Home ಧಾರ್ಮಿಕ ಸುದ್ದಿ ಕೇಂದ್ರ ಮೈದಾನದಿಂದ ಕದ್ರಿ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ

ಕೇಂದ್ರ ಮೈದಾನದಿಂದ ಕದ್ರಿ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ

1784
0
SHARE

ಮಹಾನಗರ: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಮತ್ತು ಮಹಾ ದಂಡ ರುದ್ರಾಭಿಷೇಕ, ಮಹಾ ರುದ್ರ ಯಾಗದ ಅಂಗವಾಗಿ ಶುಕ್ರವಾರ ನಗರದ ಕೇಂದ್ರ ಮೈದಾನದಿಂದ ಕದ್ರಿ ಶ್ರೀಕ್ಷೇತ್ರಕ್ಕೆ ಹಸುರುವಾಣಿ ಹೊರಕಾಣಿಕೆ ಸಾಗಿತು.

ದೇರೆಬೈಲು ವಿಟuಲದಾಸ ತಂತ್ರಿ ಅವರು ಹೊರೆಕಾಣಿಕೆಗೆ ಚಾಲನೆ ನೀಡಿದರು. ಮೆರವಣಿಗೆಯು ಕೇಂದ್ರ ಮೈದಾನದಿಂದ ಹಂಪನಕಟ್ಟೆ, ಕೆ.ಎಸ್‌. ರಾವ್‌ ರಸ್ತೆ, ಬಂಟ್ಸ್‌ ಹಾಸ್ಟೆಲ್ ವೃತ್ತದ ಮೂಲಕ ಮಲ್ಲಿಕಟ್ಟೆಗೆ ಸಾಗಿ ಶ್ರೀದೇಗುಲದ ತಲುಪಿತು.

ಶ್ರೀ ಕ್ಷೇತ್ರ ಕದ್ರಿಯಲ್ಲಿ ಮೇ 2ರಿಂದ 11ರ ವರೆಗೆ ಜರಗುವ ಬ್ರಹ್ಮಕಲಶ ಮಹಾರುದ್ರಯಾಗ ಹಾಗೂ ಮಹಾದಂಡ ರುದ್ರಾಭಿಷೇಕದ ಅಂಗವಾಗಿ ಮೇ 4ರಂದು ಬೆಳಗ್ಗೆ 8ರಿಂದ ಶಾಸ್ತಾವು ಸನ್ನಿಧಿಯಲ್ಲಿ ಪ್ರಧಾನ ಹೋಮ, ದ್ರವ್ಯ ಕಲಶಾಭಿಷೇಕ ರಾತ್ರಿ 7 ಗಂಟೆಯಿಂದ ದಿಕ್ಪಾಲ ಹೋಮ ಉತ್ಸವ ಬಲಿ, ಭೂತ ಬಲಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ 4.30ರಿಂದ 6 ಗಂಟೆ ಯವರೆಗೆ ನೃತ್ಯ ಭಾರತಿ ಸಂಸ್ಥೆಯ ಗುರು ವಿದುಷಿ ಗೀತಾ ಸರಳಾಯ ಮತ್ತು ವಿದುಷಿ ರಶ್ಮಿ ಚಿದಾನಂದ ಬಳಗದವರಿಂದ ನೃತ್ಯ ಸತ್ಯ-ನೃತ್ಯಯಜ್ಞ-ನೃತ್ಯ ರೂಪಕ ನಡೆಯಲಿದೆ. ರಾತ್ರಿ 8 ಗಂಟೆಯಿಂದ 11ರ ವರೆಗೆ ಕದಿರೆಯ ಕಲಾವಿದರು ಮತ್ತು ಶ್ರೀ ಲಲಿತೆ ತಂಡದವರಿಂದ ‘ತಿರುಪತಿ ತಿಮ್ಮಪ್ಪೆ’ ತುಳು ಪೌರಾಣಿಕ ನಾಟಕ ನಡೆಯಲಿದೆ.
ಇಂದಿನ ಕಾರ್ಯಕ್ರಮ

LEAVE A REPLY

Please enter your comment!
Please enter your name here