Home ಧಾರ್ಮಿಕ ಸುದ್ದಿ ಕಳತ್ತೂರು : ಋಕ್‌ ಸಂಹಿತಾ ಯಾಗ ಕುಂಡ ನಿರ್ಮಾಣಕ್ಕೆ ಶಿಲ್ಪ ಸಂಪ್ರದಾಯದಂತೆ ಇಷ್ಟಿಕೋಪದಾನ

ಕಳತ್ತೂರು : ಋಕ್‌ ಸಂಹಿತಾ ಯಾಗ ಕುಂಡ ನಿರ್ಮಾಣಕ್ಕೆ ಶಿಲ್ಪ ಸಂಪ್ರದಾಯದಂತೆ ಇಷ್ಟಿಕೋಪದಾನ

1350
0
SHARE

ಕಟಪಾಡಿ : ಆನೆಗುಂದಿ ಸರಸ್ವತೀ ಪೀಠ ದೇವದುರ್ಗ ಮಠ ರಾಯಚೂರು ಇದರ ಪರಮಪೂಜ್ಯ ಅಯ್ಯಪ್ಪಯ್ಯ ಮಹಾಸ್ವಾಮೀಜಿ ಇವರ ದಿವ್ಯ ಉಪಸ್ಥಿತಿಯಲ್ಲಿ , ಕಳತ್ತೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ಅವಿಭಜಿತ ದ.ಕ. ಜಿಲ್ಲಾ ವೇದವಿಧಾತ ಯಾಗ ಸಮಿತಿಯ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಡಿ.30ರಿಂದ ಜ.7ರ ವರೆಗೆ ಎಂಟು ದಿನಗಳ ಕಾಲ ಜರಗಲಿರುವ ಋಕ್‌ ಸಂಹಿತಾ ಯಾಗದ ಕುಂಡ ನಿರ್ಮಾಣಕ್ಕೆ ಶಿಲ್ಪ ಸಂಪ್ರದಾಯದಂತೆ ಇಷ್ಟಿಕೋಪದಾನ ಕಾರ್ಯಕ್ರಮವು ನ.26ರಂದು ಜರಗಿತು.

ವಿಶ್ವಕರ್ಮ ಒಕ್ಕೂಟದ ಗೌರವಾಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯ ಮಾತನಾಡಿದರು. ಬ್ರಹ್ಮಶ್ರೀ ವಿಶ್ವನಾಥ ಪುರೋಹಿತ್‌ ಉದ್ಯಾವರ, ನಾರಾಯಣ ಪುರೋಹಿತ್‌ ಸುರತ್ಕಲ್‌ ಇವರ ಆಚಾರ್ಯತ್ವದಲ್ಲಿ ಶಿಲ್ಪಿ ಸುರತ್ಕಲ್‌ ಉಮೇಶ ಆಚಾರ್ಯ ಪ್ರಧಾನ ಶಿಲ್ಪಿಗಳಾಗಿ ಇಷ್ಟಿಕೋಪದಾನ ಕಾರ್ಯಕ್ರಮ ಜರಗಿತು. ಇಷ್ಟಿಕೋಪದಾನ ಹಿನ್ನೆಲೆ ಬಗ್ಗೆ ಧಾರ್ಮಿಕ ಚಿಂತಕ ಗಣೇಶ ಆಚಾರ್ಯ ಕುಂಜೂರು ಉಪಾನ್ಯಾಸ ನೀಡಿದರು.

ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ನವೀನ್‌ ಆಚಾರ್ಯ ಕಂಚಿನಡ್ಕ, ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶೇಖರ ಆಚಾರ್ಯ ಕಾಪು, ವಿಶ್ವಕರ್ಮ ಯುವ ಸಂಘಟನೆಯ ಕಾಪು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಗಣೇಶ ಆಚಾರ್ಯ ಉಚ್ಚಿಲ, ಪ್ರ|ಕಾರ್ಯದರ್ಶಿ ಹರೀಶ್‌ ಆಚಾರ್ಯ ಕಳತ್ತೂರು, ಚಿನ್ನಬೆಳ್ಳಿ ಕೆಲಸಗಾರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್‌ ಆಚಾರ್ಯ, ವಿಶ್ವ ವೈದಿಕ ಸಭಾದ ಸಂಚಾಲಕ ಜನ್ನಾಪುರ ಸತೀಶ್‌ ಪುರೋಹಿತ್‌, ವಿಶ್ವಕರ್ಮ ಸಂಘ ಕಳತ್ತೂರು
ಇದರ ಅಧ್ಯಕ್ಷ ರತ್ನಾಕರ ಆಚಾರ್ಯ, ಶ್ರೀಧರ ಪುರೋಹಿತ್‌, ಪ್ರಬೋಧಕ ಪತ್ರಿಕೆಯ ಸಂಪಾದಕ ಮಂಜುನಾಥ ಆಚಾರ್ಯ ಕುಂಜೂರು, ಸಹಚಿಂತನ ಸಂಪಾದಕ ಬಿ.ಎ. ಆಚಾರ್ಯ, ಸಮಿತಿಯ ಪ್ರಧಾನ ಸಂಚಾಲಕ, ಯಾಗದ ಪವಿತ್ರಪಾಣಿ ಪಾದೂರು ಪಿ.ಕೆ. ಶ್ರೀಧರ ಪುರೋಹಿತ್‌ ದಂಪತಿ ಉಪಸ್ಥಿತರಿದ್ದರು. ಮುನಿಯಾಲು ಜಿ.ಎಸ್‌ ಪುರಂದರ ಪುರೋಹಿತ್‌ ಸ್ವಾಗತಿಸಿದರು. ಸಂಕಲಕರಿಯ ಶ್ರೀಪ್ರಸಾದ ಪುರೋಹಿತ್‌ ವಂದಿಸಿದರು.

LEAVE A REPLY

Please enter your comment!
Please enter your name here