ನರಿಮೊಗರು : ಸರ್ವೆ ಗ್ರಾಮದ ಕಲ್ಲಮ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆ. 27ರಿಂದ ಆ. 29ರ ವರೆಗೆ ಶ್ರೀ ಗುರುರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವ ನಡೆಯಲಿದೆ. ಆ. 27ರ ಬೆಳಗ್ಗೆ ಪೂರ್ವಾರಾಧನೆ ಉಷಃಕಾಲ ಪೂಜೆ, ಅಭಿಷೇಕ, ಅಷ್ಟೋತ್ತರ ಮಹಾಪೂಜೆ, 8ರಿಂದ ನಂದಿಕೇಶ್ವರ ದೇವರಿಗೆ ಏಕದಶರುದ್ರಾಭಿಷೇಕ, ಸಂಜೆ 7ಕ್ಕೆ ಸತ್ಯನಾರಾಯಣ ಪೂಜೆ, ರಾತ್ರಿ 8ಕ್ಕೆ ರಂಗಪೂಜೆ, ಆನಂತರ ಮಹಾಮಂಗಳಾರತಿ, ಉತ್ಸವ ಪ್ರಸಾದ ವಿತರಣೆ ನಡೆಯಲಿದೆ.
ಆ. 28ರಂದು ಮಧ್ಯಾರಾಧನೆ. ಉಷಃ ಕಾಲ ಪೂಜೆ, ಪಂಚಾಮೃತ ಅಭಿಷೇಕ, ಸೀಯಾಳಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ
6.30ರಿಂದ ವೀರಮಂಗಲ ವೈಷ್ಣವಿ ಮಹಿಳಾ ಮಂಡಲದಿಂದ ಭಜನೆ, ರಾತ್ರಿ 9ಕ್ಕೆ ಮಹಾಮಂಗಳಾರತಿ, ಉತ್ಸವ, ಪ್ರಸಾದ ವಿತರಣೆ ನಡೆಯಲಿದೆ.
ಆ. 29ರಂದು ಉತ್ತರಾರಾಧನೆ. ಉಷಃ ಕಾಲ ಪೂಜೆ, ಅಭಿಷೇಕ, ಅಷ್ಟೋತ್ತರ ಮಹಾಪೂಜೆ, ಸಂಜೆ 6.30ಕ್ಕೆ ವೀರಮಂಗಲ ಆನಾಜೆ ಮಹಾವಿಷ್ಣು ಸೇವಾ ಸಮಿತಿಯಿಂದ
ಭಜನೆ, ರಾತ್ರಿ 8ಕ್ಕೆ ರಂಗಪೂಜೆ, ಉತ್ಸವ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.