Home ಧಾರ್ಮಿಕ ಕಾರ್ಯಕ್ರಮ ಕಾಳಾವರ ಶ್ರೀ ಮಹಾಲಿಂಗೇಶರ ದೇಗುಲ ಪುನಃ ನಿರ್ಮಾಣ : ಮುಹೂರ್ತ ಪೂಜೆ

ಕಾಳಾವರ ಶ್ರೀ ಮಹಾಲಿಂಗೇಶರ ದೇಗುಲ ಪುನಃ ನಿರ್ಮಾಣ : ಮುಹೂರ್ತ ಪೂಜೆ

1772
0
SHARE

ಕೋಟೇಶ್ವರ : ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇಗುಲವನ್ನು ಶಿಲಾಮಯವಾಗಿ ಪುನಃ ನಿರ್ಮಾಣಗೊಳಿಸುವ ಬಗ್ಗೆ ಮುಹೂರ್ತ ಪೂಜೆ ಫೆ. 5ರಂದು ದೇಗುಲದ ಆವರಣದಲ್ಲಿ ಜರಗಿತು.

ವೇ| ಮೂ| ಕೃಷ್ಣ ಸೋಮಯಾಜಿ ಅವರ ನೇತೃತ್ವದಲ್ಲಿ ನಡೆದ ಕೆಸರು ಕಲ್ಲು ಮಹೂರ್ತದ ಸಂಕಲ್ಪದಲ್ಲಿ ಕಾಳಾವರ ದೇಗುಲದ ಆಡಳಿತ ಧರ್ಮದರ್ಶಿ ರವಿರಾಜ ಎನ್‌. ಶೆಟ್ಟಿ ಹಾಗೂ ಸಮಿತಿಯ ಸದಸ್ಯರಾದ ಸತ್ಯನಾರಾಯಣ ಪುರಾಣಿಕ, ಚಂದ್ರಶೇಖರ ಶೆಟ್ಟಿ, ಕಲಾವತಿ, ವರದ, ರತ್ನಾಕರ ಶೆಟ್ಟಿ, ಕೆ.ಕೆ. ಕಾಳಾವಾರ್‌ಕರ್‌ ಸಹಿತ ಅರ್ಚಕರು ಪಾಲ್ಗೊಂಡಿದ್ದರು.

ಸುಮಾರು 4 ಕೋಟಿ.ರೂ. ವೆಚ್ಚದಲ್ಲಿ ಶ್ರೀ ಮಹಾಲಿಂಗೇಶ್ವರ ಗರ್ಭಗುಡಿ, ಕಾಳಿಂಗ ಸುಬ್ರಹ್ಮಣ್ಯ ಗುಡಿ, ಸುತ್ತುಪೌಳಿ ಹಾಗೂ ತೀರ್ಥ ಮಂಟಪ ಪುನರ್‌ ನಿರ್ಮಾಣ ಕಾರ್ಯ ನಡೆಯಲಿದ್ದು ಭಕ್ತರ ಸಂಪೂರ್ಣ ಸಹಕಾರದೊಡನೆ ದೇಗುಲದ ಪುನರ್‌ ನಿರ್ಮಾಣದೊಡನೆ ಪ್ರತಿಷ್ಠಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಅನಂತರದ ಸರಿಸಮಾನವಾದ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿರುವ ಕಾಳಾವರ ದೇಗುಲದಲ್ಲಿ ವರ್ಷಂಪ್ರತಿ ನಡೆಯುವ ಹಿರಿ ಹಾಗೂ ಕಿರಿ ಷಷ್ಠಿಯಲ್ಲಿ ಲಕ್ಷಾಂತರ ಭಕ್ತರು ದಾಖಲೆಯ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಕ್ಷೇತ್ರದ ಮಹತ್ವವನ್ನು ಎತ್ತಿ ಹಿಡಿದಿದೆ.

ಈಗಾಗಲೇ ಶಿಲಾಮಯ ದೇಗುಲ ನಿರ್ಮಾಣಕ್ಕೆ ಭಕ್ತರೋರ್ವರು 10 ಲ.ರೂ. ಕಾಣಿಕೆ ರೂಪದಲ್ಲಿ ನೀಡುವುದಾಗಿ ಘೋಷಿಸಿದ್ದಾರೆ. ಕಾಳಾವರ ಸಹಿತ ಆಸುಪಾಸಿನ ಗ್ರಾಮಗಳ ಅನೇಕ ಗಣ್ಯರು ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಸಮಾಜ ಸೇವಕ ಕೋಣಿ ಕೃಷ್ಣದೇವ ಕಾರಂತ, ಮಾಜಿ ತಾ.ಪಂ. ಸದಸ್ಯ ದೀಪಕ್‌ ಕುಮಾರ್‌ ಶೆಟ್ಟಿ, ಅಶೋಕ ಕುಮಾರ್‌ ಶೆಟ್ಟಿ ಕಾಳಾವರ, ವಿಶ್ವನಾಥ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here