Home ಧಾರ್ಮಿಕ ಸುದ್ದಿ ಕದ್ರಿ ದೇವಸ್ಥಾನ: ತೋರಣ, ಉಗ್ರಾಣ ಮುಹೂರ್ತ

ಕದ್ರಿ ದೇವಸ್ಥಾನ: ತೋರಣ, ಉಗ್ರಾಣ ಮುಹೂರ್ತ

1790
0
SHARE

ಮಹಾನಗರ: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಮತ್ತು ಮಹಾದಂಡ ರುದ್ರಾಭಿಷೇಕ ಹಾಗೂ ಮಹಾರುದ್ರಯಾಗದ ಅಂಗವಾಗಿ ಶುಕ್ರವಾರ ಬೆಳಗ್ಗೆ 7ರಿಂದ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಾಹ, ಮಧುಪರ್ಕ, ಅಗ್ನಿಜನನ, ಅಧ್ಯಗಣಯಾಗ ನಡೆಯಿತು.

ಸಂಜೆ 6ರಿಂದ ಸಪ್ತಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಪೂಜೆ, ದಿಕ್ಪಾಲಬಲಿ, ಮಲರಾಯ ಭಂಡಾರ ಆಗಮನ, ಧ್ವಜಾರೋಹಣ, ಕಂಚಿದೀಪ ಬೆಳಗಿಸುವುದು, ಭೇರಿ ತಾಡನ, ಅಂಕುರಾರೋಹಣ, ಉತ್ಸವ ಬಲಿ ಭೂತ ಜರಗಿತು. ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯೋಪಾಸನ ಕಲಾಕೇಂದ್ರದ ವಿದುಷಿ ಶಾಲಿನಿ ಆತ್ಮ ಭೂಷಣ್‌ ಅವರಿಂದ ಭರತನಾಟ್ಯ ಕಾರ್ಯಕ್ರಮ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗಸ್ವರ ವಿಶಾರದ ನಾಗೇಶ್‌ ಬಪ್ಪನಾಡು ಅವರಿಂದ ನಾಗಸ್ವರ ಸಂಗೀತ ಕಚೇರಿ ಹಾಗೂ ರಾತ್ರಿ 8 ರಿಂದ 11 ರವರೆಗೆ ಶರತ್‌ಕುಮಾರ್‌ ಕದ್ರಿ ಅವರ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಕದ್ರಿ ಕ್ಷೇತ್ರ ಮಹಾತ್ಮೆ’ ಯಕ್ಷಗಾನ ನಡೆಯಿತು.

ಇಂದಿನ ಕಾರ್ಯಕ್ರಮಗಳು

ಶ್ರೀ ಕ್ಷೇತ್ರಕದ್ರಿಯಲ್ಲಿ ಮೇ 3ರಂದು ಬೆಳಿಗ್ಗೆ 8ರಿಂದ ನಾಗಸನ್ನಿಧಿಯಲ್ಲಿ ನವಕಪ್ರಧಾನ ಹೋಮ, ಆಶ್ಲೇಷ ಬಲಿ, ತಂಬಿಲ ರಾತ್ರಿ 7ರಿಂದ ಉತ್ಸವ ಬಲಿ, ಭೂತ ಬಲಿ ಜರಗಲಿದೆ.

ಸಂಜೆ 6ರಿಂದ ಧಾರ್ಮಿಕ ಕಾರ್ಯಕ್ರಮ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 4.30 ರಿಂದ ಶಿವಶಕ್ತಿ ನಾಟ್ಯಲಯ ಬೆಂಗಳೂರು ಇದರ ವಿದುಷಿ ಗುಣವತಿ ಕೆ. ಆರ್‌ ತಂಡದವರಿಂದ ಕೂಚುಪುಡಿ- ಭರತನಾಟ್ಯ, ರಾತ್ರಿ 8 ರಿಂದ 11 ರವರೆಗೆ ಕದ್ರಿ ಬ್ರಹ್ಮ ಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ ಮೆಗಾ ಮ್ಯಾಜಿಕ್‌ ಸ್ಟಾರ್‌ ಕುದ್ರೋಳಿ ಗಣೇಶ್‌ ಬಳಗದವರಿಂದ ವಿಸ್ಮಯ ಜಾದೂ ಜರಗಲಿದೆ.

ಕದ್ರಿ ಬ್ರಹ್ಮಕಲಶಾಭಿಷೇಕ ಹಿನ್ನೆಲೆಯಲ್ಲಿ ಸುಮಾರು 125ರಿಂದ 150 ವಾಹನಗಳಲ್ಲಿ ವಿವಿಧ ಹೊರೆಕಾಣಿಕೆ ಕೇಂದ್ರದಿಂದ ಹೊರಡಿದ ವಾಹನಗಳು ಮೇ 3ರಂದು ಮಧ್ಯಾಹ್ನ 2.30ಕ್ಕೆ ಕೇಂದ್ರ ಮೈದಾದಲ್ಲಿ ಜೋಡಣೆಗೊಂಡು 3 ಗಂಟೆಗೆ ಮೆರವಣಿಗೆ ಆರಂಭವಾಗಲಿದೆ. ಕದ್ರಿ ದೇವಸ್ಥಾನದ ಬ್ರಹ್ಮಶ್ರೀ ವಿಠಲದಾಸ ತಂತ್ರಿ, ಆಡಳಿತ ಮೊಕ್ತೇಸರ ಡಾ| ಎ.ಜೆ. ಶೆಟ್ಟಿ, ಪ್ರಮುಖರಾದ ರವಿ ಶೆಟ್ಟಿ, ಪ್ರದೀಪ್‌ ಪೈ ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ವಿಶೇಷ ಚೆಂಡೆ ವಾದನ, ಕಲ್ಲಡ್ಕದ ಕೀಳುಕುದುರೆ, ಬ್ಯಾಂಡು ವಿವಿಧ ವಾದ್ಯ ಘೋಷಣೆಗಳೊಂದಿಗೆ ಹೊರೆಕಾಣಿಕೆ ಮೆರವಣಿಗೆಯು ಕೆ.ಎಸ್‌. ರಾವ್‌ ರಸ್ತೆ, ನವಭಾರತ ವೃತ್ತ, ಬಂಟ್ಸ್‌ಹಾಸ್ಟೆಲ್ ವೃತ್ತದ ಮುಖಾಂತರ ಮಲ್ಲಿಕಟ್ಟೆಗೆ ಸಾಗಿ ದೇವಸ್ಥಾನ ತಲುಪಲಿದೆ.

LEAVE A REPLY

Please enter your comment!
Please enter your name here