ಮಹಾನಗರ: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಮಹೋತ್ಸವ ಮಂಗಳವಾರದಿಂದ ಆರಂಭ ವಾಗಿದ್ದು, ಜ. 25ರ ವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಾವಿರಾರು ಭಕ್ತರು ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಮಂಗಳವಾರ ಬೆಳಗ್ಗೆ ತೀರ್ಥಸ್ನಾನ ನೆರವೇರಿತು. ಸಂಜೆ ಏಳುಪಟ್ಟಣ ಮೊಗ ವೀರ ಮಹಾಸಭಾದವರಿಂದ ಧ್ವಜ ಆರೋಹಣ ನೆರವೇರಿ, ಮಹಾಪೂಜೆ ಸಂಪನ್ನಗೊಂಡಿತು. ಬಳಿಕ ಶ್ರೀ ಮಲರಾಯ ದೈವದ ಭಂಡಾರ ಆಗಮನವಾಯಿತು. ರಾತ್ರಿ ಧ್ವಜಬಲಿ, ಗರುಡಾರೋ ಹಣ, ಉತ್ಸವ ಬಲಿ, ಭೂತ ಬಲಿ, ಕಂಚು ದೀಪ ಬೆಳಗಿಸಲಾಯಿತು. ಬಳಿಕ ಸಣ್ಣ ರಥೋತ್ಸವ ನೆರವೇರಿತು.
ಬುಧವಾರ ಸಂಜೆ ಉತ್ಸವ ಬಲಿ, ರಾತ್ರಿ 10ಕ್ಕೆ ಮಹಾಪೂಜೆ ನಿತ್ಯ ಬಲಿ, ಭೂತ ಬಲಿ, ದೀಪದ ಬಲಿ ಉತ್ಸವ, ಸಣ್ಣ ರಥೋತ್ಸವ ನಡೆಯಲಿದೆ.