ಮಹಾನಗರ: ಭಾರತ ಧಾರ್ಮಿಕತೆಯ ತೊಟ್ಟಿಲು. ತುಳುನಾಡಿನ ಸಂಸ್ಕೃತಿ ಜಲ ಸಂಸ್ಕೃತಿಯೊಂದಿಗೆ ಸಮ್ಮಿಳಿ ತಗೊಂಡಿದೆ. ಈ ಜಲಸಂಸ್ಕೃತಿಯಲ್ಲಿ ನಾಗಾರಾಧನೆ, ಭೂತಾರಾಧನೆ, ಉಚ್ಚಾ ರಧನೆ, ಶಕ್ತಾರಾಧನೆ ಮೊದಲಾದವುಗಳು ಸೇರಿಕೊಂಡಿವೆ. ಎಲ್ಲ ಆರಾಧನೆಗಳಲ್ಲಿ ತುಳುನಾಡಿನ ನಂಬಿಕೆ ಆಚರಣೆಗಳು ಎದ್ದು ಕಾಣುವುದು ವಿಶೇಷವಾಗಿದೆ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಕೈಡೇಲ್ ಜಲ್ಲಿಗುಡೆ ಶ್ರೀ ನಾಗರಕ್ತೇಶ್ವರಿ ಗುಳಿಗ ಸನ್ನಿಧಿಯಲ್ಲಿ ನಡೆಯಲಿರುವ ಚತುಃ ಪವಿತ್ರ ನಾಗಮಂಡಲ ಸೇವೆಯ ಪ್ರಯುಕ್ತ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾಗಮಂಡಲ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಚಾಲಕರಾದ ಎಂ. ಜಗದೀಶ್ ಶೆಟ್ಟಿ ಬಿಜೈ ಅವರು ನಾಗಮಂಡಲ ನಡೆಯಲಿರುವ ಸ್ಥಳದ ಮಹಿಮೆಯನ್ನು ವಿವರಿಸಿ ಈ ಪುಣ್ಯ ಕ್ಷೇತ್ರದಲ್ಲಿ ನಾಗ ಮಂಡಲ ಸೇವಾ ಕೈಂಕರ್ಯಗಳಲ್ಲಿ ತೊಡಗಿಸಿಕೊಳ್ಳುವಂತಾಗಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.
ಸುಬ್ರಾಯ ಭಟ್, ತಾರಾನಾಥ್ ಬೋಳೂರು, ಸಾಹಿತ್ಯ ಪರಿಷತ್ತಿನ ಖಜಾಂಚಿಗಳಾದ ಭಾರತಿ ಶೆಟ್ಟಿ, ರಾಧಿಕಾ ಕಾಮತ್, ಮೊಕ್ತೇಸರರಾದ ದಾಮೋದರ್ ರಾವ್ ಜಗತ್ತಾಪ್, ಸಮಿತಿಯ ಗೌರವಾಧ್ಯಕ್ಷರಾದ ಸುರೇಶ್ ರಾವ್ ಕೆಲಾಡ್, ಅಧ್ಯಕ್ಷರಾದ ಯಶವಂತ್ ಶೆಟ್ಟಿ ಶುಭ ಹಾರೈಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಖೀಲ ಭಾರತ ಸಾಹಿತ್ಯ ಪರಿಷತ್ ವತಿಯಿಂದ ಕವಿಗೋಷ್ಠಿ ನಡೆಯಿತು.ಪ್ರಧಾನ ಕಾರ್ಯದರ್ಶಿ ರಾಜೇಶ್ ರಾವ್ ಪಾಟೀಲ್ ವಂದಿಸಿದರು.
ಮಹಾ ಗಣಯಾಗ ಎ. 11ರಂದು ಸನ್ನಿಧಿಯಲ್ಲಿ ಪಂಜ ಗುರುರಾಜ್ ಭಟ್ ಅವರ ನೇತೃತ್ವದಲ್ಲಿ 108 ತೆಂಗಿನಕಾಯಿಯ ಮಹಾಗಣಯಾಗ ನಡೆಯಿತು. ಸಮಿತಿ ಅಧ್ಯಕ್ಷ ಯಶವಂತ ಶೆಟ್ಟಿ ಪಡುಬೀಡು, ಗೌರವಾಧ್ಯಕ್ಷರಾದ ಸುರೇಶ್ ರಾವ್ ಲಾಡ್, ವಾಸುದೇವ ಕೊಟ್ಟಾರಿ,ಉಪಾಧ್ಯಕ್ಷ ರಮೇಶ್ ಶೆಟ್ಟಿ, ಸನ್ನಿಧಿಯ ಮುಖ್ಯಸ್ಥರಾದ ರಂಗನಾಥ್ ರಾವ್ ಜಗತ್ತಾಪ್, ದಾಮೋದರ್ ರಾವ್ ಜಗತ್ತಾಪ್, ಮಹಿಳಾ ಸಂಚಾಲಕಿ ವತ್ಸಲಾ ಪಿ. ಮಲ್ಲಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.