Home ಧಾರ್ಮಿಕ ಸುದ್ದಿ ಕಲ್ಲಾರೆ ಮಠ: “ಮಾಣಿಕ್ಯೋತ್ಸವ’ಕ್ಕೆ ಹೊರೆಕಾಣಿಕೆ’

ಕಲ್ಲಾರೆ ಮಠ: “ಮಾಣಿಕ್ಯೋತ್ಸವ’ಕ್ಕೆ ಹೊರೆಕಾಣಿಕೆ’

1595
0
SHARE

ಪುತ್ತೂರು : ಇಲ್ಲಿನ ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರು ಸಾರ್ವಭೌಮರ ಬೃಂದಾವನ ಪ್ರತಿ ಷ್ಠಾಪನ “ಮಾಣಿಕ್ಯೋತ್ಸವ’ (ನಲವತ್ತನೇ ವರ್ಷ) ಮಾ. 25ರಿಂದ 31ರ ತನಕ ನಡೆಯಲಿದ್ದು, ಇದರ ಅಂಗವಾಗಿ ಶುಕ್ರವಾರ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಳಿಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಮೆರವಣಿಗೆಗೆ ಚಾಲನೆ
ಮೆರವಣಿಗೆಯನ್ನು ತೆಂಗಿನಕಾಯಿ ಒಡೆಯುವ ಮೂಲಕ ಶ್ರೀ ಮಹಾಲಿಂಗೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ ಉದ್ಘಾಟಿಸಿದರು. ರಾಯರ ಬೃಂದಾವನ ಪ್ರತಿಷ್ಠಾಪನೆಯಾಗಿ 40 ವರ್ಷ ಪೂರೈಸುತ್ತಿರುವ ಸಂದರ್ಭ ನೂರಾರು ಭಕ್ತರ ಸಹಕಾರದೊಂದಿಗೆ ಮಠದಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳು ಯಶಸ್ವಿ ಯಾಗಲಿ ಎಂದು ಹಾರೈಸಿದರು.

ಮಾಣಿಕ್ಯೋತ್ಸವ ಸಮಿತಿ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ, ಸಂಚಾಲಕ ಯು. ಪೂವಪ್ಪ, ಉಪಾಧ್ಯಕ್ಷರಾದ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್‌, ಸತೀಶ್‌ ನಾೖಕ್‌, ಪ್ರಧಾನ ಕಾರ್ಯದರ್ಶಿ ರಾಜೇಶ್‌ ಬನ್ನೂರು, ಕಾರ್ಯದರ್ಶಿ ಭಾಸ್ಕರ ಬಾರ್ಯ, ಪ್ರಮುಖರಾದ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ, ಅರುಣ್‌ ಕುಮಾರ್‌ ಪುತ್ತಿಲ, ಎಚ್‌. ಉದಯಕುಮಾರ್‌, ಚನಿಲ ತಿಮ್ಮಪ್ಪ ಶೆಟ್ಟಿ, ರಾಧಾಕೃಷ್ಣ ಬೋರ್ಕರ್‌, ಕೋಲ್ಪೆಗುತ್ತು ರಾಜಾರಾಮ ಶೆಟ್ಟಿ, ಯು. ಲೋಕೇಶ್‌ ಹೆಗ್ಡೆ, ಅಜಿತ್‌ ರೈ ಹೊಸಮನೆ, ಪುರುಷೋತ್ತಮ ಗೌಡ ಮುಂಗ್ಲಿಮನೆ, ನಯನಾ ರೈ, ಹರಿಣಾಕ್ಷಿ ಜೆ. ಶೆಟ್ಟಿ, ಪಾಂಡುರಂಗ ಹೆಗ್ಡೆ, ಪದ್ಮನಾಭ ಸಹಿತ ವಿವಿಧ ಸಮಿತಿಗಳ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.

ಅನಂತರ ಹಸಿರು ಹೊರೆಕಾಣಿಕೆ ಮೆರವ ಣಿಗೆ ವಿವಿಧ ವಾಹನಗಳೊಂದಿಗೆ ಮುಖ್ಯ ರಸ್ತೆಯಾಗಿ ಶ್ರೀ ರಾಘವೇಂದ್ರ ಮಠಕ್ಕೆ ತೆರಳಿತು. ಮಠದಲ್ಲಿ ಏಳು ದಿನಗಳ ಕಾಲ ಮಾಣಿಕ್ಯೋತ್ಸವ, ಅಷ್ಟಬಂಧ ಕಲಶಾ ಭಿಷೇಕ ಸಹಿತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

LEAVE A REPLY

Please enter your comment!
Please enter your name here