ಬ್ರಹ್ಮಾವರ: ಕಚ್ಚಾರು ಶ್ರೀ ಮಾಲ್ತಿದೇವಿ ಬಬ್ಬುಸ್ವಾಮಿ ಮೂಲ ಕ್ಷೇತ್ರದ ಜಾತ್ರೆ ಜ.18ರಿಂದ 20ರ ವರೆಗೆ ವಿವಿಧ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಜರಗಲಿದೆ.
ಜ.18ರಂದು ಗಣಹೋಮ, ಕಲಶಾಭಿಷೇಕ, ಜ.19ರಂದು ಸಾಮೂಹಿಕ ಅಶ್ಲೇಷ ಬಲಿ, ದೀಪೋತ್ಸವ, ಬಲಿಮೂರ್ತಿ ಉತ್ಸವ, ಗೆಂಡೋತ್ಸವ, ಜ.20ರಂದು ತುಲಾಭಾರ ಸೇವೆ, ಅನ್ನಸಂತರ್ಪಣೆ, ಸಭಾ ಕಾರ್ಯಕ್ರಮ ಜರಗಲಿದೆ.
ಪ್ರತಿಭಾ ಪುರಸ್ಕಾರ
ಜ.20ರ ಮಧ್ಯಾಹ್ನ 2 ಗಂಟೆಗೆ ಜರಗುವ ಪ್ರತಿಭಾ ಪುರಸ್ಕಾರ, ಸಹಾಯಧನ ವಿತರಣೆ ಸಮಾರಂಭವನ್ನು ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಲಿದ್ದು, ದೇಗುಲದ ಅಧ್ಯಕ್ಷ ಗೋಕುಲ್‌ದಾಸ್ ಬಾರ್ಕೂರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಅತಿಥಿಗಳಾಗಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಗುರ್ಮೆ ಸುರೇಶ್ ಶೆಟ್ಟಿ, ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್, ಬೆಳ್ವೆ ವಸಂತ ಕುಮಾರ್ ಶೆಟ್ಟಿ, ತಾ.ಪಂ. ಸದಸ್ಯ ಸುಧೀರ್ ಕುಮಾರ್ ಶೆಟ್ಟಿ ಹಾಗೂ ವಿವಿಧ ಕ್ಷೇತ್ರದ ಗಣ್ಯರು, ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರರು ಭಾಗವಹಿಸಲಿದ್ದಾರೆ.
ಮೂರು ದಿನಗಳ ಕಾಲ ಜರಗುವ ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿ ವಿವಿಧ ರೀತಿಯ ಹರಕೆ ಸಲ್ಲಿಸಲಿದ್ದಾರೆ. ಪ್ರತಿ ದಿನ ಅನ್ನಸಂತರ್ಪಣೆ, ಜಿಲ್ಲೆಯ ಪ್ರಸಿದ್ಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.