ಪದ್ಮುಂಜ : ಪುರಾತನ ಕಲ್ಕುಡ ರಕ್ತೇಶ್ವರಿ ಕೊಡಮಣಿತ್ತಾಯ ಸಪರಿವಾರ ದೈವಗಳ ವಾರ್ಷಿಕ ಜಾತ್ರೆ ಬೆಳ್ತಂಗಡಿಯ ಪದ್ಮುಂಜ ಮಾಡದಲ್ಲಿ ಇತ್ತೀಚೆಗೆ ಜರಗಿತು. ಊರ ಪರವೂರ ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ, ವಿಜಯ ಕುಮಾರ್ ತಂತ್ರಿ ಅವರ ವೈದಿಕ ನೇತೃತ್ವದಲ್ಲಿ ಗಣಪತಿ ಹೋಮ ಆಶ್ಲೇಷಾ ಬಲಿ, ದೈವಗಳಿಗೆ ಕಲಶಾಭಿಷೇಕ, ಚಂಡಿಕಾ ಹೋಮ, ರಂಗಪೂಜೆ, ಸಪರಿವಾರ ದೈವಗಳಿಗೆ ನೇಮ ನಡೆಯಿತು.
ಕ್ಷೇತ್ರದ ಆಡಳಿತ ಮೊಕ್ತೇಸರ ಚಿದಾನಂದ ರಾವ್ ಕೊಲ್ಲಾಜೆ, ಟ್ರಸ್ಟನ ಅಧ್ಯಕ್ಷ ನಾರಾಯಣ ರಾವ್, ಪ್ರಮುಖರಾದ ಭುಜಂಗ ರೈ ಮುಗೆರೋಡಿ, ಸಂಪತ್ ಕುಮಾರ್ ಕೊಲ್ಲಾಜೆ, ಪ್ರಸನ್ನ ಕುಮಾರ್ ಜೈನ್, ಸೀತಾರಾಮ ಮಡಿವಾಳ, ರಘುಪತಿ ಭಟ್, ಹರೀಶ್ ಪೂಜಾರಿ ಮುಗೆರೋಡಿ, ಅವಿನಾಶ್ ರಾವ್, ಚಂದ್ರಕಾಂತ ರಾವ್, ಕುಂಞ ಮೂಲ್ಯ, ಹೇಮಾ ವೆುದಲಾದವರು ಉಪಸ್ಥಿತರಿದ್ದರು.
ಹೂವು-ಸೀರೆ ಸಮರ್ಪಣೆ
ಕಲ್ಕುಡ ರಕ್ತೇಶ್ವರಿ ಕೊಡಮಣಿತ್ತಾಯ ಕ್ಷೇತ ಬಹಳ ಕಾರಣಿಕವಾಗಿದ್ದು, ಹರಕೆ ಈಡೇರಿದ ಹಿನ್ನೆಲೆಯಲ್ಲಿ ಭಕ್ತರು ಹೂವು ಹಾಗೂ ಸೀರೆಯನ್ನು ಸಮರ್ಪಿಸಿ, ದೈವದ ಕೃಪೆಗೆ ಪಾತ್ರರಾದರು. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ ಮೇಲೆ ತಮ್ಮ ಕಷ್ಟಗಳೆಲ್ಲ ನಿವಾರಣೆಯಾದವು ಎಂದು ಗ್ರಾಮಸ್ಥರು ಹೇಳಿದ್ದಾರೆ.