Home ಧಾರ್ಮಿಕ ಸುದ್ದಿ ಕೊಕ್ಕಡ: ಕಲ್ಕುಡ ಕಲ್ಲುರ್ಟಿ ದೈವಸ್ಥಾನ ಹುಂಡಿ ಹಣ ಸಮರ್ಪಣೆ

ಕೊಕ್ಕಡ: ಕಲ್ಕುಡ ಕಲ್ಲುರ್ಟಿ ದೈವಸ್ಥಾನ ಹುಂಡಿ ಹಣ ಸಮರ್ಪಣೆ

378
0
SHARE

ಕೊಕ್ಕಡ : ಕೊಕ್ಕಡ ಗ್ರಾಮದ ಕೆಂಪಕೋಡಿ ಕಲ್ಕುಡ ಕಲ್ಲುರ್ಟಿ ದೈವಸ್ಥಾನ ಜೀರ್ಣೋದ್ಧಾರವಾಗಿ ಪುನರ್‌ ಪ್ರತಿಷ್ಠೆ ನಿಗದಿತ ಸಮಯಕ್ಕೆ ನಡೆಯದೆ ಇದ್ದುದರ ಪ್ರಾಯಶ್ಚಿತ್ತವಾಗಿ ಗ್ರಾಮದ ಪ್ರತೀ ಮನೆಯಿಂದ ಪುಂಡಿ ಪಣಾವನ್ನು ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಹರಿಪ್ರಸಾದ್‌ ವೈಲಾಯ ಅವರ ನೇತೃತ್ವದಲ್ಲಿ ಪ್ರಾರ್ಥಿಸಿ ಒಪ್ಪಿಸಲಾಯಿತು.

ಸಂಬಂಧಿತ ಗ್ರಾಮದ ಕುಡಲ, ಆಲಂಬಿಲ, ಉಪ್ಪಾರಬೈಲು, ಕೊಡಿಂಗೇರಿ, ಕೇಚೋಡಿ, ಪಿಜಿನಡ್ಕ, ಡೆಂಜ, ತಿಪ್ಪೆಮಜಲು, ಹಳ್ಳಿಂಗೇರಿ, ಆಲಡ್ಕ ಪ್ರದೇಶದ ದೈವಭಕ್ತರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಉಗ್ಗಪ್ಪ ಕರ್ಕೇರಾ, ಅಧ್ಯಕ್ಷ ಪಿ.ಕೆ. ನಾರಾಯಣ ಗೌಡ, ಪದಾಧಿಕಾರಿಗಳಾದ ಯೋಗೀಶ್‌ ಆಲಂಬಿಲ, ಯಶೋಧರ ಆಲಂಬಿಲ, ಶ್ರೀನಾಥ್‌ ಬಿ., ನವೀನ ಎ., ಗಿರಿಯಪ್ಪ ಗೌಡ, ಗಣೇಶ್‌ ಪುಟ್ಟಕೋಡಿ ಮತ್ತು ಬೈಲುವಾರು ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here