Home ಧಾರ್ಮಿಕ ಸುದ್ದಿ ಕಡಬ: ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ, ಸ್ವಾಮಿ ಕೊರಗಜ್ಜ ದೈವದ ನೇಮ

ಕಡಬ: ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ, ಸ್ವಾಮಿ ಕೊರಗಜ್ಜ ದೈವದ ನೇಮ

1627
0
SHARE

ಕಡಬ : ಕೋಡಿಂಬಾಳ ಗ್ರಾಮದ ಗುರಿಯಡ್ಕ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಗಳು ಮತ್ತು ಸ್ವಾಮಿ ಕೊರಗಜ್ಜ ದೈವದ ನೇಮ ಎರಡು ದಿನಗಳ ಕಾಲ ಜರಗಿತು. ಬೆಳಗ್ಗೆ ಗಣಪತಿ ಹೋಮ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮೊಗೇರ್ಕಳ ದೈವಗಳ ಗರಡಿ ಇಳಿದು, ಹಾಲು ಕುಡಿಯುವುದು, ತನ್ನಿ ಮಾಣಿಗ ಗರಡಿ ಇಳಿಯುವುದು ನಡೆಯಿತು. ಮರುದಿನ ಸ್ವಾಮಿ ಕೊರಗಜ್ಜ ದೈವದ ನೇಮ ನಡೆಯಿತು. ಸಾರ್ವಜನಿಕರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿಕೊಂಡರು.

ಪರಿಚಾರಕರಾದ ಕರಿಯ ಗುರಿಯಡ್ಕ, ಚೋಮ ಗುರಿಯಡ್ಕ, ಬಾಬು ದಂಡುಗುರಿ, ಸೂರಪ್ಪ ಗುರಿಯಡ್ಕ, ಐತ್ತ ದಂಡುಗುರಿ ಸಹಕರಿಸಿದರು. ಮುತ್ತ ಅಜಿಲ ಐತ್ತೂರು ಸ್ವಾಮಿ ಕೊರಗಜ್ಜ ದೈವದ ನರ್ತನ ಸೇವೆ ಮಾಡಿದರು. ಮೊಗೇರ್ಕಳ ದೈವಗಳ ನರ್ತನವನ್ನು ಪ್ರಶಾಂತ್‌, ಲೋಕೇಶ್‌, ಕುಂಞ ಮತ್ತು ತನ್ನಿಮಾನಿಗ ದೈವದ ನರ್ತನವನ್ನು ಚಿತ್ರಪ್ರಕಾಶ್‌
ನೆರವೇರಿಸಿದರು. ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ಸೇವಾ ಟ್ರಸ್ಟ್‌ನ ಅಧ್ಯಕ್ಷ ಹರೀಶ್‌ ನೇಲಡ್ಕ, ಕಾರ್ಯದರ್ಶಿ ಗಣೇಶ್‌ ಪಟ್ರೋಡಿ, ಖಜಾಂಚಿ ವಿನಯ ಗುರಿಯಡ್ಕ, ನೇಮ ಸಮಿತಿ ಗೌರವಾಧ್ಯಕ್ಷ ಚೋಮ ದಂಡುಗುರಿ, ಅಧ್ಯಕ್ಷ ರಾಘವ ದಂಡುಗುರಿ, ಕಾರ್ಯದರ್ಶಿ ರಾಘವ ಪಟ್ರೋಡಿ, ಕೋಶಾಧಿಕಾರಿ ಕಿಟ್ಟು ಗುರಿಯಡ್ಕ, ಆಡಳಿತ ಮೋಕೇಸ್ತರರಾದ ಚೋಮ ಕಲ್ಪುರೆ, ಕರಿಯ ಗುರಿಯಡ್ಕ, ಮತ್ತಡಿ ದಂಡುಗುರಿ, ಬಾಬು ದಂಡುಗುರಿ ಸಹಕರಿಸಿದರು.

LEAVE A REPLY

Please enter your comment!
Please enter your name here