Home ಧಾರ್ಮಿಕ ಸುದ್ದಿ ಕಕ್ಯಪದವು ಕಡಂಬಿಲ್ತಾಯಿ, ಕೊಡಮಣಿತ್ತಾಯಿ,ಬ್ರಹ್ಮಬೈದರ್ಕಳ ಗರೋಡಿ ಪುನರ್ನಿರ್ಮಾಣ

ಕಕ್ಯಪದವು ಕಡಂಬಿಲ್ತಾಯಿ, ಕೊಡಮಣಿತ್ತಾಯಿ,ಬ್ರಹ್ಮಬೈದರ್ಕಳ ಗರೋಡಿ ಪುನರ್ನಿರ್ಮಾಣ

916
0
SHARE

ಪುಂಜಾಲಕಟ್ಟೆ : ಐತಿಹಾಸಿಕ ವೀರ ಪುರುಷರಾದ ಕೋಟಿ ಚೆನ್ನಯರ ಆರಾಧನ ಕ್ಷೇತ್ರವಾಗಿರುವ ತುಳುನಾಡಿನ ಗರೋಡಿಗಳಲ್ಲಿ ಅತ್ಯಂತ ಕಾರಣಿಕ ಕ್ಷೇತ್ರ ಗಳಲ್ಲೊಂದಾಗಿ ಪುಣ್ಯಕ್ಷೇತ್ರವೆಂದು ಪ್ರಸಿದ್ಧಿ ಪಡೆದಿರುವ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮಬೈದರ್ಕಳ ಗರೋಡಿ ಸುಮಾರು 3 ಕೋ. ರೂ. ವೆಚ್ಚ ದಲ್ಲಿ ಸಂಪೂರ್ಣ ಶಿಲಾಮಯವಾಗಿ ಪುನರ್‌ ನಿರ್ಮಾಣಗೊಳ್ಳುತ್ತಿದೆ.

ಕ್ರೀಡೆಯು ಕೋಟಿ-ಚೆನ್ನಯರ ಮೆಚ್ಚಿನ ದಾಗಿದ್ದು, ಸುಮಾರು 214 ಗರೋಡಿಗಳಲ್ಲಿ ಕ್ರೀಡಾಂಗಣದ ಸ್ವರೂಪದಲ್ಲಿರುವ ಏಕೈಕ ಗರೋಡಿ ಕಕ್ಯಪದವಿನದ್ದು. ಇದು ಉಳಿ,
ಮಣಿನಾಲ್ಕೂರು, ಸರಪಾಡಿ, ಕಾವಳ ಮೂಡೂರು, ದೇವಸ್ಯಪಡೂರು, ತೆಂಕ ಕಜೆಕಾರು, ಪುತ್ತಿಲ, ಬಾರ್ಯ, ತೆಕ್ಕಾರು ಗ್ರಾಮಗಳನ್ನೊಳಗೊಂಡಿದೆ.

ಇಲ್ಲಿ ಜೈನ ಮನೆತನದ ಬಾರªಡ್ಡು ಗುತ್ತಿನವರಿಂದ ಪ್ರತಿಷ್ಠಾಪನೆಗೊಂಡ ಗರೋಡಿ ಬಳಿಕ ಕಾರಣಾಂತರಗಳಿಂದ ಉತ್ಸವಾದಿಗಳು ನಿಂತು ಜೀರ್ಣಾವಸ್ಥೆ ಯಲ್ಲಿದ್ದು, 1992ರಲ್ಲಿ ಅಂದಿನ ಮಂಡಲ ಪಂ. ಪ್ರಧಾನ ಎ. ಡೀಕಯ ಪೂಜಾರಿ ಕಕ್ಯಪದವು ಅವರ ಮುಂದಾಳತ್ವದಲ್ಲಿ, ಪಿ. ಲಿಂಗಪ್ಪ ಮಾಸ್ತರ್‌ ಪಾದೆ ಅಧ್ಯಕ್ಷತೆಯಲ್ಲಿ ಪುನರುತ್ಥಾನಗೊಂಡಿತು. ಅನಂತರ
ಸಂಜೀವ ಪೂಜಾರಿ ಕೇರ್ಯ, ಡಾ| ದಿನೇಶ್‌ ಬಂಗೇರ, ಪ್ರಸ್ತುತ ಕೆ. ಮಾಯಿಲಪ್ಪ ಸಾಲ್ಯಾನ್‌ ಅವರ ಮುಂದಾಳತ್ವದಲ್ಲಿ ಸಮಿತಿಯು ಮುನ್ನಡೆಯುತ್ತಿದೆ. ಕ್ಷೇತ್ರದಲ್ಲಿ ಪ್ರಧಾನ ಶಕ್ತಿಗಳಾಗಿ ಗ್ರಾಮದೈವ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ದೈವೊಂಕುಲು, ಕೋಟಿ-ಚೆನ್ನಯರು ಹಾಗೂ ಮಾಯಂದಾಲ್‌ ಶಕ್ತಿಗಳು ಊರಿಗೆ ಅಭಯವನ್ನು ನೀಡುತ್ತಿವೆ.

ಕ್ಷೇತ್ರದ ಆಸ್ರಣ್ಣ ರಾಜೇಂದ್ರ ಅರ್ಮುಡ್ತಾಯರ ಮುಂದಾಳತ್ವದಲ್ಲಿ, ಶ್ರೀನಿವಾಸ ಅರ್ಮುಡ್ತಾಯರ ಮಾರ್ಗದರ್ಶನದಲ್ಲಿ ಸ್ಥಳ ಪ್ರಶ್ನೆ ಪ್ರಕಾರ ಕ್ಷೇತ್ರವನ್ನು ಪುನರ್ನಿರ್ಮಾಣ ಮಾಡಲು ಸಂಕಲ್ಪಿಸಿದ್ದು, ಈಗಾಗಲೇ ಸಂಪೂರ್ಣ ಶಿಲಾಮಯ ಗರೋಡಿಯ ನೀಲ ನಕ್ಷೆ ತಯಾರಿಸಲಾಗಿದೆ. ಪುನರ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ನೂತನ ಕೊಡಿಮರ ಸಿದ್ಧಪಡಿಸಲಾಗಿದೆ, ಬಾಲಾ ಲಯ ಪ್ರತಿಷ್ಠೆ ಮೊದಲಾದ ಧಾರ್ಮಿಕ ಕಾರ್ಯಗಳು ನಡೆದಿದ್ದು, ದೈವಸ್ಥಾನ, ಗರೋಡಿಗಳ ಕಾಮಗಾರಿ ಭರದಿಂದ ಸಾಗಿದೆ. ಮಾಜಿ ಸಚಿವ ಬಿ .ರಮಾನಾಥ ರೈ ಅವರು ಪುನರ್‌ ನಿರ್ಮಾಣ ಸಮಿತಿ ಗೌರವಾಧ್ಯಕ್ಷರಾಗಿ, ರೋಹಿನಾಥ ಪಾದೆ ಕಾರ್ಯಾಧ್ಯಕ್ಷರಾಗಿ, ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್‌ ಅಧ್ಯಕ್ಷರಾಗಿ, ಕೆ. ಮಾಯಿಲಪ್ಪ ಸಾಲ್ಯಾನ್‌ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿದ್ದು, ಜತೆಗೆ ವಿವಿಧ ಸಮಿತಿ ಸದಸ್ಯರು ಕ್ಷೇತ್ರದ ಪುನರ್ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಪೂರ್ಣ ಶಿಲಾಮಯ, ಆಕರ್ಷಕ, ಸುಂದರ, ವಿಶಿಷ್ಠ ಗರೋಡಿ ಪುನರ್‌ ನಿರ್ಮಾಣದಲ್ಲಿ ಭಕ್ತರು ತನು-ಮನ-ಧನಗಳಿಂದ ಸಹಕರಿ ಸಬೇಕಾಗಿ ಸಮಿತಿ ವಿನಂತಿಸಿದ್ದು, ಇದೇ ಬರುವ ಮೇ ತಿಂಗಳಿನಲ್ಲಿ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನಡೆಸಲು ಚಿಂತನೆ ನಡೆಸಲಾಗಿದೆ.

ದಾನಿಗಳು ವಿಜಯ ಬ್ಯಾಂಕ್‌ ಕಕ್ಯಪದವು ಶಾಖೆ, ಖಾತೆ ನಂ.
153601011002016. ಐಎಫ್‌ಎಸ್‌ಸಿ ಕೋಡ್‌: ವಿಐಜೆಬಿ0001536 ಇದಕ್ಕೆ ಧನ ಸಹಾಯವನ್ನು ಕಳುಹಿಸಬಹುದಾಗಿದೆ.

LEAVE A REPLY

Please enter your comment!
Please enter your name here