Home ಧಾರ್ಮಿಕ ಸುದ್ದಿ ಮೇ 8-13: ಅಷ್ಟಬಂಧ ಬ್ರಹ್ಮಕುಂಭಾಭಿಷೇಕ

ಮೇ 8-13: ಅಷ್ಟಬಂಧ ಬ್ರಹ್ಮಕುಂಭಾಭಿಷೇಕ

ನಾಲೂರು ಶ್ರೀ ಶಂಕರ ನಾರಾಯಣ ದೇವಸ್ಥಾನ

1035
0
SHARE

ಕಡಬ: ಕುಟ್ರಾಪಾಡಿ ಗ್ರಾಮದ ನಾಲೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪುನಃಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ಶ್ರೀ ಕಾಮಾಕ್ಷೀ ಶಾರದಾಂಬಾ ಕ್ಷೇತ್ರ ಹೆಬ್ಬೂರು ಶ್ರೀ ಕೋದಂಡಾಶ್ರಮ ಮಠದ ಶ್ರೀ ಮಾಧವಾಶ್ರಮ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಪಾವಂಜೆ ಬ್ರಹ್ಮ ಶ್ರೀ ವಾಗೀಶ ಶಾಸ್ತ್ರಿ ತಂತ್ರಿಗಳ ನೇತೃತ್ವದಲ್ಲಿ ಮೇ 8ರಿಂದ 13ರ ವರೆಗೆ ಜರಗಲಿದೆ.

ಮೇ 8ರಂದು ಬೆಳಗ್ಗೆ ಉಗ್ರಾಣ ಮುಹೂರ್ತ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಹೊರೆ ಕಾಣಿಕೆ ಸಮರ್ಪಣೆ, ಬಳಿಕ ಶ್ರೀ ಕ್ಷೇತ್ರದ ತಂತ್ರಿಗಳ ಹಾಗೂ ಋತ್ವಿಜರ ಸ್ವಾಗತ ನಡೆಯಲಿದೆ. ಮೇ 9ರಂದು ಬೆಳಗ್ಗೆ ವೇದ ಪಾಠಾರಂಭ, ದ್ವಾದಶ ನಾರಿಕೇಳ ಮಹಾಗಣಪತಿ ಹೋಮ, ನವಗ್ರಹ ಶಾಂತಿ, ಮಂಟಪ ಪ್ರವೇಶ, ಕುಂಭೇಶ-ಕರ್ಕರೀ ಸ್ಥಾಪನ, ಅಗ್ನಿಜನನ, ಬಿಂಬ ಶುದ್ಧಿಕಲಶ ಸ್ಥಾಪನ, ಶಯ್ನಾನಿರ್ಮಾಣ, ಬಿಂಬಶುದ್ಧಿ, ಶಯ್ನಾನಯನ, ಸಂಜೆ ಏಕಾದಶವಾರ ಶ್ರೀ ರುದ್ರಪಾರಾಯಣ, ಬಾಲಾ ಲಯದಲ್ಲಿ ಸಂಹಾರ ತತ್ತ್ವ ಹೋಮ, ಪುರಸ್ಥರವಾಗಿ ಜೀವಕಲಶ ಸ್ಥಾಪನ, ಬಾಲಪ್ರತಿಮಾಚಲನ, ಬಿಂಬ- ಪೀಠ- ಬ್ರಹ್ಮಶಿಲಾ ಅಧಿವಾಸ ಕರ್ಮ, ಚಕ್ರಾಬ್ದ ಮಂಡಲ ಪೂಜೆ, ಪ್ರತಿಷ್ಠಾಧಿವಾಸ ಹೋಮಗಳು, ಶಿರಸ್ತತ್ವ ಹೋಮ, ಅಷ್ಟಬಂಧ ಶಕ್ತಿ ಹೋಮ, ಪ್ರಾಸಾಧಿವಾಸ ನಡೆಯಲಿದೆ. ಬಳಿಕ ಹೊರೆ ಕಾಣಿಕೆ ಸಮರ್ಪಣೆ, ಭಜನೆ ನಡೆಯಲಿದೆ. ಸಂಜೆ ವಿನೋದ್‌ ಕುಮಾರ್‌ ಸಾರಥ್ಯದಲ್ಲಿ ಸ್ವರಶ್ರೀ ಮೊಲೊಡೀಸ್‌ ಮರ್ದಾಳ ಇವರಿಂದ ಭಕ್ತಿ ಸಂಗೀತ ನಡೆಯಲಿದೆ.

ಮೇ 10ರಂದು ಬೆಳಗ್ಗೆ ಶಿಖರ ಕಲಶಾಧಿವಾಸ ಹೋಮ, ಪ್ರಾಸಾದ ಪೂಜಾ, ರತ್ನನ್ಯಾಸ, ಮಹಾ ಮೃತ್ಯುಂಜಯ ಹವನ, ಬೆಳಗ್ಗೆ 10.42ಕ್ಕೆ ಕುಂಭ ಲಗ್ನದಲ್ಲಿ ಶ್ರೀ ದೇವರ ಬಿಂಬ ಪ್ರತಿಷ್ಠಾ ಅಷ್ಟಬಂಧ ಸ್ಥಾಪನ, ಜೀವಕಲಶಾಭಿಷೇಕ, ಶಿಖರ ಕಲಶಪ್ರತಿಷ್ಠಾ ಅಭಿಷೇಕ, ಪ್ರಸನ್ನ ಪೂಜಾ ಭದ್ರದೀಪಸ್ಥಾಪನ, ಕವಾಟ ಬಂಧನ, ಸಂಜೆ ಪ್ರಾಯಶ್ಚಿತ್ತ ಹೋಮ, ಶ್ರೀ ಚಂಡೀಪಾರಾಯಣ, ಶ್ರೀ ದುರ್ಗಾಪೂಜೆ, ಶ್ರೀ ಶಾಸ್ತ್ರ ಪ್ರತಿಷ್ಠಾ ಪೂರ್ವಾಂಗ ವಿಧಿ, ಏಕಕೋನ ಪಂಚಾಶತ್‌ ಕಲಶ ಪ್ರತಿಷ್ಠಾ, ಅಧಿವಾಸ ಹೋಮ ನಡೆಯಲಿವೆ. ಸಂಜೆ ಭಜನೆ ಬಳಿಕ ನಾಲೂರು ಗಿರಿವನ ನವರಸ ಗಾನಸಿರಿಯಿಂದ ಭಕ್ತಿ ರಸಮಂಜರಿ ಇದೆ.

ಮೇ 11ರಂದು ಬೆಳಗ್ಗೆ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ. ಸಂಜೆ ಭಜನೆ ಬಳಿಕ ದೇವಕಿ ಕೂಡೂರು ಮತ್ತು ಅಪರ್ಣ ನಿಟಿಲಾಪುರ ಇವರಿಂದ ದಾಸ ಸಂಕೀರ್ತನೆ. ಮೇ 12ರಂದು ಬೆಳಗ್ಗೆ ಶ್ರೀ ಗಣೇಶಾಥರ್ವಶೀರ್ಷ ಹೋಮ(ಸಹಸ್ರಮೋದಕ) ಯಾಗ, ನಾಗಬಿಂಬ ಶುದ್ಧಿ, ಆಶ್ಲೇಷಾ ಬಲಿ, ಮಧ್ಯಾಹ್ನ 12.05ಕ್ಕೆ ಕರ್ಕಾಟಕ ಲಗ್ನದಲ್ಲಿ ಶ್ರೀ ಗಣಪತಿ ಬಿಂಬಪ್ರತಿಷ್ಠಾ, ಕಲಶಾಭಿಷೇಕ, ಪ್ರಸನ್ನ ಪೂಜೆ, ಸಂಜೆ ಅಷ್ಟೋತ್ತರ ಶತಕಲಶ ಸಹಿತ ಬ್ರಹ್ಮಕುಂಭ ಸ್ಥಾಪನ, ಅಧಿವಾಸ ಹೋಮ, ಬೆಳಗ್ಗೆ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ, ಮಧ್ಯಾಹ್ನ ಶ್ರೀ ಕಾಮಾಕ್ಷಿ ಶಾರದಾಂಬಾ ಕ್ಷೇತ್ರ ಹೆಬ್ಬೂರು ಶ್ರೀ ಕೋದಂಡಾಶ್ರಮ ಮಠಾಧೀಶ ಶ್ರೀ ಮಾಧವಾಶ್ರಮ ಸ್ವಾಮೀಜಿ ಅವರಿಗೆ ಸ್ವಾಗತ, ಸಂಜೆ ಭಜನೆ. ಬಳಿಕ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಎನ್‌.ಕೆ. ಜಗನ್ನಿವಾಸ ರಾವ್‌ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಶ್ರೀ ಕೋದಂಡರಾಮ ಮಠದ ಶ್ರೀ ಮಾಧವಾಶ್ರಮ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕೊಕ್ಕಡ ಸ.ಪ.ಪೂ. ಕಾಲೇಜಿನ ಉಪನ್ಯಾಸಕ ವಿಶ್ವನಾಥ ರೈ ಪೆರ್ಲ ಉಪನ್ಯಾಸ ನೀಡಲಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಬಾಲಕೃಷ್ಣ ಗೌಡ ಬಳ್ಳೇರಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಶಾಂಕ ಗೋಖಲೆ ಮಾರ್ಗದಮನೆ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ಜ್ಞಾನೇಶ್‌ ರಾವ್‌ ಮಂಗಳೂರು, ಭಜನ ಮಂಡಳಿಯ ಅಧ್ಯಕ್ಷ ಸುಂದರ ಗೌಡ ನಾಲೂರು ಉಪಸ್ಥಿತರಿರಲಿದ್ದಾರೆ. ಬಳಿಕ ಕಡಬದ ವಿಶ್ವಮೋಹನ ನೃತ್ಯಕಲಾ ಶಾಲೆಯ ವಿದುಷಿ ಮಾನಸಾ ಪಿ. ರೈ, ಶಿಷ್ಯರಿಂದ ಭರತನಾಟ್ಯ ಪ್ರದರ್ಶನವಿದೆ.

ಬೆಳಗ್ಗೆ ಕವಾಟೋದ್ಘಾಟನ, ಪ್ರಾತಃ ಪೂಜೆ, ಶ್ರೀ ಶಂಕರನಾರಾಯಣ ದೇವರಿಗೆ ಶಾಂತಿ ಪ್ರಾಯಶ್ಚಿತ್ತಾದಿ ಕಲಶಾಭಿಷೇಕ, ಪ್ರಾತಃ 6.54ಕ್ಕೆ ವೃಷಭ ಲಗ್ನದಲ್ಲಿ ಬ್ರಹ್ಮಕುಂಭಾಭಿಷೇಕ ನಡೆದು ಅರ್ಚನೆ, ಪ್ರಸನ್ನ ಪೂಜೆ, ಮಂಗಳಾರತಿ, ಅವಸ್ರಾವ ಪ್ರೋಕ್ಷಣ, ಪಂಚಬ್ರಹ್ಮಹವನ, ಪುರುಷಸೂಕ್ತ ಹೋಮ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಉತ್ಸವ ಕರ್ಮ ಸಮರ್ಪಣ, ಮಂತ್ರಾಕ್ಷತೆ, ಶ್ರೀ ಮಾಧವಾಶ್ರಮ ಸ್ವಾಮೀಜಿ ಅವರಿಗೆ ಪಾದಪೂಜೆ ನಡೆಯಲಿದೆ. ಸಂಜೆ ಹೂವಿನ ಪೂಜೆ, ಭಜನೆ ಬಳಿಕ ಡಾ| ವಿದ್ಯಾ ಎಸ್‌. ರಾವ್‌ ಉಡುಪಿ ಹಾಗೂ ತಂಡದಿಂದ ಭಕ್ತಿ ಗಾನಸುಧೆ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಎನ್‌.ಕೆ. ಜಗನ್ನಿವಾಸ ರಾವ್‌ ಹಾಗೂ ಅಧ್ಯಕ್ಷ ಶಶಾಂಕ್‌ ಗೋಖಲೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here