Home ಧಾರ್ಮಿಕ ಸುದ್ದಿ ಕಡಂಬು: ದೈವ ಸಾನ್ನಿಧ್ಯಗಳ ಪುನಃಪ್ರತಿಷ್ಠೆ, ಕಲಶಾಭಿಷೇಕ, ನರ್ತನ ಸೇವೆ

ಕಡಂಬು: ದೈವ ಸಾನ್ನಿಧ್ಯಗಳ ಪುನಃಪ್ರತಿಷ್ಠೆ, ಕಲಶಾಭಿಷೇಕ, ನರ್ತನ ಸೇವೆ

1293
0
SHARE

ವಿಟ್ಲ : ವಿಟ್ಲಪಟ್ನೂರು ಗ್ರಾಮದ ಕಡಂಬು ಧರ್ಮ ಚಾವಡಿಯ ಶ್ರೀ ಶಾಸ್ತಾರ, ರಕ್ತೇಶ್ವರೀ, ಉಳ್ಳಾಲ್ತಿ, ಮಲರಾಯಿ, ಗುಳಿಗ, ಕೊರತಿ ದೈವ ಸಾನ್ನಿಧ್ಯಗಳ ಪುನಃ ಪ್ರತಿಷ್ಠೆ, ಕಲಶಾಭಿಷೇಕ, ನರ್ತನ ಸೇವೆ ನಡೆಯಿತು.

ಬ್ರಹ್ಮಶ್ರೀ ಕುಂಟುಕುಡೇಲು ಗುರುರಾಜ ತಂತ್ರಿಯವರ ನೇತೃತ್ವದಲ್ಲಿ ವೇ| ಮೂ| ಭಾರ್ಗವ ಉಡುಪ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆ ಮಹಾಗಣಪತಿ ಹೋಮ, ಕಲಶ ಪ್ರತಿಷ್ಠೆ, ಚಂಡಿಕಾ ಹೋಮ ಜರಗಿತು. ಬಳಿಕ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ದೈವಗಳಿಗೆ ತಂಬಿಲ, ವನಶಾಸ್ತಾರನಿಗೆ ಕಲ್ಪೋಕ್ತ ಪೂಜೆ, ಚಂಡಿಕಾ ಹೋಮದ ಪೂರ್ಣಾಹುತಿ, ನಡಾವಳಿಗಳ ನಿರ್ಣಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ವಿಟ್ಲ ಅರಮನೆಯ ಜಯರಾಮ ಬಲ್ಲಾಳ್‌ ಕೆ., ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ಟ, ವಾಸ್ತುತಜ್ಞ ಮುಳಿಯಾಲ ಪ್ರಸನ್ನ ಕುಮಾರ, ಹೇಮಾವತಿ ಕೆ. ಆಳ್ವ, ಕಿನ್ನಿಮಜಲು ಬೀಡು ರಾಮಣ್ಣ ಆಳ್ವ, ಕಿನ್ನಿಮಜಲು ಬೀಡು ಮಹಾಬಲ ರೈ, ಸತೀಶ್‌ ಕುಮಾರ್‌ ಆಳ್ವ ಇರಾಬಾಳಿಕೆ, ಚೌಟ ಇಂಡೇನ್‌ ಗ್ಯಾಸ್‌ ಮಾಲಕ ಜಗನ್ನಾಥ ಚೌಟ ಬದಿಗುಡ್ಡೆ, ದಾಮೋದರ ಬಿ.ಎಂ. ಮಾರ್ನಬೈಲು, ಲಯನ್‌ 317 ಡಿ ಜಿಲ್ಲೆಯ ಎರಡನೇ ಉಪಗವರ್ನರ್‌ ವಸಂತ ಶೆಟ್ಟಿ, ಕುಳಾಲು ರಾಮದಾಸ ಭಂಡಾರಿ, ಕುಳಾಲು ವಾರಾಹೀ ಯುವ ವೃಂದದ ಕೋಶಾಧಿಕಾರಿ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಉದ್ಯಮಿ ಮಾಧವ ಮಾವೆ, ಮಂಜುಳಾ ಮಾಧವ ಮಾವೆ, ದಿನೇಶ್‌ ಆಳ್ವ, ಮಾಲಿನಿ ಡಿ. ಆಳ್ವ, ಶೆಲ್ಟರ್‌ ಅಸೋಸಿಯೇಟ್ಸ್‌ನ ಸಂತೋಷ್‌ ಶೆಟ್ಟಿ ಪೆಲ್ತಡ್ಕ, ಚಂದ್ರಶೇಖರ ರೈ ವಿಟ್ಲ, ಆಶಾ ಸತೀಶ್‌ ಆಳ್ವ, ಸಮೀಕ್ಷಾ ಆಳ್ವ, ಸಾಕ್ಷತ್‌ ಆಳ್ವ, ಅರ್ಪಿತ್‌ ಆಳ್ವ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here