Home ಧಾರ್ಮಿಕ ಸುದ್ದಿ ಕದ್ರಿ ದೇವಸ್ಥಾನ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕದ್ರಿ ದೇವಸ್ಥಾನ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

1775
0
SHARE

ಮಹಾನಗರ: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮೇ 2ರಿಂದ 11ರ ವರೆಗೆ ಜರಗಲಿರುವ ಬ್ರಹ್ಮಕಲಶ, ಮಹಾರುದ್ರಯಾಗ, ಮಹಾ ದಂಡರುದ್ರಾಭಿಷೇಕದ ಆಮಂತ್ರಣ ಪತ್ರಿಕೆಯನ್ನು ಎ. 10ರಂದು ಬೆಳಗ್ಗೆ 10ಕ್ಕೆ ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು.ಬ್ರಹ್ಮಕಲಶೋತ್ಸವ ಸಮಿತಿಯ ಮತ್ತು ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರೂ ಆಗಿರುವ ಎ. ಜೆ. ಶೆಟ್ಟಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಎಸ್‌. ಪ್ರದೀಪ್‌ ಕುಮಾರ್‌ಕಲ್ಕೂರ, ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ ವಿಠಲದಾಸ ತಂತ್ರಿ, ರಾಮಣ್ಣ ಅಡಿಗ, ರಾಘವೇಂದ್ರ ಅಡಿಗ, ಶಶಿಧರ ಹೆಗ್ಡೆ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ದಿನೇಶ್‌ ದೇವಾಡಿಗ, ರಂಜನ್‌ಕುಮಾರ್‌, ಸುರೇಶ್‌ಕುಮಾರ್‌, ಹರಿನಾಥ ಜೋಗಿ, ರಾಘವೇಂದ್ರ ಭಟ್‌, ಪುಷ್ಪಲತಾ ಶೆಟ್ಟಿ, ಚಂದ್ರಕಲಾ ದೀಪಕ್‌, ಪ್ರಮುಖರಾದ ಕಿಶೋರ್‌ ಡಿ. ಶೆಟ್ಟಿ, ಪ್ರವೀಣ್‌ಕುಮಾರ್‌, ಅನಂತಕುಮಾರ್‌, ಮೋಹನ್‌ ಕೊಪ್ಪಲ, ಕಿರಣ್‌ ಜೋಗಿ, ಪ್ರದೀಪ್‌ ಆಳ್ವ, ರವಿ ಕುಮಾರ್‌, ಸುಧಾಕರ ರಾವ್‌ ಪೇಜಾವರ, ಅಮಿತಾ ಜೋಗಿ, ವಿಜಯಲಕ್ಷ್ಮೀ ಶೆಟ್ಟಿ, ಜಯಲಕ್ಷ್ಮೀ ಟೀಚರ್‌, ವಿನಯಾನಂದ, ಭಾಗ್ಯಚಂದ್ರ, ಮಹೇಶ್‌ ಪಟೇಲ್‌ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here