Home ಧಾರ್ಮಿಕ ಸುದ್ದಿ ಕಡಬ: ದುರ್ಗಾಂಬಿಕಾ ದೇಗುಲದಲ್ಲಿ ನಿಶಿಪೂರ್ಣ ಭಜನೆ

ಕಡಬ: ದುರ್ಗಾಂಬಿಕಾ ದೇಗುಲದಲ್ಲಿ ನಿಶಿಪೂರ್ಣ ಭಜನೆ

1711
0
SHARE

ಕಡಬ : ಚಂದ್ರ ಗ್ರಹಣದ ಪ್ರಯುಕ್ತ ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದದಲ್ಲಿ ಶ್ರೀ ದುರ್ಗಾಂಬಿಕಾ ಭಜನ ಮಂಡಳಿ ಹಾಗೂ ಜಿಲ್ಲೆಯ ಪ್ರಸಿದ್ಧ ಭಜನ ಪಟುಗಳಿಂದ ಶುಕ್ರವಾರ ರಾತ್ರಿ ನಿಶಿಪೂರ್ಣ ಭಜನೆ ಜರಗಿತು.

ಶ್ರೀ ದುರ್ಗಾಂಬಿಕಾ ಭಜನ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾೖಕ್‌ ಹಾಗೂ ಕಾರ್ಯದರ್ಶಿ ಮನೋಹರ ರೈ ಬೆದ್ರಾಜೆ ಅವರ ನೇತೃತ್ವದಲ್ಲಿ ಜರಗಿದ ಭಜನ ಕಾರ್ಯಕ್ರಮದಲ್ಲಿ ಜಿಲ್ಲೆ ಪ್ರಸಿದ್ಧ ಭಜನ ಪಟುಗಳಾದ ಜಿತೇಂದ್ರ ಶೆಟ್ಟಿ ಕಾರ್ಯಾನ, ಭಾಸ್ಕರ ಶೆಟ್ಟಿ ಕಾರ್ಯಾನ, ನವೀನ್‌ ಶೆಟ್ಟಿ ವಾಮದಪದವು, ವಿಶ್ವನಾಥ ಆಚಾರ್ಯ ವಾಮದಪದವು, ಸತೀಶ್‌ ಪೂಂಜ ವಾಮದಪದವು, ಗೋಪಾಲಕೃಷ್ಣ ಪೈ ಕರಾಯ, ಗೌರಿಪ್ರಸಾದ ಗುರುವಾಯನಕೆರೆ ಭಜನೆಯಲ್ಲಿ ಭಾಗವಹಿಸಿದರು. ದೇವಸ್ಥಾನದ ಅರ್ಚಕ ಪ್ರಶಾಂತ ಕೆದಿಲಾಯ ಅವರು ಪ್ರಾರ್ಥನೆ ನೆರವೇರಿಸಿದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಪ್ರಮುಖರಾದ ಕೃಷ್ಣ ಶೆಟ್ಟಿ, ಪುಲಸ್ತಾ ರೈ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಆನಂದ ಅಂಗಡಿಮನೆ, ನೀಲಾವತಿ ಶಿವರಾಮ್‌, ಚಂದ್ರಶೇಖರ ಕರ್ಕೇರ ಉಪಸ್ಥಿತರಿದ್ದರು.

ದೇವಸ್ಥಾನಗಳಲ್ಲಿ ಜನಸಂದಣಿ ಶುಕ್ರವಾರ ರಾತ್ರಿ ಗುರುಪೂರ್ಣಿಮೆ ಹಾಗೂ ಗ್ರಹಣವಿತ್ತು. ಹೀಗಾಗಿ, ಶನಿವಾರ ಬೆಳಗ್‌ಗೆ ಪರಿಸರದ ದೇವಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಕುಟ್ರಾಪ್ಪಾಡಿಯ ಕೇಪು ಶ್ರೀ ಪಂಚಮುಖೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಜರಗಿದ ಶನಿಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿದರು.

ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ, ಶ್ರೀ ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನ, ಕುಟ್ರಾಪ್ಪಾಡಿಯ ಕೇಪು ಶ್ರೀ ಲಕ್ಷ್ಮೀಜನಾರ್ದನ ಮತ್ತು ಶ್ರೀ
ಮಹಾಗಣಪತಿ ದೇವಸ್ಥಾನ, ನಾಲೂರು ಶ್ರೀ ಶಂಕರನಾರಾಯಣ ದೇವಸ್ಥಾನ, ಬೊಳ್ಳೂರು ಶ್ರೀ ಷಣ್ಮುಖ ಸುಬ್ರಾಯ ದೇವಸ್ಥಾನ, ಪಿಜಕಳ ಶ್ರೀ ಮಹಾವಿಷ್ಣು ದೇವಸ್ಥಾನ, ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಅಡೆಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಕೋಡಿಂಬಾಳದ ಮಜ್ಜಾರು ಶ್ರೀ ಮಹಾವಿಷ್ಣು ದೇವಸ್ಥಾನ, ಮಾಲೇಶ್ವರ ಶ್ರೀ ವೀರಭದ್ರ ಮತ್ತು ಶ್ರೀ ಮಹಾಬಲೇಶ್ವರ ದೇವಸ್ಥಾನ, ಬಲ್ಯ ಶ್ರೀ ಉಮಾಮಹೇಶ್ವರೀ ದೇವಸ್ಥಾನ, ರಾಮಕುಂಜದ ಶ್ರೀ ರಾಮಕುಂಜೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಜರಗಿತು.

LEAVE A REPLY

Please enter your comment!
Please enter your name here