ಕಡಬ: ರಾಮಕುಂಜ ಗ್ರಾಮದ ಕೊಂದಪ್ಪಡೆ ಶೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಆಷಾಢ ಅಮವಾಸ್ಯೆಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡರು.
ಐತಿಹಾಸಿಕ ಹಿನ್ನಲೆಯುಳ್ಳ ಹಾಗೂ ಸಂತಾನ ಪ್ರಾಪ್ತಿಗೆ ಹೆಸರುವಾಸಿಯಾಗಿರುವ ಈ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ನೂರಾರು ಭಕ್ತರು ದೇಗುಲದ ಪುಷ್ಕರಿಣಿಯಲ್ಲಿ ಸ್ನಾನ ಮಾಡಿ ದೇಗುಲದಲ್ಲಿ ಸಂತಾನ ಪ್ರಾಪ್ತಿಯ ಹರಕೆಯ ಸಂಕಲ್ಪ ವಿಧಿ ಪೂರೈಸಿದರು.
ಅಭೀಷ್ಟೆ ಈಡೇರಿಸಿಕೊಂಡವರು ಹರಕೆ ಒಪ್ಪಿಸಿದರು. ದೇಗುಲದ ಪ್ರಧಾನ ಅರ್ಚಕ ರಾಮಶಂಕರ ಮುಚ್ಚಿಂತಾಯ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನ ನೆರವೇರಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ಗೋಕುಲ್ ಪಿ.ಎಸ್., ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಟಿ. ನಾರಾಯಣ ಭಟ್ ರಾಮಕುಂಜ, ಸದಸ್ಯ ಪ್ರಕಾಶ್ ಆಚಾರ್ಯ, ಮುಂಬೈ ಪರ್ಲತ್ತಾಯ ಪ್ರತಿಷ್ಠಾನದ ಕಾರ್ಯದರ್ಶಿ ಎನ್. ರವಿರಾಜ್ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.