Home ಧಾರ್ಮಿಕ ಸುದ್ದಿ ಮೊಸರು ಕುಡಿಕೆ ಉತ್ಸವ: ಸ್ಪರ್ಧೆಗೆ ಚಾಲನೆ

ಮೊಸರು ಕುಡಿಕೆ ಉತ್ಸವ: ಸ್ಪರ್ಧೆಗೆ ಚಾಲನೆ

943
0
SHARE

ಕಡಬ: ಕಡಬ ಪ್ರಖಂಡ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗ ದಳ ವತಿಯಿಂದ ವಿಶ್ವ ಹಿಂದೂ ಪರಿಷತ್‌ ಸ್ಥಾಪನ ದಿನಾಚರಣೆಯ ಅಂಗವಾಗಿ 4ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗೂ ಬೃಹತ್‌ ಶೋಭಾಯಾತ್ರೆ ರವಿವಾರ ಜರಗಿತು.

ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಬೆಳಗ್ಗೆ ಹರೀಶ್‌ ಮಜ್ಜಾರು ಸ್ಮರಣಾರ್ಥ ನಡೆದ ಮುಕ್ತ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಿವಪ್ರಸಾದ್‌ ಕೈಕುರೆ ಉದ್ಘಾಟಿಸಿದರು. ಕಡಬ ಪ್ರಖಂಡ ವಿ.ಹಿಂ.ಪ. ಅಧ್ಯಕ್ಷ ರಾಧಾಕೃಷ್ಣ ಗೌಡ ಕೋಲ್ಪೆ, ಉದ್ಯಮಿ ಹರೀಶ್‌ ಪೈ, ಕಡಬ ಪ್ರಖಂಡ ವಿ.ಹಿಂ.ಪ. ಗೌರವಾಧ್ಯಕ್ಷ ಜನಾರ್ದನ ರಾವ್‌ ಎ., ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಸೀತಾರಾಮ ಗೌಡ ಪೊಸವಳಿಕೆ, ವಾಸುದೇವ ಗೌಡ ಕೊಲ್ಲೆಸಾಗು, ಸಂತೋಷ್‌ ಸುವರ್ಣ, ರವಿ ಪಾದೆರೆ, ಯತೀಶ್‌ಕುಮಾರ್‌ ಹೊಸಮನೆ, ವಿನಯ ಕೋಲ್ಪೆ, ಸುರೇಶ್‌ ಎನ್‌. ಕೋಟೆಗುಡ್ಡೆ, ರಾಮಚಂದ್ರ ಕೋಲ್ಪೆ, ಗಿರೀಶ್‌ ಎ.ಪಿ., ಡಿ.ಕೆ. ಬಾಲಕೃಷ್ಣ ಗೌಡ ಕೋಲ್ಪೆ, ವೆಂಕಟ್ರಮಣ ಕೋಡಿಂಬಾಳ, ಪ್ರಮೋದ್‌ಕುಮಾರ್‌ ರೈ ನಂದುಗುರಿ, ಮಹೇಶ್‌ ಕುಂಟೋಡಿ, ರಘುರಾಮ ನಾೖಕ್‌ ಕುಕ್ಕೆರೆಬೆಟ್ಟು ಉಪಸ್ಥಿತರಿದ್ದರು.

ಅಪರಾಹ್ನ ಕಡಬ ಪೇಟೆಯ ಸಂತೆ ಕಟ್ಟೆಯ ಬಳಿಯಿಂದ ಭಾಗೀರಥಿ ಟವರ್ ತನಕ ಸಾಗಿದ ಶೋಭಾಯಾತ್ರೆಗೆ ಉದ್ಯಮಿ ಹರೀಶ್‌ ಪೈ ಚಾಲನೆ ನೀಡಿ ದರು. ರಸ್ತೆಯುದ್ದಕ್ಕೂ ಅಟ್ಟಿ ಮಡಕೆ ಒಡೆಯುವ ಪ್ರದರ್ಶನ ನಡೆಯಿತು. ಆಕರ್ಷಣೆಯಾಗಿ ಉಡುಪಿ ಶ್ರೀ ಸಾಯಿ ಬಳಗದವರಿಂದ ಸಿಂಗಾರಿ ಮೇಳ, ಕಲ್ಲಡ್ಕ ಶಿಲ್ಪ ಕಲಾ ಆರ್ಟ್ಸ್ ಅವರಿಂದ ಗೊಂಬೆಯಾಟ ಪ್ರದ ರ್ಶನ ನಡೆಯಿತು. ಧಾರ್ಮಿಕ ಸಭೆಯಲ್ಲಿ ಅಟ್ಟಿ ಮಡಿಕೆ ಸ್ಪರ್ಧೆ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

LEAVE A REPLY

Please enter your comment!
Please enter your name here