Home ಧಾರ್ಮಿಕ ಸುದ್ದಿ ಆತ್ಮನಿಷ್ಠೆಯಿಂದ ಉತ್ತಮ ಬದುಕು: ಸುಬ್ರಹ್ಮಣ್ಯ ಶ್ರೀ

ಆತ್ಮನಿಷ್ಠೆಯಿಂದ ಉತ್ತಮ ಬದುಕು: ಸುಬ್ರಹ್ಮಣ್ಯ ಶ್ರೀ

ಕಕ್ಯಬೀಡು ದೇವಸ್ಥಾನ: ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ

1164
0
SHARE

ಪುಂಜಾಲಕಟ್ಟೆ: ದೇವರಲ್ಲಿ ನಂಬಿಕೆಯಿರಿಸಿ ಶ್ರದ್ಧೆ, ಭಕ್ತಿಯಿಂದ ಸತ್ಯ-ಧರ್ಮದ ಮಾರ್ಗದಲ್ಲಿ ನಡೆದಾಗ ಉತ್ತಮ ಬದುಕು ನಮ್ಮದಾಗುತ್ತದೆ. ಭೌತಿಕ ನಿಷ್ಠ ಬದುಕಿಗಿಂತಲೂ ಆತ್ಮ ನಿಷ್ಠ ಬದುಕು ನಮ್ಮದಾಗಬೇಕು ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹಸ್ವಾಮಿ ಮಠದ ಶ್ರೀ ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ ಅವರು ಹೇಳಿದರು.

ನವೀಕೃತ ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರ ದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವರ್ಷಾವಧಿ ಜಾತ್ರೆಯ ಪ್ರಯುಕ್ತ ಗುರುವಾರ ರಾತ್ರಿ ನಡೆದ ಧಾರ್ಮಿಕ ಸಭೆಯ ಸಮಾರೋಪದಲ್ಲಿ ಅವರು ಆಶೀರ್ವ ಚನ ನೀಡಿದರು.

ಶ್ರದ್ಧಾ ಕೇಂದ್ರಗಳು ಉತ್ತಮವಾಗಿ ದ್ದರೆ ಭಕ್ತಿ, ಶ್ರದ್ಧೆ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಈ ಹಿಂದೆ ಕೇವಲ ಆರ್ಥಿಕ ಸ್ಥಿತಿವಂತರು ಮತ್ತು ಬಲಾಡ್ಯರಿಗೆ ಸೀಮಿತವಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಇಂದು ಸಾಮಾಜಿಕ ಬದಲಾವಣೆಯಿಂದ ಜನಸಾಮಾನ್ಯರೂ ಧರ್ಮಕಾರ್ಯ ಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲ ವಾಗಿದೆ ಎಂದರು.

ಅಮೆರಿಕದ ನ್ಯೂಜೆರ್ಸಿ ಶ್ರೀಕೃಷ್ಣ ಬೃಂದಾವನದ ಪ್ರಧಾನ ಅರ್ಚಕ ಯೋಗೇಂದ್ರ ಭಟ್‌ ಉಳಿ ಅವರು ಧಾರ್ಮಿಕ ಉಪನ್ಯಾಸ ನೀಡಿ, ಶ್ರದ್ಧಾ ಭಕ್ತಿಯಿಂದ ದೇವಾಲಯದಲ್ಲಿ ಪ್ರಾರ್ಥಿಸಿದಾಗ ಭಗವಂತನ ಶಕ್ತಿ ಸಂಚಯನವಾಗಿ ಇಷ್ಟಾರ್ಥ ಸಿದ್ಧಿ ಯಾಗುವುದು ಎಂದು ತಿಳಿಸಿದರು.

ದೇವಸ್ಥಾನದ ಸ್ಥಾಪಕಾಧ್ಯಕ್ಷ ಜಾರಪ್ಪ ಶೆಟ್ಟಿ ಖಂಡಿಗ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಳಿ ದಾಮೋದರ ನಾಯಕ್‌, ಉಪಾಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್‌, ಬಾರªಡ್ಡು ಗುತ್ತು ಮನೆತನದ ಮೊಕ್ತೇಸರ ರಾಜವೀರ ಜೈನ್‌, ಬಂಟ್ವಾಳ ತಿರುಮಲ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಶೆಣೈ, ದ.ಕ.ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್‌. ಶೆಟ್ಟಿ, ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್‌, ಸುಬ್ರಹ್ಮಣ್ಯ ಉದ್ಯಮಿ ರವಿ ಕಕ್ಯಪದವು, ಮುಂಬಯಿ ಉದ್ಯಮಿ ನಾರಾಯಣ ಶೆಟ್ಟಿ ಕಕ್ಯ, ನಿರಂಜನ ಉಪ್ಪಿನಂಗಡಿ, ಸಮಿತಿ ಕಾರ್ಯದರ್ಶಿ ನಾರಾಯಣ ರೈ ವೇದಿಕೆಯಲ್ಲಿದ್ದರು.

ಸಮಿತಿ ಪದಾಧಿಕಾರಿಗಳಾದ ಪಿ. ರಾಮಯ್ಯ ಭಂಡಾರಿ, ಸಂಜೀವ ಗೌಡ ಅಗ³ಲ, ವಿಶ್ವನಾಥ ಸಾಲ್ಯಾನ್‌ ಬಿತ್ತ, ಕಚೇರಿ ವ್ಯವಸ್ಥಾಪಕ ವೀರೇಂದ್ರ ಕುಮಾರ್‌ ಜೈನ್‌ ಮೊದಲಾದವರು ಉಪಸ್ಥಿತರಿದ್ದರು.

ದಾಮೋದರ ನಾಯಕ್‌ ಸ್ವಾಗತಿಸಿ, ಪುರಂದರ ಕುಕ್ಕಾಜೆ ವಂದಿಸಿದರು. ಗುರುಪ್ರಕಾಶ್‌ ಕೊರಡಿಂಗೇರಿ ಸಹಕರಿಸಿದರು. ಶಿಕ್ಷಕ ಮುರಳೀಕೃಷ್ಣ ಆಚಾರ್ಯ ನಿರ್ವಹಿಸಿದರು.

LEAVE A REPLY

Please enter your comment!
Please enter your name here