Home ಧಾರ್ಮಿಕ ಸುದ್ದಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಇಂದು ಅಷ್ಟೋತ್ತರ ಸಹಸ್ರಬ್ರಹ್ಮ ಕಲಶಾಭಿಷೇಕ

ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಇಂದು ಅಷ್ಟೋತ್ತರ ಸಹಸ್ರಬ್ರಹ್ಮ ಕಲಶಾಭಿಷೇಕ

2241
0
SHARE

ಮಹಾನಗರ: ಕದ್ರಿ ಶ್ರೀ ಮಂಜುನಾಥ ಸನ್ನಿಧಿಯಲ್ಲಿ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಮೇ 9ರಂದು ನಡೆಯಲಿದೆ.

ಬೆಳಗ್ಗೆ 7ರಿಂದ ಕಲಶಾಭಿಷೇಕ ಪ್ರಾರಂಭ ಗೊಂಡು 9.35ಕ್ಕೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಬಳಿಕ ಪ್ರಾಚೀನ ಮೂರ್ತಿಗಳ ವಿಶೇಷ ಕಲಶಾಭಿಷೇಕ, ಅವಸ್ರುತ ಬಲಿ, ಮಹಾಪೂಜೆ ಜರಗಲಿದೆ. ಮಧ್ಯಾಹ್ನ 2ರಿಂದ ರಥಾರೋಹಣ, ರಾತ್ರಿ 7ರಿಂದ ಮನ್ಮಹಾರಥೋತ್ಸವ, ಮಹಾದಂಡ ಜೋಡಣೆ, ಹೋಮ, ರಾತ್ರಿ ಉತ್ಸವ ಬಲಿ ಜರಗಲಿದೆ ಎಂದು ಬ್ರಹ್ಮಕಲಶೋತ್ಸವದ ಪ್ರಚಾರ ಸಮಿತಿ ಅಧ್ಯಕ್ಷ ಎಸ್‌. ಪ್ರದೀಪಕುಮಾರ ಕಲ್ಕೂರ ತಿಳಿಸಿದ್ದಾರೆ.

ಸಂಜೆ 6ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ದೇರೆಬೈಲು ವಿಟuಲದಾಸ ತಂತ್ರಿಗಳಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ದುಗ್ಗಣ ಸಾವಂತರು ದೀಪ ಪ್ರಜ್ವಲನೆಗೈಯಲಿದ್ದಾರೆ.

ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ| ಎ. ಜನಾರ್ದನ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಪಶ್ಚಿಮ ವಲಯ ಪೊಲೀಸ್‌ ಮಹಾ ನಿರೀಕ್ಷಕ ಜೆ. ಅರುಣ್‌ ಚಕ್ರವರ್ತಿ, ಶ್ರೀ ಕ್ಷೇತ್ರ ಪೊಳಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ. ರಮಾನಾಥ ರೈ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್‌. ಪ್ರದೀಪಕುಮಾರ ಕಲ್ಕೂರ, ಡಾ| ಬಿ. ಆರ್‌. ಶೆಟ್ಟಿ ದುಬಾೖ, ಕೆನರಾ ಬ್ಯಾಂಕ್‌ ಜನರಲ್ ಮ್ಯಾನೇಜರ್‌ ಎಚ್.ಎನ್‌. ಗೋಪಾಲಕೃಷ್ಣ, ಉದ್ಯಮಿ ಪ್ರದೀಪ ಪೈ, ಬಂಜಾರ ಗ್ರೂಪ್ಸ್‌ನ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ, ಮಾಲತಿ ಮೊಲಿ ಕದ್ರಿ ಮೊದಲಾದವರು ಈ ಸಂದರ್ಭದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಮ್ಮಾನ
ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸಮ್ಮಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮದ ಅಂಗ ವಾಗಿ ಅಪರಾಹ್ನ 3ರಿಂದ ಜಗದೀಶ್‌ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ ‘ಭಕ್ತಿಗಾನ ಸುಧೆ’, ರಾತ್ರಿ 8ರಿಂದ ನಾಟ್ಯ ನಿಲಯದ ಬಾಲಕೃಷ್ಣ ಮಾಸ್ಟರ್‌ ಮಂಜೇಶ್ವರ ಮತ್ತು ತಂಡದಿಂದ ‘ಶಿವಾರ್ಪಣಾ-ನೃತ್ಯ ಗೀತಾ ನಾಟಕ ರೂಪಕ’ ಜರಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷ ಮಂಜುಳ ಶಿವಭಕ್ತ ವೀರಮಣಿ ತಂಡದಿಂದ ಮಹಿಳಾ ತಾಳ ಮದ್ದಳೆ, ಬಾಲ ಯಕ್ಷಕೂಟ ವತಿಯಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ, ಸುರತ್ಕಲ್ ಎಕ್ಸಲೆಂಟ್ ಸುನಿಲ್ ಶೆಟ್ಟಿ ಮತ್ತು ಬಳಗದವರಿಂದ ‘ತುಳುನಾಡ ಸೃಷ್ಟಿ’ ನೃತ್ಯ ವೈಭವ ನಡೆಯಿತು.

ಗಣಪತಿ, ದುರ್ಗಾ ಬಿಂಬ ಪ್ರತಿಷ್ಠೆ
ಬುಧವಾರ ಬ್ರಹ್ಮಕಲಶಾಭಿಷೇಕ, ಮಹಾದಂಡರುದ್ರಾಭಿಷೇಕ,
ಮಹಾರುದ್ರಯಾಗದ ಪ್ರಯುಕ್ತ ಗಣಪತಿ ಯಾಗ, ಪ್ರತಿಷ್ಠಾ ಹೋಮ, ಗಣಪತಿ, ದುರ್ಗಾ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮಹಾಪೂಜೆ, ಶ್ರೀ ಮಂಜುನಾಥ ಸ್ವಾಮಿ
ಸನ್ನಿಧಿಯಲ್ಲಿ ಬ್ರಹ್ಮಕಲಶ ಪೂರಣೆ, ಅಧಿವಾಸ ಹೋಮಗಳು, ಉತ್ಸವ ಬಲಿ, ಭೂತ ಬಲಿ ಜರಗಿತು.

ಇಂದು ಉಚಿತ ಆಟೋರಿಕ್ಷಾ ಸೇವೆ ವಿಶ್ವ ಹಿಂದೂ ಪರಿಷತ್‌ ಬಜರಂಗ ದಳ ಆಟೋ ಚಾಲಕರ ಮಾಲಕರ ಘಟಕ ಮಂಗಳೂರು ವತಿಯಿಂದ ಕದ್ರಿ ಶ್ರೀ ಮಂಜುನಾಥೇಶ್ವರ ದೇವರ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಮೇ 9ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಭಕ್ತರಿಗೆ ಉಚಿತ ಆಟೋರಿಕ್ಷಾ ಸೇವೆ ನೀಡಲಾಗುವುದು. ಅಂದು ಬೆಳಗ್ಗೆ 10 ಗಂಟೆಯಿಂದ ಘಟಕದ 100 ರಿಕ್ಷಾ ಚಾಲಕರು ತಮ್ಮ ಆಟೋಗಳಲ್ಲಿ ದೇವಸ್ಥಾನಕ್ಕೆ ಬರುವ ಮತ್ತು ದೇವಸ್ಥಾನದಿಂದ ಹೋಗುವ ಭಕ್ತರನ್ನು ಸಮೀಪದ ಬಸ್‌ ನಿಲ್ದಾಣದವರೆಗೆ ಉಚಿತವಾಗಿ ಕೊಂಡೊಯ್ಯುವರು. ಉಡುಪಿ ಕಡೆಯಿಂದ ಬರುವ ಭಕ್ತರನ್ನು ಕೆಪಿಟಿ ಬಳಿಯಿಂದ ದೇವಸ್ಥಾನದವರೆಗೆ, ಕಿನ್ನಿಗೋಳಿ, ಹಳೆಯಂಗಡಿ, ಸುರತ್ಕಲ್‌ ಕಡೆಯಿಂದ ಬರುವವರನ್ನು ಬಂಟ್ಸ್‌ಹಾಸ್ಟೆಲ್‌ನಿಂದ, ಕಾರ್ಕಳದಿಂದ ಬರುವವರನ್ನು ಮಲ್ಲಿಕಟ್ಟೆಯಿಂದ, ದೇವಸ್ಥಾನಕ್ಕೆ ಉಚಿತವಾಗಿ ಕರೆದುಕೊಂಡು ಹೋಗಿ ಉಚಿತವಾಗಿ ವಾಪಾಸ್‌ ಅವರವರ ಬಸ್‌ ನಿಲ್ದಾಣಕ್ಕೆ ಬಿಡುವ ವ್ಯವಸ್ಥೆ ಮಾಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್‌ ರಿಕ್ಷಾ ಚಾಲಕರ ಮಾಲಕರ ಘಟಕದ ಅಧ್ಯಕ್ಷ ಪೂಮಾಲೆ, ಬಜರಂಗದಳ ಸಂಚಾಲಕ ಚೇತನ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here