Home ಧಾರ್ಮಿಕ ಸುದ್ದಿ ಕಂದ್ರಪ್ಪಾಡಿ ರಾಜ್ಯದೈವ, ಪುರುಷ ದೈವ ಜಾತ್ರೆ, ಸಮ್ಮಾನ

ಕಂದ್ರಪ್ಪಾಡಿ ರಾಜ್ಯದೈವ, ಪುರುಷ ದೈವ ಜಾತ್ರೆ, ಸಮ್ಮಾನ

783
0
SHARE

ಸುಬ್ರಹ್ಮಣ್ಯ : ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ರಾಜ್ಯದೈವ ಮತ್ತು ಪುರುಷ ದೈವ ದೈವಸ್ಥಾನದಲ್ಲಿ ವಾರ್ಷಿಕ ಕಂದ್ರಪ್ಪಾಡಿ ಜಾತ್ರೆ ಸಾವಿರಾರು ಭಕ್ತ ಸಮೂಹದ ಸಮ್ಮುಖದಲ್ಲಿ ಇತ್ತೀಚೆಗೆ ವೈಭವದಿಂದ ನಡೆಯಿತು.

ಶುದ್ಧಿ ಕಲಶ, ಪ್ರತಿಷ್ಠಾ ದಿನಾಚರಣೆ ಹಾಗೂ ಪೂಜಾ ಕಾರ್ಯಕ್ರಮ ನಡೆದ ಬಳಿಕ ಜಾತ್ರೆ ಪೂರ್ವ ಪದ್ಧತಿಯಂತೆ ಧ್ವಜಾರೋಹಣ ಮೂಲಕ ಚಾಲನೆ ನೀಡಲಾಯಿತು.

ರುದ್ರಚಾಮುಂಡಿ ದೈವದ ಭಂಡಾರ ಬಂದು ದೈವಸ್ಥಾನದಲ್ಲಿ ಉಗ್ರಾಣ ತುಂಬಿ, ತಳೂರು ಹಾಗೂ ಕಂದ್ರಪ್ಪಾಡಿ ಮಾಳಿಗೆಯಿಂದ ಶ್ರೀದೈವಗಳ ಭಂಡಾರ ಹೊರಟು ದೈವಸ್ಥಾನದಲ್ಲಿ ರಾಜ್ಯ ದೈವದ ನೇಮ ಜರುಗಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂಗನವಾಡಿ ಹಾಗೂ ಸ್ಥಳೀಯ ಶಾಲಾ ಮಕ್ಕಳಿಂದ ಹಾಗೂ ಊರವರಿಂದ ವಿವಿಧ ವಿನೋದಾವಳಿ, ನೃತ್ಯ ವೈಭವ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪಿ.ಸಿ. ಜಯರಾಮ ಅವರನ್ನು ಸಮ್ಮಾನಿಸಲಾಯಿತು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸಮ್ಮಾನಿಸಿದರು. ದೈವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಾಳಿಕಾ ಪ್ರಸಾದ್‌ ಮುಂಡೋಡಿ, ಸದಸ್ಯರಾದ ಸೋಮಶೇಖರ ಕೇವಳ, ಅಚ್ಯುತ ಗೌಡ ಮುಂಡೋಡಿ, ಅಜಯ್‌ ವಾಲ್ತಾಜೆ, ಗಿರಿಜಾ ವಾಸುದೇವ ಪೈಕ, ವೇಣುಕುಮಾರ್‌ ಚಿತ್ತಡ್ಕ, ಓಂಪ್ರಕಾಶ್‌ ಮುಂಡೋಡಿ, ಉಪಸ್ಥಿತರಿದ್ದರು. ಬಳಿಕ ಕೋದಂಡರಾಮ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದವರಿಂದ ವೀರಮಣಿ ಶ್ರೀ ನಿವಾಸ ಕಲ್ಯಾಣ-ರತಿಕಲ್ಯಾಣ ಯಕ್ಷಗಾನ ಬಯಲಾಟ ನಡೆಯಿತು.

LEAVE A REPLY

Please enter your comment!
Please enter your name here