Home ಧಾರ್ಮಿಕ ಕಾರ್ಯಕ್ರಮ ಬಿಂಬ ಶುದ್ಧಿ, ಶಯನಾಧಿವಾಸ

ಬಿಂಬ ಶುದ್ಧಿ, ಶಯನಾಧಿವಾಸ

ಕದ್ರಿ ದೇವಸ್ಥಾನ ಬ್ರಹ್ಮಕಲಶಾಭಿಷೇಕ

1293
0
SHARE

ಕದ್ರಿ : ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಅಷ್ಟೋತ್ತರ ಸಹಸ್ರ ಬ್ರಹ್ಮ ಕಲಶಾಭಿಷೇಕ ಮತ್ತು ಮಹಾದಂಡ ರುದ್ರಾಭಿಷೇಕ, ಮಹಾ ರುದ್ರಯಾಗದ ಪ್ರಯುಕ್ತ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

ಬೆಳಗ್ಗೆ ತತ್ತ್ವ ಹೋಮ, ರಾತ್ರಿ ಗಣಪತಿ, ದುರ್ಗಾ ಸನ್ನಿಧಿಯಲ್ಲಿ ಸಪ್ತ ಶುದ್ಧಿ, ವಾಸ್ತು ರಾಕ್ಷೋಘ್ನ ಹೋಮಗಳು, ಬಿಂಬ ಶುದ್ಧಿ, ಶಯನಾಧಿವಾಸ ಕಾರ್ಯಕ್ರಮ ಜರಗಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೀರ್ತನಾ ಕುಟೀರ ಕುಂಬ್ಳೆ ಅವರಿಂದ ಹರಿಕಥಾ ಸತ್ಸಂಗ, ಪಟ್ಲ ಸತೀಶ್‌ ಶೆಟ್ಟಿ ಬಳಗದವರಿಂದ ‘ಶ್ರೀ ಮಂಜುನಾಥ ಯಕ್ಷ ವೈಭವ’, ಕದ್ರಿ ನೃತ್ಯ ವಿದ್ಯಾಲಯದ ಯು. ಕೆ. ಪ್ರವೀಣ್‌ಕುಮಾರ್‌ ಅವರ ಶಿಷ್ಯರಿಂದ ‘ಶ್ರೀ ಕೃಷ್ಣ ಲೀಲೆ ಕಂಸವಧೆ’ ನೃತ್ಯ ರೂಪಕ ಜರಗಿತು.

ಶ್ರೀ ಕದ್ರಿ ಮಂಜುನಾಥ ಸನ್ನಿಧಿಯಲ್ಲಿ ಮೇ 11ರವರೆಗೆ ಜರಗುವ ಬ್ರಹ್ಮಕಲಶ ಮಹಾರುದ್ರಯಾಗ ಹಾಗೂ ಮಹಾ ದಂಡರುದ್ರಾಭಿಷೇಕದ ಅಂಗವಾಗಿ ಮೇ 8ರಂದು ವಿವಿಧ ಕಾರ್ಯಕ್ರಮಗಳು ಜರಗಲಿವೆ. ಸಂಜೆ 6ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಪುಟ ಶ್ರೀ ನರಸಿಂಹ ಮಠಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್ ಎಸ್‌. ದೀಪ ಪ್ರಜ್ವಲನೆಗೈಯ್ಯಲಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯ ಮಾಜಿ ಆಯುಕ್ತ ಟಿ. ಶ್ಯಾಮ್‌ ಭಟ್ ಅಧ್ಯಕ್ಷತೆ ವಹಿಸುವರು.

ಅತಿಥಿಗಳಾಗಿ ಮಂಗಳೂರು ನಗರ ಪೊಲೀಸ್‌ ಆಯುಕ್ತ ಸಂದೀಪ ಪಾಟೀಲ್, ದ.ಕ. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಸೆಲ್ವಮಣಿ, ಉದ್ಯಮಿ ಸರ್ವೋತ್ತಮ ಶೆಟ್ಟಿ ದುಬಾಯಿ, ಭೋಜ ಶೆಟ್ಟಿ ಮುಂಬಯಿ,ಮೊದಲಾದವರು ಉಪಸ್ಥಿತರಿರುವರು.

ಭಾರತೀಯ ಸೇನಾನಿಗಳಾದ ನವೀನ್‌ ಕದ್ರಿ, ಜಯಪ್ರಕಾಶ್‌, ಅಹಲ್ಯಾ ಅವರನ್ನು ಈ ವೇಳೆ ಸಮ್ಮಾನಿಸಲಾಗುವುದು ಎಂದು ಬ್ರಹ್ಮಕಲಶೋತ್ಸವದ ಪ್ರಚಾರ ಸಮಿತಿ ಅಧ್ಯಕ್ಷ ಎಸ್‌. ಪ್ರದೀಪಕುಮಾರ ಕಲ್ಕೂರ ತಿಳಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ: ಮಧ್ಯಾಹ್ನ 3ರಿಂದ ಸಂಜೆ 4ರವರೆಗೆ ಯಕ್ಷ ಮಂಜುಳ ಶಿವಭಕ್ತ ವೀರಮಣಿ ತಂಡದಿಂದ ಮಹಿಳಾ ತಾಳಮದ್ದಳೆ, 4ರಿಂದ ಬಾಲ ಯಕ್ಷಕೂಟ ವತಿಯಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ, ರಾತ್ರಿ 8ರಿಂದ ಸುರತ್ಕಲ್ ಎಕ್ಸಲೆಂಟ್ ಸುನಿಲ್ ಶೆಟ್ಟಿ ಮತ್ತು ಬಳಗದವರಿಂದ ‘ತುಳುನಾಡ ಸೃಷ್ಟಿ’ ನೃತ್ಯ ವೈಭವ ನಡೆಯಲಿದೆ.

LEAVE A REPLY

Please enter your comment!
Please enter your name here