ಮಹಾನಗರ: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ರವಿವಾರ ಮಧ್ಯಾಹ್ನ ಮಹಾಪೂಜೆ ನಡೆದು ರಥಾರೋಹಣ ನಡೆಯಿತು. ಈ ಕಾರ್ಯದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.
ಸಂಜೆ ಶ್ರೀ ದೇವರ ಮನ್ಮಹಾರಥೋತ್ಸವ, ಬೆಳ್ಳಿ ರಥೋತ್ಸವ, ಚಂದ್ರಮಂಡಲ ಉತ್ಸವ, ಮಹಾಪೂಜೆ, ಭೂತ ಬಲಿ, ಕವಾಟ ಬಂಧನ ಜರಗಿತು. ಜ. 22ರಂದು ಅವಭೃಥ ಸ್ನಾನ, ಕವಾಟೋದ್ಘಾಟನೆ, ಮಹಾಪೂಜೆ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ತ್ರಿಶೂಲ ಸ್ನಾನ, ಸಂಜೆ ಉತ್ಸವ ಬಲಿ ನಡೆಯಲಿದೆ.