Home ಧಾರ್ಮಿಕ ಸುದ್ದಿ ಗಂಡಿಬಾಗಿಲು: ಮುಅಲ್ಲಿಂ ದಿನಾಚರಣೆ

ಗಂಡಿಬಾಗಿಲು: ಮುಅಲ್ಲಿಂ ದಿನಾಚರಣೆ

150
0
SHARE
ಗಂಡಿಬಾಗಿಲು ಹಿಮಾಯತುಲ್ ಇಸ್ಲಾಂ ಮದ್ರಸದಲ್ಲಿ ಮುಅಲ್ಲಿಂ ದಿನಾಚರಣೆ ಜರಗಿತು.

ಕಡಬ: ಕುತುಬಿಯಾ ಜುಮಾ ಮಸೀದಿ ಗಂಡಿಬಾಗಿಲು ಇದರ ಅಧೀನದ ಗಂಡಿಬಾಗಿಲು ಹಿಮಾಯತುಲ್ ಇಸ್ಲಾಂ ಮದ್ರಸದಲ್ಲಿ ಮುಅಲ್ಲಿಂ ದಿನಾಚರಣೆಯು ಸಾಮೂಹಿಕ ಪ್ರಾರ್ಥನೆ ಮತ್ತು ಮುಅಲ್ಲಿಂ ತರಬೇತಿಯೊಂದಿಗೆ ಜರಗಿತು.

ಕುತುಬಿಯಾ ಜುಮಾ ಮಸೀದಿ ಖತೀಬ್‌ ಸೆಯ್ಯದ್‌ ಹಾದಿ ಅನಸ್‌ ತಂಙಳ್‌ ಸಮಾರಂಭದ ಅಧ್ಯಕ್ಷತೆ ವಹಿಸಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಮಾತನಾಡಿ, ಮುಅಲ್ಲಿಂ ದಿನಾಚರಣೆ ಮಹತ್ವದ ಬಗ್ಗೆ ವಿವರಿಸಿದರು. ಸಮಸ್ತ ಕೇರಳ ವಿದ್ಯಾಭ್ಯಾಸ ಬೋರ್ಡ್‌ ತರಬೇತುದಾರ ಜೆ.ಪಿ. ಮಹಮ್ಮದ್‌ ದಾರಿಮಿ ಎದ್ರುತ್ತೂರು ಮಾತನಾಡಿ, ಮುಅಲ್ಲಿಂ ಅತ್ಯಂತ ಗೌರವಯುತವಾದ ಕೆಲಸವಾಗಿದ್ದು, ಮುಅಲ್ಲಿಂಗಳು ಈ ನಿಟ್ಟಿನಲ್ಲಿ ಜವಾಬ್ದಾರಿ ಅರಿತು ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಮುಅಲ್ಲಿಂ ರಫೀಕ್‌ ಮುಸ್ಲಿಯಾರ್‌, ಮಸೀದಿ ಸಮಿತಿ ಉಪಾಧ್ಯಕ್ಷ ಎಸ್‌. ಅಬ್ದುಲ್ ರಹಿಮಾನ್‌, ಕಾರ್ಯದರ್ಶಿ ಜಿ. ಮಹಮ್ಮದ್‌ ರಫೀಕ್‌, ಜತೆ ಕಾರ್ಯದರ್ಶಿ ಅಬ್ದುಲ್ ರಜಾಕ್‌ ಮರ್ವೇಲ್, ಗಂಡಿಬಾಗಿಲು ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಎಸ್‌.ಪಿ. ಖಲಂದರ್‌, ಹೈದರ್‌, ಹಾರಿಸ್‌ ಉಪಸ್ಥಿತರಿದ್ದರು.

ಹಿಮಾಯತುಲ್ ಇಸ್ಲಾಂ ಮದ್ರಸದ ಸದರ್‌ ಮುಅಲ್ಲಿಂ ಮೂಸಾ ಮುಸ್ಲಿಯಾರ್‌ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here