ಕಬಕ : ಇಲ್ಲಿನ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ಮಂಗಳವಾರ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅರ್ಧಾಹ ಭಜನೆ, ಸಪರಿವಾರ ಶ್ರೀ ಮಹಾದೇವಿ ದೇವಸ್ಥಾನದ 10ನೇ ಪ್ರತಿಷ್ಠಾ ಮಹೋತ್ಸವವು ವೇ| ಮೂ| ಮಿತ್ತೂರು ಸದಾಶಿವ ಭಟ್ಟರ ಪೌರೋಹಿತ್ಯದಲ್ಲಿ ನಡೆಯಿತು.
ಬೆಳಗ್ಗೆ 7ರಿಂದ ಸಂಕಲ್ಪ, ನವಕ, ನಾಗತಂಬಿಲ, ಗಣಪತಿ ,ಸುಬ್ರಹ್ಮಣ್ಯ, ಶಾಸ್ತಾರ ಸಹಿತ ಶ್ರೀ ಮಹಾದೇವಿ ದೇವರ ಕಲೊಪೋಕ್ತ ಪೂಜೆಗಳು, ಮಹಾ ಗಣಪತಿ ಹೋಮ, ನವಕ ಹೋಮ, ಅಶ್ವತ್ಥ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ರಾತ್ರಿ 7ರಿಂದ ರಂಗ ಪೂಜೆ ಬಳಿಕ ಮಹಾ ಮಂಗಳಾರತಿ, ಪ್ರಸಾದ ವಿತರಣೆಯೊಂದಿಗೆ ಸಮಾರೋಪ ಗೊಂಡಿತು.
ಶ್ರೀ ಅಡ್ಯಲಾಯ ಮತ್ತು ಪರಿವಾರ ದೈವಗಳ ಸೇವಾ ಸಮಿತಿ ಕಬಕ, ಶ್ರೀ ಮಹಾದೇವಿ ಯುವಕ ಮಂಡಲ ಕಬಕ, ಶ್ರೀ ನಾಗ ಮತ್ತು ದೈವ ಸೇವಾ ಸಮಿತಿ ವಿದ್ಯಾಪುರ, ಶ್ರೀ ಚಾಮುಂಡೇಶ್ವರಿ ಯುವ ಬಳಗ ವಿದ್ಯಾಪುರ, ಶ್ರೀ ಮಹಾದೇವಿ ಯುವತಿ ಮಂಡಲ, ಶ್ರೀ ಅಯ್ಯಪ್ಪ ಭಕ್ತ ವೃಂದ, ಶ್ರೀ ಮಹಾದೇವಿ ಮಹಿಳಾ ಭಜನ ಮಂಡಳಿ, ಶ್ರೀ ವೀರಾಂಜನೇಯ ಫ್ರೆಂಡ್ಸ್, ಸಹಾಯ ಸಂಜೀವಿನಿ ಕಬಕ ಉಪಸ್ಥಿತರಿದ್ದರು.