ಮಹಾನಗರ: ಕಲ್ಕೂರ ಪ್ರತಿಷ್ಠಾನ ವತಿಯಿಂದ ಯುಗಾದಿ ಮಹೋತ್ಸವ, ವಿಷು ಕಣಿ, ಪಂಚಾಂಗ ಶ್ರವಣ ಕಾರ್ಯಕ್ರಮ ವೇ| ಮೂ| ಗಣಪತಿ ಆಚಾರ್ಯ ಅವರ ಆಚಾರ್ಯತ್ವದಲ್ಲಿ ರವಿವಾರ ಕದ್ರಿ ಕಂಬಳ ರಸ್ತೆಯ ಮಂಜುಪ್ರಸಾದ ನಿಲಯದ ವಾದಿರಾಜ ಮಂಟಪದಲ್ಲಿ ಜರಗಿತು.
ವೇ| ಮೂ| ಪ್ರಭಾಕರ ಅಡಿಗ ಪಂಚಾಂಗ ಶ್ರವಣ ಮಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಎಂ. ಬಿ. ಪುರಾಣಿಕ್, ಡಾ| ಪ್ರಭಾಕರ್ ಅಡಿಗ, ಕೆ. ಎಸ್. ಕಲ್ಲೂರಾಯ, ಪೊಳಲಿ ನಿತ್ಯಾನಂದ ಕಾರಂತ, ಸುಧಾಕರ್ ರಾವ್ ಪೇಜಾವರ, ಸತ್ಯ ಶಂಕರ ಬೊಳ್ಳ, ಜನಾರ್ದನ ಹಂದೆ, ಕೃಷ್ಣಮೂರ್ತಿ, ವಿಜಯಲಕ್ಷ್ಮೀ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಂಗೀತ ಕಾರ್ಯಕ್ರಮ
ಬಳಿಕ ಗೌರೀಶ್ ಭಟ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸದ್ಗುಣ ಐತಾಳ್ ಮೆಂಡೋಲಿನ್, ಮೃದಂಗದಲ್ಲಿ ಸುಮುಖ ಕಾರಂತ ಹಾಗೂ ವಯಲಿನ್ನಲ್ಲಿ ಗೌತಮ್ ಭಟ್ ಸಾಥ್ ನೀಡಿದರು.