ಕಡಬ : ಇಲ್ಲಿನ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ ಅವರ ನೇತೃತ್ವದಲ್ಲಿ ಅ. 10ರಿಂದ ನವರಾತ್ರಿ ಪೂಜೆ ಆರಂಭಗೊಂಡಿದ್ದು, 18ರ ತನಕ ಜರಗಲಿದೆ.
ಅ. 17ರಂದು ಮಧ್ಯಾಹ್ನ ಹೊಸ್ತಾರೋಹಣ (ಹೊಸಅಕ್ಕಿ ನೈವೇದ್ಯ) ನಡೆಯಲಿದೆ. ನವರಾತ್ರಿ ಪೂಜೆಯ ವೇಳೆ ರಾತ್ರಿ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯತ್ತಿದ್ದು, 2ನೇ ದಿನದ ಅನ್ನಸಂತರ್ಪಣೆ ಉಡುಪಿಯ ಇಂದ್ರಾಳಿ ದಿ| ಪುಂಡಲೀಕ ಶೆಣೈ ಅವರ ಪುತ್ರ ಪ್ರಶಾಂತ ಶೆಣೈ ಸೇವಾರ್ಥ ನಡೆಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಸದಸ್ಯರಾದ ಧರಣೇಂದ್ರ ಜೈನ್ ಬೆದ್ರಾಜೆ, ಆನಂದ ಆಂಗಡಿಮನೆ, ಶಾಲಿನಿ ಸತೀಶ್ ನಾೖಕ್ ಮೇಲಿನಮನೆ, ನೀಲಾವತಿ ಶಿವರಾಮ್ ಎಂ.ಎಸ್. ಮುಂಗ್ಲಿಮನೆ, ತಮ್ಮಯ್ಯ ನಾೖಕ್ ಕುಕ್ಕೆರೆಬೆಟ್ಟು, ಮೋನಪ್ಪ ಕುಂಬಾರ ಪಾಲೋಳಿ ಹಾಗೂ ಚಂದ್ರಶೇಖರ ಕರ್ಕೇರ ಪೆಲತ್ತೋಡಿ ಉಪಸ್ಥಿತರಿದ್ದರು.
ನವರಾತ್ರಿಯ 8ನೇ ದಿನದ ಅನ್ನಸಂತರ್ಪಣೆಯು ಕಡಬ ದಿ| ನರಸಿಂಹ ಪೈ ಅವರ ಪುತ್ರ ಪಾಂಡುರಂಗ ಪೈ ಮತ್ತು ಮಕ್ಕಳ ಸೇವಾರ್ಥ ಹಾಗೂ 9ನೇ ದಿನದ ಅನ್ನಸಂತರ್ಪಣೆ ಕಡಬ ಆರಕ್ಷಕ ಠಾಣೆಯ ಉಪನಿರೀಕ್ಷಕರು ಹಾಗೂ ಸಿಬಂದಿಯ ಸೇವಾರ್ಥ ನೆರವೇರಲಿದೆ ಎಂದು ವ್ಯವಸ್ಥಾಪನ ಸಮಿತಿಯ ಪ್ರಕಟನೆ ತಿಳಿಸಿದೆ.