, ನಗರಸಭಾ ಸದಸ್ಯ ಕೆ. ಜೀವಂಧರ ಜೈನ್, ಪ್ರಮುಖರಾದ ಕಲ್ಲೇಗ ಸಂಜೀವ ನಾಯಕ್, ಚಂದ್ರಶೇಖರ ಗೌಡ ಕಲ್ಲೇಗ, ದಿನೇಶ್ ಮುರ, ಅಣ್ಣಿ ಪೂಜಾರಿ ಪಟ್ಲ, ನಿತಿನ್ ಕಲ್ಲೇಗ, ಪ್ರಶಾಂತ್ ಅಜೇಯನಗರ, ಮಾಧವ ಪಟ್ಲ, ಜಿನ್ನಪ್ಪ ಪೂಜಾರಿ ಮುರ, ಗಂಗಾಧರ ಸಪಲ್ಯ ಉಪಸ್ಥಿತರಿದ್ದರು.
ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸಹಿತ ಹಲವು ಗಣ್ಯರು ಭೇಟಿ ನೀಡಿದರು.