ಪುಂಜಾಲಕಟ್ಟೆ : ಸುಮಾರು 3 ಕೋ. ರೂ. ವೆಚ್ಚದಲ್ಲಿ ಶಿಲಾಮಯವಾಗಿ ಪುನರ್ ನಿರ್ಮಾಣಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರ ಬಂಟ್ವಾಳ ತಾ|ನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಶ್ರೀ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ನೂತನ ಕೊಡಿಮರದ ತೈಲಾಧಿವಾಸ ಶುಕ್ರವಾರ ಜರಗಿತು.
ಕ್ಷೇತ್ರದ ಆಸ್ರಣ್ಣ ರಾಜೇಂದ್ರ ಅರ್ಮು ಡ್ತಾಯ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಈ ಸಂದರ್ಭ ಮಾತನಾಡಿದ ಅವರು, ಸುಮಾರು ಮೂವತ್ತೇಳುವರೆ ಅಡಿ ಉದ್ದದ ಕೊಡಿಮರ ವನ್ನು ಶುದ್ಧ ಎಳ್ಳೆಣ್ಣೆಯಲ್ಲಿ ನೆನೆಸಿಡಲಾಗುತ್ತಿದೆ. ಈ ಮೂಲಕ ಕೊಡಿಮರ ಗಾಳಿ, ಮಳೆಯ ಪ್ರಭಾವದಿಂದ ನಶಿಸದಂತೆ ಕಾಪಿಡಲು ಹಿರಿಯರು ವೈಜ್ಞಾನಿಕವಾಗಿ ಕಂಡು ಕೊಂಡ ಮಾರ್ಗವಾಗಿದೆ ಎಂದರು.
ಭಕ್ತರು ಕೊಡಿಮರಕ್ಕೆ ಎಳ್ಳೆಣ್ಣೆ ಸಮಿರ್ಪಿಸಿ ದರು. ಬಳಿಕ ಬ್ರಹ್ಮ ಬೈದರ್ಕಳ ಗರೋಡಿಯ ಮರದ ಮೇಲ್ಛಾವಣಿಗೆ ನಿರ್ಮಾಣ ಮುಹೂರ್ತ ನಡೆಯಿತು.
ಕ್ಷೇತ್ರ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಬಿ. ಪದ್ಮಶೇಖರ ಜೈನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ಗೌರವ ಸಲಹೆಗಾರರಾದ ರತ್ನಕುಮಾರ ಆರಿಗ ನಾೖಲ,ಕೊಡಿಮರ ದಾನಿ ಪಟ್ಟದಬೈಲು ಕೃಷ್ಣ ಪ್ಪ ಮಾಸ್ಟರ್, ಉತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಿತ್ತ, ಪುನರ್ ನಿರ್ಮಾಣ ಸಮಿತಿ ಪದಾಧಿಕಾರಿಗಳಾದ ಎ. ಚೆನ್ನಪ್ಪ ಸಾಲ್ಯಾನ್ ಆಜೋಡಿ, ದಾಮೋದರ ನಾಯಕ್, ಸಂಪತ್ ಕುಮಾರ್ ಶೆಟ್ಟಿ, ಸಂಜೀವ ಪೂಜಾರಿ ಕೇರ್ಯ, ಡಾ| ದಿನೇಶ್ ಬಂಗೇರ, ಡೀಕಯ ಬಂಗೇರ ಕರ್ಲ, ವೀರೇಂದ್ರ ಕುಮಾರ್ ಜೈನ್, ಜಯ ಶೆಟ್ಟಿ ಕಿಂಜಾಲು, ಚೆನ್ನಪ್ಪ ಪೂಜಾರಿ ತಿಮರಡ್ಡ, ನಾರಾಯಣ ಪೂಜಾರಿ ಬಿತ್ತ, ಡೀಕಯ ಸಾಲ್ಯಾನ್, ಲೋಕಯ ನಾಯ್ಕ,
ರಾಮಪ್ಪ ಪೂಜಾರಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ವಾಸುದೇವ ಮಯ್ಯ, ಗಣೇಶ ಕೆ., ಶ್ರೀಧರ ಆಚಾರ್ಯ, ಸದಾನಂದ ಗೌಡ, ಚೇತನ್ ಎಚ್., ಜಯಾನಂದ ಪೂಜಾರಿ, ಡೀಕಯ್ಯ ಕುಲಾಲ್, ಚಂದ್ರಶೇಖರ ಕೆ., ಗುರುಪ್ರಕಾಶ್, ರಾಜೀವ, ಸುಂದರ ದೇವಾಡಿಗ, ಪ್ರದೀಪ್, ಶ್ರೀಕ್ಷೇತ್ರ ಧ. ಯೋಜನೆ ಸೇವಾ ಪ್ರತಿನಿಧಿ ಶೇಖರ ಕಂಚಲಪಲ್ಕೆ, ಉತ್ಸವ ಸಮಿತಿಯ ಪದಾಧಿಕಾರಿಗಳಾದ ಪರಮೇಶ್ವರ, ರಾಮಯ್ಯ ಭಂಡಾರಿ, ರಾಜೇಂದ್ರ, ಡೀಕಯ್ಯ ಪೂಜಾರಿ, ವಸಂತ ಆರ್., ನವೀನ್ ಶೆಟ್ಟಿ, ತಾರಾನಾಥ, ಬಾಬು ನಾಯ್ಕ ಮತ್ತಿತರರು ಭಾಗವಹಿಸಿದ್ದರು.