ಉಡುಪಿ: ನವರಾತ್ರಿಯ ಪರ್ವಕಾಲದ ದುರ್ಗಾಷ್ಟಮಿಯ ದಿನ ಶ್ರೀಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಯವರು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಜೀರ್ಣೋದ್ಧಾರದ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಿದರು.
ದೇವಳದ ಆಡಳಿತ ಮೊಕ್ತೇಸರ ಕೆ.ಶ್ರೀನಿವಾಸ್ ಹೆಬ್ಟಾರ್ ಸ್ವಾಮಿಜಿಯವರನ್ನು ಸ್ವಾಗತಿಸಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಅರ್ಚಕ ಕೆ. ಶ್ರೀಶ ಉಪಾಧ್ಯಅವರು
ಸ್ವಾಮಿಜಿಯವರಿಗೆ ಗೌರವ ಸಲ್ಲಿಸಿದರು.
ದೇವಳದ ಜೀರ್ಣೋದ್ಧಾರದ ಪೂರ್ವತಯಾರಿಯ ಬಗ್ಗೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರತ್ನಾಕರ ಡಿ. ಶೆಟ್ಟಿ ಹಾಗೂ ಕಾರ್ಯದರ್ಶಿ ಡಾ| ವಿಜಯೇಂದ್ರರಾವ್ ಅವರು ವಿವರಿಸಿದರು. ಶ್ರೀ ಮಠದ ವತಿಯಿಂದ ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿ ಜೀರ್ಣೋದ್ಧಾರ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ನಿರ್ವಿಘ್ನವಾಗಿ ನೆರವೇರುವಂತೆ ಹಾರೈಸಿ, ಫಲ ಮಂತ್ರಾಕ್ಷತೆ ನೀಡಿದರು. ದೇವಳದ ತಂತ್ರಿಗಳಾದ ಗೋವರ್ಧನ ತಂತ್ರಿಗಳು ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದರು.
ಈ ಜೀರ್ಣೋದ್ಧಾರ ದೇಣಿಗೆ ಸಂಗ್ರಹಕ್ಕೆ ಪ್ರಪ್ರಥಮ ಮೂಲ ಧನವನ್ನು ಪರ್ಯಾಯ ಪೀಠಾಧಿಪತಿಗಳಾದ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು
ನೀಡಿ ಆಶೀರ್ವಚಿಸಿದರು. ದೇವಳದ ವಾಸ್ತು ತಜ್ಞ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಆಡಳಿತ ಮಂಡಳಿ ಸದಸ್ಯರಾದ ಸದಾಶಿವ ದೂಮಣ್ಣ ಶೆಟ್ಟಿ. ಸಹನಾ ಎಲ್, ಭಟ್, ಶ್ರೀನಿವಾಸ್ರಾವ್, ಆಶಾ ಶ್ರೀನಿವಾಸ್, ಗಿರೀಶ್ ನಾಯ್ಕ, ಶಿವಕುಮಾರ್, ಭೋಜ ಶೇರಿಗಾರ್ ಮೊದಲಾದವರು ಉಪಸ್ಥಿತರಿದ್ದರು.