Home ಧಾರ್ಮಿಕ ಸುದ್ದಿ ಕಾಳಹಸ್ತೇಂದ್ರ ಶ್ರೀ ಚಾತುರ್ಮಾಸ್ಯ

ಕಾಳಹಸ್ತೇಂದ್ರ ಶ್ರೀ ಚಾತುರ್ಮಾಸ್ಯ

1527
0
SHARE

ಕಾಪು: ಶ್ರೀಮತ್‌ಜಗದ್ಗುರು ಮಹಾ ಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಅವರ ಚಾತುರ್ಮಾಸ್ಯ ವ್ರತಾಚರಣೆಯು ಪಡುಕುತ್ಯಾರಿನ ಶ್ರೀಮತ್‌ ಆನೆಗುಂದಿ ಮಠ ದಲ್ಲಿ ಜು. 27ರಿಂದ ಸೆ. 25ರ ವರೆಗೆ ನಡೆಯಲಿದೆ. ಚಾತುರ್ಮಾಸ್ಯದ ಆಮಂತ್ರಣ ಪತ್ರಿಕೆಯನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಜು. 27ರಂದು ಚಾತುರ್ಮಾಸ್ಯ ವ್ರತ ಸಂಕಲ್ಪ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ, ಆ. 7ರಂದು ವೈದಿಕ ಸಮಾವೇಶ, 8ರಂದು ಧರ್ಮ ಸಂಸತ್ತು, ಸೆ. 9ರಂದು ಯುವ ಸಮಾವೇಶ, 16ರಂದು ಮಹಿಳಾ ಸಮಾವೇಶ, 22ರಂದು ಭೂದಾನ ಯಜ್ಞ, 25ರಂದು ಸೀಮೋಲ್ಲಂಘನ, ದಿಗ್ವಿಜಯ ಮೆರವಣಿಗೆ ನಡೆಯಲಿದೆ.
ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ಬಿ. ಸೂರ್ಯ ಕುಮಾರ್‌ ಆಚಾರ್ಯ ಹಳೆಯಂಗಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ.ಬಿ. ಆಚಾರ್‌ ಕಂಬಾರು ಸ್ವಾಗತಿಸಿದರು. ಕಾರ್ಯದರ್ಶಿ ಕಾಡಬೆಟ್ಟು ನಾಗರಾಜ ಆಚಾರ್ಯ ವಂದಿಸಿದರು.

LEAVE A REPLY

Please enter your comment!
Please enter your name here