Home ಧಾರ್ಮಿಕ ಸುದ್ದಿ ಕದ್ರಿ: ಇಂದಿನಿಂದ ಬ್ರಹ್ಮಕಲಶಾಭಿಷೇಕ

ಕದ್ರಿ: ಇಂದಿನಿಂದ ಬ್ರಹ್ಮಕಲಶಾಭಿಷೇಕ

1532
0
SHARE

ಮಹಾನಗರ: ಕದ್ರಿ ಶ್ರೀ ಮಂಜುನಾಥ ಹಾಗೂ ಪರಿವಾರ ದೇವರಿಗೆ 1,008 ಬ್ರಹ್ಮಕಲಶಾಭಿಷೇಕ ಹಾಗೂ ಮಹಾದಂಡರುದ್ರಾಭಿಷೇಕ ಮಹೋತ್ಸವವು ಮೇ 2ರಿಂದ ಭಕ್ತಿ ಶ್ರದ್ಧೆಯಿಂದ ಆರಂಭಗೊಂಡು ಮೇ 10ರವರೆಗೆ ಶ್ರೀ ರಾಜಾನಿರ್ಮಲನಾಥ್‌ ಜೀ ಅವರ ಉಪಸ್ಥಿತಿಯಲ್ಲಿ ದೇರೆಬೈಲು ಬ್ರಹ್ಮಶ್ರೀ ವಿಟuಲದಾಸ್‌ ತಂತ್ರಿವರೇಣ್ಯರ ನೇತೃತ್ವದಲ್ಲಿ ನೆರವೇರಲಿದೆ. ಲಕ್ಷಾಂತರ ಭಕ್ತರು ಈ ಪುಣ್ಯಕಾರ್ಯದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಬ್ರಹ್ಮಕಲಶೋತ್ಸವದ ಅಂಗವಾಗಿ ದೇವಾಲಯವನ್ನು ಹೂವು ಹಾಗೂ ವಿದ್ಯು ದ್ದೀಪಾಲಂಕಾರದಿಂದ ಅಲಂಕರಿಸಲಾಗಿದೆ. ಪಾರ್ಕಿಂಗ್‌ಗೆ ಕದ್ರಿ ಕ್ರೀಡಾಂಗಣ ಹಾಗೂ ಇನ್ನಿತರ ಮೂರು ಜಾಗಗಳನ್ನು ಗುರುತಿಸಲಾಗಿದೆ.

ಮೇ 9ರಂದು ಬೆಳಗ್ಗೆ 9.35ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಂಜುನಾಥ ದೇವರಿಗೆ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಹಾಗೂ ಮೇ 10ರಂದು ಮಹಾದಂಡರುದ್ರಾಭಿಷೇಕ, ಹಾಗೂ ಮಹಾರುದ್ರಯಾಗ ನೆರವೇರಲಿದೆ. ಮೇ 2ರಿಂದ 11ರವರೆಗೆ ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳು ನಡೆಯಲಿದ್ದು, ಪ್ರತೀ ದಿನ ಸಂಜೆ 6ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಇಂದು ದೈವದ ಭಂಡಾರ ಆಗಮನ

ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಮೇ 2ರಂದು ಹಸುರು ಹೊರೆಕಾಣಿಕೆ ಹಾಗೂ ಮಲರಾಯ ದೈವದ ಭಂಡಾರ ಗಾಣದ ಕೊಟ್ಯ ಕದ್ರಿ ಕಂಬಳ ದೈವಸ್ಥಾನದಿಂದ ದೇವಸ್ಥಾನಕ್ಕೆ ಹೊರಡಲಿರುವುದು ಎಂದು ಸಂಘಟಕ ಕಾರ್ಪೊರೇಟರ್‌ ಡಿ.ಕೆ. ಅಶೋಕ್‌ ಕುಮಾರ್‌ ತಿಳಿಸಿದ್ದಾರೆ.

ಮೇ 2ರಂದು ಬೆಳಗ್ಗೆ 7ಕ್ಕೆ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಾಹ, ಮಧುಪರ್ಕ, ಅಗ್ನಿಜನನ, ಅಧ್ವಗಣಯಾಗ ನಡೆಯಲಿದೆ. ಸಂಜೆ 6 ರಿಂದ ಸಪ್ತಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ದಿಕ್ಪಾಲಬಲಿ, ಮಲರಾಯ ಭಂಡಾರ ಆಗಮನ, ಧ್ವಜಾರೋಹಣ, ಕಂಚಿ ದೀಪ ಬೆಳಗಿ, ಭೇರೀತಾಡನ, ಅಂಕುರಾರೋಹಣ, ಉತ್ಸವ ಬಲಿ, ಭೂತಬಲಿ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೇ 2ರಂದು ಸಂಜೆ 4ರಿಂದ 5ರವರೆಗೆ ವಿದುಷಿ ಶಾಲಿನಿ ಆತ್ಮಭೂಷಣ್‌, ನೃತ್ಯೋಪಾಸನ ಕಲಾಕೇಂದ್ರದ ಭರತನಾಟ್ಯ ಸಂಜೆ 5 ರಿಂದ 6ರವರೆಗೆ ನಾಗೇಶ್‌ ಬಪ್ಪನಾಡು ಅವರಿಂದ ‘ನಾಗಸ್ವರ’ ಸಂಗೀತ ಕಚೇರಿ ಹಾಗೂ ರಾತ್ರಿ 8 ರಿಂದ 11ರವರೆಗೆ ಶರತ್‌ ಕುಮಾರ್‌ ಕದ್ರಿ ಅವರ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಕದ್ರಿ ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನವಾಗಲಿದೆ.

ಇಂದಿನ ಕಾರ್ಯಕ್ರಮ
ಮೇ 2ರಂದು ಬೆಳಗ್ಗೆ 7ಕ್ಕೆ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಾಹ, ಮಧುಪರ್ಕ, ಅಗ್ನಿಜನನ, ಅಧ್ವಗಣಯಾಗ ನಡೆಯಲಿದೆ. ಸಂಜೆ 6 ರಿಂದ ಸಪ್ತಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ದಿಕ್ಪಾಲಬಲಿ, ಮಲರಾಯ ಭಂಡಾರ ಆಗಮನ, ಧ್ವಜಾರೋಹಣ, ಕಂಚಿ ದೀಪ ಬೆಳಗಿ, ಭೇರೀತಾಡನ, ಅಂಕುರಾರೋಹಣ, ಉತ್ಸವ ಬಲಿ, ಭೂತಬಲಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೇ 2ರಂದು ಸಂಜೆ 4ರಿಂದ 5ರವರೆಗೆ ವಿದುಷಿ ಶಾಲಿನಿ ಆತ್ಮಭೂಷಣ್‌, ನೃತ್ಯೋಪಾಸನ ಕಲಾಕೇಂದ್ರದ ಭರತನಾಟ್ಯ ಸಂಜೆ 5 ರಿಂದ 6ರವರೆಗೆ ನಾಗೇಶ್‌ ಬಪ್ಪನಾಡು ಅವರಿಂದ ‘ನಾಗಸ್ವರ’ ಸಂಗೀತ ಕಚೇರಿ ಹಾಗೂ ರಾತ್ರಿ 8 ರಿಂದ 11ರವರೆಗೆ ಶರತ್‌ ಕುಮಾರ್‌ ಕದ್ರಿ ಅವರ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಕದ್ರಿ ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನವಾಗಲಿದೆ.

LEAVE A REPLY

Please enter your comment!
Please enter your name here