Home ಧಾರ್ಮಿಕ ಸುದ್ದಿ ಕದ್ರಿ ಕ್ಷೇತ್ರದಲ್ಲಿ ಶ್ರೀ ದೇವರ ರಥಾರೋಹಣ

ಕದ್ರಿ ಕ್ಷೇತ್ರದಲ್ಲಿ ಶ್ರೀ ದೇವರ ರಥಾರೋಹಣ

403
0
SHARE

ಮಹಾನಗರ: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ ಮಂಗಳವಾರ ಮಧ್ಯಾಹ್ನ ಮಹಾಪೂಜೆ ನಡೆದು ರಥಾರೋಹಣ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.

ಸಂಜೆ ಶ್ರೀ ದೇವರ ಮನ್ಮಹಾರಥೋತ್ಸವ, ಬೆಳ್ಳಿ ರಥೋತ್ಸವ, ಚಂದ್ರಮಂಡಲ ಉತ್ಸವ, ಮಹಾಪೂಜೆ, ಭೂತಬಲಿ ಮತ್ತು ಕವಾಟ ಬಂಧನ ಜರಗಿತು.

ಇಂದಿನ ಕಾರ್ಯಕ್ರಮ

ಜ. 23ರಂದು ಅವಭೃತ ಸ್ನಾನ ನಡೆಯಲಿದ್ದು, ಬೆಳಗ್ಗೆ 7 ಗಂಟೆಗೆ ಶ್ರೀ ಮಂಜುನಾಥ ದೇವರ ಕವಾಟೋದ್ಘಾಟನೆ ಮತ್ತು ಮಹಾಪೂಜೆ, ಅನಂತರ ತುಲಾಭಾರ ಸೇವೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ತ್ರಿಶೂಲ ಸ್ನಾನ ನಡೆಯಲಿದೆ. ರಾತ್ರಿ 7.30ಕ್ಕೆ ಉತ್ಸವ ಬಲಿ, ಚಂದ್ರಮಂಡಲ ಉತ್ಸವ, ರಾತ್ರಿ 10.30ಕ್ಕೆ ಅವಭೃಥ‌ಸ್ನಾನ, ಧ್ವಜಾರೋಹಣ ನಡೆಯಲಿದೆ.

ಜ. 25ರಂದು ಬೆಳಗ್ಗೆ 10 ಗಂಟೆಗೆ ಶ್ರೀ ದೇವಸ್ಥಾನದಿಂದ ಶ್ರೀ ಮಲರಾಯ ದೈವದ ಭಂಡಾರ ಹೊರಡಲಿದೆ. ಮಧ್ಯಾಹ್ನ 12 ಗಂಟೆಗೆ ಸಂಪ್ರೋಕ್ಷಣೆ, ಶ್ರೀ ಅಣ್ಣಪ್ಪ ದೈವಕ್ಕೆ ವಾರ್ಷಿಕ ಪರ್ವ ಸೇವೆ ನಡೆಯಲಿದೆ. ರಾತ್ರಿ 9 ಗಂಟೆಗೆ ಶ್ರೀ ಮಲರಾಯ ಹಾಗೂ ಪರಿವಾರ ದೈವಗಳ ನೇಮ ನಡೆಯಲಿದೆ.

LEAVE A REPLY

Please enter your comment!
Please enter your name here