Home ಧಾರ್ಮಿಕ ಸುದ್ದಿ ಕಡಬ ಅಂಗಡಿಮನೆ ದೈವಸ್ಥಾನ ಬ್ರಹ್ಮಕಲಶ, ಪುನಃ ಪ್ರತಿಷ್ಠೆ

ಕಡಬ ಅಂಗಡಿಮನೆ ದೈವಸ್ಥಾನ ಬ್ರಹ್ಮಕಲಶ, ಪುನಃ ಪ್ರತಿಷ್ಠೆ

1400
0
SHARE

ಕಡಬ : ಜೀರ್ಣೋದ್ಧಾರ ಗೊಂಡಿರುವ ಕಡಬ ಅಂಗಡಿಮನೆ ಶ್ರೀ ಮಹಾಮ್ಮಾಯಿ ಶ್ರೀ ಚಾಮುಂಡಿ ಗುಳಿಗ ಪರಿವಾರ ದೈವಗಳ ದೈವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಪುರೋಹಿತ ರಘುರಾಮ ಅಮ್ಮಣ್ಣಾಯ ಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಬುಧವಾರ ಸಂಜೆ ಚಾಲನೆ ದೊರೆಯಿತು.

ಬುಧವಾರ ಸಂಜೆ ಋತ್ವಿಜರ ಆಗಮನ, ಸ್ವಾಗತ, ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ದುರ್ಗಾ ನಮಸ್ಕಾರ, ನೂತನ ಬಿಂಬ ಶುದ್ಧಿ, ಬಿಂಬಾಧಿವಾಸ, ಪ್ರಾಕಾರ ಬಲಿ, ಪ್ರಸಾದ ವಿತರಣೆ ನೆರವೇರಿತು.

ರಾತ್ರಿ ಅಂಗಡಿಮನೆ ಶ್ರೀ ಮಹಾಮ್ಮಾಯಿ ಭಜನ ಮಂಡಳಿಯ ಸದಸ್ಯರಿಂದ ಭಜನೆ, ಬಳಿಕ ಶೃಂಗೇರಿಯ ಶ್ರೀ ಶಾರದಾ ಅಂಧ ಕಲಾವಿದರ ಗಾಯನ ಸಂಘದ ಸದಸ್ಯರಿಂದ ಭಕ್ತಿ ರಸಮಂಜರಿ ಜರಗಿತು. ಅನಂತರ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.

ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಚೋಂಕ್ರ ಅಂಗಡಿಮನೆ, ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಪ್ರಧಾನ ಕಾರ್ಯದರ್ಶಿ ಸುಂದರ ಮಜ್ಜೆಗುಡ್ಡೆ,
ಕೋಶಾಧಿಕಾರಿ ಕಿಶನ್‌ ಕುಮಾರ್‌ ರೈ ಪೆರಿಯಡ್ಕ ಉಪಸ್ಥಿತರಿದ್ದರು.

ಇಂದಿನ ಕಾರ್ಯಕ್ರಮ ಗುರುವಾರ ಬೆಳಗ್ಗೆ ಶ್ರೀ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಕಲಶ ಪ್ರತಿಷ್ಠೆ, ಬ್ರಹ್ಮಕಲಶ ಪೂಜೆ, ಬಳಿಕ ಮೀನ ಲಗ್ನದ ಸುಮುಹೂರ್ತದಲ್ಲಿ ಶ್ರೀ
ಮಹಾಮ್ಮಾಯಿ ಪರಿವಾರ ದೈವಗಳ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಕಡಬ ಶ್ರೀ ದುರ್ಗಾಂಬಿಕಾ ಭಜನ ಮಂಡಳಿಯವರಿಂದ ಭಜನೆ ನಡೆಯಲಿದೆ.

ಪೂರ್ವಾಹ್ನ 10.30ರಿಂದ ಜರಗುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಶಾಸಕ ಎಸ್‌. ಅಂಗಾರ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಧಾರ್ಮಿಕ ಮುಂದಾಳು ಅರುಣ್‌ ಕುಮಾರ್‌ ಜಡೆಮನೆ, ಆದಿ ದ್ರಾವಿಡ ಸಮಾಜದ ಮುಖಂಡ ದೇವದಾಸ್‌ ಕೃಷ್ಣಾಪುರ ಅವರು ಆಗಮಿಸಲಿದ್ದಾರೆ.

LEAVE A REPLY

Please enter your comment!
Please enter your name here