ಪುಂಜಾಲಕಟ್ಟೆ : ಕಜೆಕಾರು ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಸಲಾಗುವ ಅನ್ನಛತ್ರಕ್ಕೆ ಶಿಲಾನ್ಯಾಸ ಹಾಗೂ ಹೊರಾಂಗಣ ಮೇಲ್ಛಾವಣಿಯ ಉದ್ಘಾಟನೆ ಕಾರ್ಯಕ್ರಮ ಫೆ. 20ರಂದು ಜರಗಿತು.
ಸಂಸದ ನಳಿನ್ ಕುಮಾರ್ ಕಟೀಲು ಅವರು ಹೊರಾಂಗಣ ಮೇಲ್ಛಾವಣಿಯ ಉದ್ಘಾಟನೆ ನೆರವೇರಿಸಿ, ದೇವಾಲಯಗಳ ಅಭಿವೃದ್ಧಿಯಿಂದ ಗ್ರಾಮ ಸುಭೀಕ್ಷೆ ಯಾಗುವುದು. ಅನ್ನದಾನದಂತಹ ಶ್ರೇಷ್ಠ ದಾನಗಳಿಂದ ದೇವಸ್ಥಾನದ ಸಾನ್ನಿಧ್ಯ ವೃದ್ಧಿಸುವುದು ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ ಅವರು ಅನ್ನಛತ್ರದ ಶಿಲಾನ್ಯಾಸ ನೆರವೇರಿಸಿ, ಶ್ರದ್ಧಾ ಭಕ್ತಿಯಿಂದ ದೇವಸ್ಥಾನದ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ದೇವರ ಅನುಗ್ರಹ
ಪ್ರಾಪ್ತಿಯಾಗುವುದು. ಹಸಿದವರಿಗೆ ಅನ್ನದಾನ ಪುಣ್ಯ ಕಾರ್ಯ ಎಂದರು.
ಬಡಗ ಕಜೆಕಾರು ಗ್ರಾ.ಪಂ. ಅಧ್ಯಕ್ಷ ವಜ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ಉದ್ಯಮಿಗಳಾದ ವಾಸುದೇವ ಭಟ್, ಸಂಜೀವ ಪೂಜಾರಿ ಗುರುಕೃಪಾ, ಶ್ರೀಕ್ಷೇತ್ರ ಧ.ಗ್ರಾ. ಯೋಜನೆ ಬಂಟ್ವಾಳ ಯೋಜನಾಧಿಕಾರಿ ಜಯಾನಂದ, ಪ್ರಗತಿಪರ ಕೃಷಿಕ ಸುಧಾಕರ ಶೆಣೈ ಖಂಡಿಗ, ಕಕ್ಯಪದವು ಗರೋಡಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ಕಕ್ಯಬೀಡು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ ನಾಯಕ್, ಮಂಗಳೂರು ಕಿಟ್ಟೆಲ್ ಕಾಲೇಜಿನ ಪ್ರಾಂಶುಪಾಲ ವಿಠ್ಠಲ ಅಬುರ, ಶಿವಶಕ್ತಿ ಫ್ರೆಂಡ್ಸ್ ಅಧ್ಯಕ್ಷ ಪ್ರದೀಪ್ ಉಪಸ್ಥಿತರಿದ್ದರು.
ದೇವಸ್ಥಾನದ ಪ್ರ. ಅರ್ಚಕ ಎಂ. ನಾರಾಯಣ ಅಡಿಗ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಯಶೋಧರ ಪೂಜಾರಿ ಕಜೆಕಾರುಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಣಶೇಖರ ಕೊಡಂಗೆ, ಗೌರವಾಧ್ಯಕ್ಷರಾದ ಕೆ. ಹರೀಶ್ಚಂದ್ರ ಪೂಜಾರಿ ಕನಪಾಡಿಬೆಟ್ಟು, ಉಪಾಧ್ಯಕ್ಷ ಪ್ರವೀಣ ಅಬುರ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಬಿ. ಕೇಶವ ಪ್ರಭು, ಕೆ. ಡೀಕಯ ಬಂಗೇರ, ಪೂವಪ್ಪ ನಾಯ್ಕ, ವಸಂತಿ ಆರ್. ಸಾಲ್ಯಾನ್, ಮಮತಾ ಐಂಬಲೋಡಿ, ಭಜನ ಮಂಡಳಿ ಅಧ್ಯಕ್ಷ ವಸಂತ ಮಡಿವಾಳ, ಮಹಿಳಾಮಂಡಲ ಅಧ್ಯಕ್ಷೆ ಚಂದ್ರಿಕಾ ಮತ್ತಿತರರಿದ್ದರು. ಗೌರವಾಧ್ಯಕ್ಷ ಎಂ. ಮೋನಪ್ಪ ಪೂಜಾರಿ ಕಂಡೆತ್ಯಾರು ಸ್ವಾಗತಿಸಿ, ಕೆ.ಎ. ಸತೀಶ್ಚಂದ್ರ ಹೊಸಮನೆ ವಂದಿಸಿದರು. ವಾಸು ದೇವಾಡಿಗ ನಿರೂಪಿಸಿದರು.