Home Uncategorized ಕಡಬ: ಪ್ರತಿಷ್ಠಾ ವಾರ್ಷಿಕೋತ್ಸವ

ಕಡಬ: ಪ್ರತಿಷ್ಠಾ ವಾರ್ಷಿಕೋತ್ಸವ

1068
0
SHARE

ಕಡಬ : ಇಲ್ಲಿನ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ 7ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಗುರುವಾರ ಜರಗಿತು. ಬೆಳಗ್ಗೆ ಗಣಪತಿ ಹೋಮ, ಚಂಡಿಕಾ ಯಾಗ ಪ್ರಾರಂಭಗೊಂಡು ಪಂಚ ವಿಂಶತಿ ಕಲಶಪೂಜೆ ನೆರವೇರಿತು. ಮಧ್ಯಾಹ್ನ ಚಂಡಿಕಾ ಯಾಗದ ಪೂರ್ಣಾಹುತಿ, ಸುವಾ ಸಿನೀ ಪೂಜೆ, ಶ್ರೀ ದೇವರಿಗೆ ಕಲಶಾಭಿಷೇಕ ನಡೆದ ಬಳಿಕ ಮಹಾಪೂಜೆ, ಪ್ರಸಾದ ವಿತ ರಣೆ, ಅನ್ನಸಂತರ್ಪಣೆ ಜರಗಿತು.

ಶ್ರೀದೇವರಿಗೆ ರಂಗಪೂಜೆ ನೆರವೇರಿತು. ಕಡಬದ ವಿದ್ಯಾನಗರದ ರಾಮ ಭಟ್‌ ಮತ್ತು ಮಕ್ಕಳು ಸೇವಾ ರೂಪದಲ್ಲಿ ಸುಮಾರು 74 ಸಾವಿರ ರೂ. ಮೌಲ್ಯದ ಕಂಚಿನ ಘಂಟೆಯನ್ನು ಶ್ರೀ ದೇವರಿಗೆ ಸಮರ್ಪಿಸಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಸದಸ್ಯರಾದ ನೀಲಾವತಿ ಶಿವರಾಮ, ಶಾಲಿನಿ ಸತೀಶ್‌ ನಾ„ಕ್‌,ಮೋನಪ್ಪ ಕುಂಬಾರ, ತಮ್ಮಯ್ಯ ನಾ„ಕ್‌, ಆನಂದ, ಧರಣೇಂದ್ರ ಜೈನ್‌, ಕಡಬ ವರ್ತಕ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್‌., ರಾಜೇಂದ್ರ ಹೆಗ್ಡೆ ಕಡಬ ಗುತ್ತು, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾ„ಕ್‌ ಜಿನ್ನಪ್ಪ ಸಾಲ್ಯಾನ್‌, ಮೇದಪ್ಪ ಗೌಡ, ನಾರಾಯಣ ಗೌಡ ಅಲುಂಗೂರು ಉಪಸ್ಥಿತರಿದ್ದರು. ದೇಗುಲದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ ಹಾಗೂ ಪ್ರಶಾಂತ್‌ ಕೆದಿಲಾಯ ಪೂಜೆ ವಿಧಿ ವಿಧಾನ ನೆರವೇರಿಸಿದರು.

LEAVE A REPLY

Please enter your comment!
Please enter your name here