Home ಧಾರ್ಮಿಕ ಸುದ್ದಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ

1220
0
SHARE

ಮಹಾನಗರ: ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಲಕ್ಷದೀಪೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು.

ಪ್ರಾರ್ಥನೆಯೊಂದಿಗೆ ಆರಂಭವಾಗಿ ಬಲಿ ಉತ್ಸವಾದಿಗಳು ಹಾಗೂ ಸಣ್ಣ ರಥೋತ್ಸವವು ನೆರವೇರಿದವು. ಅಯ್ಯಪ್ಪ ಭಕ್ತ ವೃಂದದವರಿಂದ ಅಯ್ಯಪ್ಪ ದೇವರಿಗೆ ಬೆಳಗ್ಗೆ ಸೀಯಾಳ ಅಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ದೇಗುಲದ ವತಿಯಿಂದ ಸಾಮೂಹಿಕ ರಂಗಪೂಜೆ ಕಾರ್ಯಕ್ರಮಗಳು ನೆರವೇರಿದವು.

ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಎ. ಜನಾರ್ದನ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ನಿಂಗಯ್ಯ, ದೇಗುಲದ ಅರ್ಚಕ ಮತ್ತು ವ್ಯವಸ್ಥಾಪನ ಸಮಿತಿ ಸದಸ್ಯ ರಾಘವೇಂದ್ರ ಭಟ್‌, ಸುರೇಶ್‌ ಕುಮಾರ್‌, ರಂಜನ್‌ ಕುಮಾರ್‌, ದಿನೇಶ್‌ ದೇವಾಡಿಗ, ಹರಿನಾಥ್‌ ಜೋಗಿ, ಚಂದ್ರಕಲಾ, ಪುಷ್ಪಲತಾ ಶೆಟ್ಟಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here