Home ಧಾರ್ಮಿಕ ಸುದ್ದಿ ಕಲ್ಲುಬೆಟ್ಟು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ರಜತ ಕವಚ, ಮಹಾದ್ವಾರ ಸಮರ್ಪಣೆ

ಕಲ್ಲುಬೆಟ್ಟು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ರಜತ ಕವಚ, ಮಹಾದ್ವಾರ ಸಮರ್ಪಣೆ

1357
0
SHARE

ಪುಂಜಾಲಕಟ್ಟೆ : ಬಂಟ್ವಾಳ ತಾ| ಪಿಲಾತಬೆಟ್ಟು ಗ್ರಾಮದ ಕಲ್ಲುಬೆಟ್ಟು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವೇ| ಮೂ| ಬಾಲಕೃಷ್ಣ ಪಾಂಗಣ್ಣಾಯ
ನೇತೃತ್ವದಲ್ಲಿ ಯುಗಾದಿ ಉತ್ಸವ, ಚಂಡಿಕಾ ಹೋಮ, ರಜತ ಕವಚ-ಮಹಾದ್ವಾರ ಸಮರ್ಪಣೆ ಹಾಗೂ ಯಕ್ಷಗಾನ ಬಯಲಾಟವು ಎ. 6ರಂದು ಜರಗಿತು.

ಬೆಳಗ್ಗೆ ದೇವರ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಶ್ರೀ ಗಣಪತಿ ದೇವರಿಗೆ ರಜತ ಕವಚ ಸಮರ್ಪಣೆ, ಪಂಚಾಮೃತ
ಅಭಿಷೇಕ, ಅಲಂಕಾರ ಪೂಜೆ, ಮಧ್ಯಾಹ್ನ ಚಂಡಿಕಾಹೋಮ ಪೂರ್ಣಾಹುತಿ, ಮಂಗಳಾರತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

ಸಂಜೆ ಭಜನೆ, ನಿವೃತ್ತ ಗ್ರಾಮಕರಣಿಕ ಅಣ್ಣು ಪೂಜಾರಿ ಮೂರ್ಜೆ ಅವರ ಹೆತ್ತವರ ಸ್ಮರಣಾರ್ಥ ನಿರ್ಮಿಸಲಾದ ಮಹಾದ್ವಾರದ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಕಾವಳಮಾಗಣೆ ತಂತ್ರಿ ಗಣಪತಿ ಮುಚ್ಚಿನ್ನಾಯ ಅವರು ನೂತನ ದ್ವಾರವನ್ನು ಉದ್ಘಾಟಿಸಿದರು.

ರಂಗಪೂಜೆ, ಯಕ್ಷಗಾನ ರಾತ್ರಿ ರಂಗಪೂಜೆ, ಕಟೀಲು ಮೇಳದವ ರಿಂದ ಯಕ್ಷಗಾನ ಬಯಲಾಟ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಪ್ರದರ್ಶನಗೊಂಡಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ ಕಲ್ಲುಬೆಟ್ಟು, ಪ್ರಧಾನ ಅರ್ಚಕ ಗೋವಿಂದ ಭಟ್‌, ದ್ವಾರ ಕೊಡುಗೆ ನೀಡಿದ ಅಣ್ಣು ಪೂಜಾರಿ ಮತ್ತು ಮನೆಯವರು, ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ,ಯಕ್ಷಗಾನ ಸಮಿತಿ ಗೌರವಾಧ್ಯಕ್ಷ ನಾರಾಯಣ ಶೆಟ್ಟಿ ಕುಮಂಗಿಲ, ಅಧ್ಯಕ್ಷ ಪುಷ್ಪರಾಜ್‌ ಶೆಟ್ಟಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ರಾಜೇಂದ್ರ ಕೆ.ವಿ., ಮೋಹನ ಸಾಲ್ಯಾನ್‌, ರವೀಂದ್ರ ಶೆಟ್ಟಿ, ನೋಣಯ್ಯ ಮೂಲ್ಯ, ರಮೇಶ್‌ ನಾಯ್ಕ, ಲೀಲಾವತಿ ಪಿ. ಶೆಟ್ಟಿ, ಸುನೀತ ಹೆಗ್ಡೆ, ಯಕ್ಷಗಾನ ಸಮಿತಿಯ ಪದಾಧಿಕಾರಿಗಳಾದ ಧರ್ಣಪ್ಪ ಪೂಜಾರಿ, ಮಂಜಪ್ಪ ಮೂಲ್ಯ, ಜಾರಪ್ಪ ಪೂಜಾರಿ,
ಸುಂದರ ಶೆಟ್ಟಿ, ಪ್ರಕಾಶ್‌ ರಾವ್‌, ಶ್ರೀಧರ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here