ಪುಂಜಾಲಕಟ್ಟೆ : ಆಚರ ಣೆಗಳ ಮಹತ್ವವನ್ನು ಅರಿತು ಅನುಷ್ಠಾನ ಗೊಳಿಸುವುದರಿಂದ ಉತ್ತಮ ಫಲ ದೊರಕುತ್ತದೆ. ದೈವ, ದೇವಸ್ಥಾನಗಳಲ್ಲಿ ಆರಾಧನೆಯ ಉದ್ದೇಶ ಅರಿತು ಅರ್ಚಿಸಿದಾಗ ಸಾನ್ನಿಧ್ಯ ವೃದ್ಧಿಯಾಗುತ್ತದೆ ಎಂದು ಅಮೆರಿಕಾ ನ್ಯೂ ಜೆರ್ಸಿಯ ಶ್ರೀ ಕೃಷ್ಣ ವೃಂದಾವನದ ಪ್ರಧಾನ ಅರ್ಚಕ ವೇ| ಮೂ| ಶ್ರೀ ಯೋಗೀಂದ್ರ ಭಟ್ ಉಳಿ ಅವರು ಹೇಳಿದರು.
ಸುಮಾರು 3 ಕೋಟಿ ರೂ. ವೆಚ್ಚದಲ್ಲಿ, ತೌಳವ ದ್ರಾವಿಡ ಶೈಲಿಯಲ್ಲಿ, ಸಂಪೂರ್ಣ ಶಿಲಾ ಮಯವಾಗಿ ಪುನರ್ನಿ ರ್ಮಾಣಗೊಂಡಿರುವ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ಬ್ರಹ್ಮಕಲ ಶೋತ್ಸವದ ಮೂರನೇ ದಿನವಾದ ರವಿವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ದೈವಾರಾಧನೆಯಲ್ಲಿ ಸ್ವತಃ ದೈವೀ ಸಾನ್ನಿಧ್ಯವನ್ನು ನಮ್ಮಲ್ಲೇ ಅನುಭವಿಸುವ ಅವಕಾಶವಿದ್ದು, ಪರಂಪರೆಯ ಪದ್ಧತಿ ಪ್ರಕಾರ ಪ್ರಕ್ರಿಯೆಗಳನ್ನು ನಡೆಸಿದಾಗ ದೈವೀ ಶಕ್ತಿಯ ಸಾಕ್ಷಾತ್ಕಾರವಾಗುತ್ತದೆ ಎಂದು ಅವರು ಹೇಳಿದರು. ಉಳಿ ಗ್ರಾಮದಲ್ಲಿ ಹಲವು ದೈವ, ದೇವಸ್ಥಾನಗಳು ಅಭಿವೃದ್ಧಿ ಹೊಂದಿದ್ದು ಇಲ್ಲಿನ ಜನರ ನಿರಂತರ ಭಕ್ತಿ ಸಮರ್ಪಣೆಗೆ ಸಾಕ್ಷಿಯಾಗಿದೆ. ಇದರಿಂದ ಗ್ರಾಮ ವೈಭವದಿಂದ ಮೆರೆಯುತ್ತದೆ ಎಂದರು.
ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಟ ವಿಜಯರಾಘವೇಂದ್ರ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ದೈವೇಚ್ಛೆಯ ವಿನಃ ಯಾವ ಕಾರ್ಯವೂ ಸಾಗುವುದಿಲ್ಲ. ದೇವರಲ್ಲಿ ಮನಃಪೂರ್ವಕವಾಗಿ ಪ್ರಾರ್ಥಿಸಿದಾಗ ಇಷ್ಟಾರ್ಥ ಸಿದ್ಧಿಯಾಗುವುದು ಎಂದು ಹೇಳಿದರು.
ವಾಸ್ತುಶಿಲ್ಪಿ ಪ್ರಮಲ್ ಕುಮಾರ್ ಕಾರ್ಕಳ ಅವರು ಮಾತನಾಡಿ, ಇಲ್ಲಿನ ಗರೋಡಿ ಅತ್ಯಂತ ಕಾರಣಿಕ ಶಕ್ತಿಯ ಕ್ಷೇತ್ರವಾಗಿದ್ದು, ದೈವ, ದೇವರ ಅನುಗ್ರಹದಿಂದ ನಿರೀಕ್ಷೆಗೂ ಮಿಗಿಲಾದ ಸುಂದರ ಕ್ಷೇತ್ರವಾಗಿ ಮೂಡಿ ಬಂದಿದೆ ಎಂದರು.
ಕರ್ನಾಟಕ ಫಿಲ್ಮ್ ಚೇಂಬರ್ಸ್ ಮತ್ತು ಕಾಮರ್ಸ್ ನ ಅಧ್ಯಕ್ಷ ಎಸ್.ಎ. ಚೆನ್ನೇಗೌಡ, ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ, ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರದ ಆಸ್ರಣ್ಣ ಶ್ರೀನಿವಾಸ ಅರ್ಮುಡ್ತಾಯ, ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ಅಧ್ಯಕ್ಷ ಚಿತ್ತರಂಜನ್, ಮಾಜಿ ಶಾಸಕ ರುಕ್ಮಯ ಪೂಜಾರಿ, ಮುಂಬಯಿ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ ಮುಂಬಯಿ, ನಿವೃತ್ತ ಪೊಲೀಸ್ ಅಧಿಕಾರಿ ಪಿತಾಂಬರ ಹೇರಾಜೆ, ಉಳಿ ಗ್ರಾ.ಪಂ. ಅಧ್ಯಕ್ಷೆ ಧೀನಾಕ್ಷಿ ಮಲ್ಯೋಡಿ, ಕಕ್ಯಬೀಡು ಶ್ರೀ ಪಂಚದುರ್ಗಾ ಪರಮೇಶ್ವರೀ ದೇವಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ ನಾಯಕ್ ಉಳಿ, ಸಮಿತಿ ಉಪಾಧ್ಯಕ್ಷ ರವಿ ಪೂಜಾರಿ ಚಿಲಿಂಬಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ. ರಮಾನಾಥ ರೈ, ಕಾರ್ಯಾಧ್ಯಕ್ಷ ಬಿ. ಪದ್ಮಶೇಖರ ಜೈನ್, ಪುನರ್ ನಿರ್ಮಾಣ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಚೆನ್ನಪ್ಪ ಸಾಲ್ಯಾನ್ ಆಜೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮ್ಮಾನ
ಈ ಸಂದರ್ಭದಲ್ಲಿ ಗರೋಡಿಯ ಕಾಮಗಾರಿ ನಿರ್ವಹಿಸಿದ ಶಿಲ್ಪಿ ಸದಾಶಿವ ಗುಡಿಗಾರ್, ಕಾಷ್ಠ ಶಿಲ್ಪಿ ಜಯರಾಮ ಆಚಾರ್ಯ ನಕ್ರೆ, ನಟ ವಿಜಯ ರಾಘವೇಂದ್ರ ಅವರನ್ನು ಸಮ್ಮಾನಿಸಲಾಯಿತು.
ಸಮಿತಿ ಉಪಾಧ್ಯಕ್ಷ ಡಾ| ರಾಜಾರಾಂ ಕೆ.ಬಿ. ಸ್ವಾಗತಿಸಿದರು. ಡೀಕಯ್ಯ ಬಂಗೇರ ಕೆಳಗಿನ ಕರ್ಲ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.