ಪುಂಜಾಲಕಟ್ಟೆ : ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾ ಪರಮೇಶ್ವರೀ ದೇವಿ ಕ್ಷೇತ್ರದಲ್ಲಿ ತಂತ್ರಿ ಬಾಲಕೃಷ್ಣ ಪಾಂಗಣ್ಣಾಯ ನೇತೃತ್ವದಲ್ಲಿ ವರ್ಷಾವಧಿ ಜಾತ್ರೆ ಪ್ರಯುಕ್ತ ಜ. 17ರಂದು ದೇವರ ಪೇಟೆ ಸವಾರಿ ಜರಗಿತು.
ಬೆಳಗ್ಗೆ ದೈವಗಳಿಗೆ ತಂಬಿಲಗಳು, ಮಧ್ಯಾಹ್ನ ಮಹಾಪೂಜೆ, ಸಂಜೆ ದೇವರ ಪೇಟೆ ಸವಾರಿ, ಉತ್ಸವ, ಶ್ರೀ ಭೂತಬಲಿ, ಕವಾಟಬಂಧನ, ಶಯನ, ಬಳಿಕ ರಾತ್ರಿ ಕಕ್ಯಪದವು ಮಹಿಳಾ ಮಂಡಲದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಶಿವಾಜಿ ಫ್ರೆಂಡ್ಸ್ ಕಕ್ಯಬೈಲು ಅವರ ವತಿಯಿಂದ ಭಕ್ತರಿಗೆ ಮಜ್ಜಿಗೆ ವಿತರಣೆ ವ್ಯವಸ್ಥೆಗೊಳಿಸಿದ್ದರು.
ಶುಕ್ರವಾರ ಬೆಳಗ್ಗೆ ಕವಾಟೋದ್ಘಾಟನೆ, ದಿವ್ಯದರ್ಶನ, ಚೂರ್ಣೋತ್ಸವ, ತುಲಾಭಾರ, ದರ್ಶನಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.
ದೇವಸ್ಥಾನದ ಸ್ಥಾಪಕಾಧ್ಯಕ್ಷ ಕೆ. ಜಾರಪ್ಪ ಶೆಟ್ಟಿ ಖಂಡಿಗ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಳಿ ದಾಮೋದರ ನಾಯಕ್, ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ಸಮಿತಿ ಉಪಾಧ್ಯಕ್ಷರಾದ ಕೆ. ಮಾಯಿಲಪ್ಪ ಸಾಲ್ಯಾನ್, ವಿಶ್ವನಾಥ ಸಾಲ್ಯಾನ್ ಬಿತ್ತ, ಕೋಶಾಧಿಕಾರಿ ಪಿ. ರಾಮಯ್ಯ ಭಂಡಾರಿ, ಕಾರ್ಯದರ್ಶಿ ನಾರಾಯಣ ಪೂಜಾರಿ, ಜತೆ ಕಾರ್ಯದರ್ಶಿ ಅಗ್ಪಲ ಸಂಜೀವ ಗೌಡ, ಉತ್ಸವ ಸಮಿತಿ ಅಧ್ಯಕ್ಷ ವಾಸುದೇವ ಮಯ್ಯ, ಮೊಕ್ತೇಸರ, ಬಾರ್ದಡ್ ಗುತ್ತಿನ ಮನೆಯ ರಾಜವೀರ, ಗೌರವ ಸದಸ್ಯರಾದ ಡಾ| ಸತ್ಯಶಂಕರ ಶೆಟ್ಟಿ, ಡಾ.ಭಾರತಿ ಶೆಟ್ಟಿ, ಗ್ರಾ.ಪಂ. ಸದಸ್ಯ ಚಿದಾನಂದ ರೈ ಕಕ್ಯ, ಚೇತನ್ ಹೂರ್ದೊಟ್ಟು, ಉಳಿ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಎ. ಚೆನ್ನಪ್ಪ ಸಾಲ್ಯಾನ್, ಡಾ| ದಿನೇಶ್ ಬಂಗೇರ, ಕಚೇರಿ ವ್ಯವಸ್ಥಾಪಕ ವೀರೇಂದ್ರ ಕುಮಾರ್ ಜೈನ್, ಶ್ರೀ ಸತ್ಯ ಸಾಯಿ ಸೇವಾ ಸಮಿತಿ, ಐವೆರ್ ಫ್ರೆಂಡ್ಸ್, ಶಿವಾಜಿ ಫ್ರೆಂಡ್ಸ್, ಜೀರ್ಣೋದ್ಧಾರ ಸಮಿತಿ, ಉತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಜ. 19ರಂದು ಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ ಯೊಂದಿಗೆ ಮಂಗಳ. ಬೆಳಗ್ಗೆ ಕಕ್ಯಬೀಡು ಮೂಲ ಚಾವಡಿ ಯಲ್ಲಿ ನೇಮ ಭಂಡಾರ ಇಳಿಯುವುದು ಜರಗಲಿದೆ.